ಕಾರ್ಖಾನೆ ಇಲಾಖೆ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಕೋಟಿ ಮೌಲ್ಯದ ನಗದು, ಆಸ್ತಿ ಪತ್ತೆ

ಕಾರ್ಖಾನೆಗಳ ಇಲಾಖೆ, ಬಾಯ್ಲರ್, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ವಿಭಾಗದ ಉಪ ನಿರ್ದೇಶಕರಾದ ನವನೀತ್ ಮೋಹನ್ ಕೋಟಿ ಮೌಲ್ಯ.....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು:  ಕಾರ್ಖಾನೆಗಳ ಇಲಾಖೆ, ಬಾಯ್ಲರ್, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ವಿಭಾಗದ ಉಪ ನಿರ್ದೇಶಕರಾದ ನವನೀತ್ ಮೋಹನ್ ಕೋಟಿ ಮೌಲ್ಯದ ಅಕ್ರಮ ಆಸ್ತಿ ಹೊಂದಿರುವುದು ಎಸಿಬಿ ದಾಳಿ ವೇಳೆ ಬೆಳಕಿಗೆ ಬಂದಿದೆ. 
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿಯಲ್ಲಿ ಮೋಹನ್ ಅವರಿಗೆ ಸೇರಿದ್ದ ಐದು ಸೈಟ್ ಗಳು, , 15 ಎಕರೆ ಕೃಷಿ ಭೂಮಿ, ಪೆಟ್ರೋಲ್ ಬಂಕ್, 661 ಗ್ರಾಂ ಚಿನ್ನ, 18.278 ಕೆಜಿ ಬೆಳ್ಳಿ, 3.63 ಲಕ್ಷ ನಗದು, ಒಂದು ಕಾರು ಮತ್ತು 37.80 ಲಕ್ಷ ಮೌಲ್ಯದ ಗೃಹಬಳಕೆಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ನವನೀತ್ ಮೋಹನ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com