ಮಾಹಿತಿ ದುರ್ಬಳಕೆ: ಡೇಟಾ ಸಂರಕ್ಷಣ ಮಸೂದೆಗೆ ವಕೀಲರಿಂದಲೇ ವಿರೋಧ

ದೇಶದ ಸಾಮಾನ್ಯ ಜನರ ಗೌಪ್ಯತೆಯನ್ನು ಖಾತರಿಪಡಿಸಿಕೊಳ್ಳಲು ಮಾಹಿತಿ ರಕ್ಷಣಾ ಮಸೂದೆ ಪ್ರಮುಖ ಕಾನೂನಿನ ಅಸ್ತ್ರವಾಗಿದೆಯಾದರೂ ಕೆಲ ವಕೀಲರು ಸೇರಿ ಅನೇಕರು ಇದರ ಕುರಿತಂತೆ ಆಕ್ಷೇಪವೆತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ದೇಶದ ಸಾಮಾನ್ಯ ಜನರ  ಗೌಪ್ಯತೆಯನ್ನು ಖಾತರಿಪಡಿಸಿಕೊಳ್ಳಲು ಮಾಹಿತಿ ರಕ್ಷಣಾ ಮಸೂದೆ ಪ್ರಮುಖ ಕಾನೂನಿನ ಅಸ್ತ್ರವಾಗಿದೆಯಾದರೂ ಕೆಲ ವಕೀಲರು ಸೇರಿ ಅನೇಕರು ಇದರ ಕುರಿತಂತೆ ಆಕ್ಷೇಪವೆತ್ತಿದ್ದಾರೆ.
ಆಧಾರ್ ಮಸುದೆ ಉಳಿಸಿ’ ಘೋಷಣೆಯೊಂದಿಗೆ ಕೆವಲ ಖಾಸಗಿ ವ್ಯಕ್ತಿಗಳ ಡೇತಾವನ್ನು ಸಂಗ್ರಹಿಸಲಾಗುತ್ತಿದೆ.ಸರ್ಕಾರದಲ್ಲಿರುವವರ ನಿಯಂತ್ರಣಕ್ಕೆ ಇದು ವಿಫಲವಾಗಿದೆ ಎಮ್ದು ಅವರು ದೂರಿದ್ದಾರೆ.
ಎಕ್ಸ್ ಪ್ರೆಸ್ ಜತೆ ಮಾತನಾಡಿದ ಮೇಜರ್ ಜನರಲ್ (ನಿವೃತ್ತ) ಸುಧೀರ್ ವೊಂಬಟ್ಕೆರೆ, ಇಂತಹ ಕಾನೂನು ಅಗತ್ಯವಾಗಿದ್ದರೂ ಇದೊಂದೇ ಸಾಕಾಗದು ಎಂದಿದ್ದಾರೆ."ಇದು ಕೇವಲ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ದಾಖಲೆಗಳಿಗಷ್ಟೇ ಅನ್ವಯವಾಗುತ್ತದೆ, ರಾಷ್ಟ್ರೀಯ ಭದ್ರತೆಯ ಬಗ್ಗೆ ಮಾತನಾಡುವುದಿಲ್ಲ. ಹಿಗಾಗಿ ಕೆಲವು ಮಾಹಿತಿಯಗಳ ಗೌಪ್ಯತೆ ರಕ್ಷಣೆಯಾಗದೆ ಹೋದಲ್ಲಿ ರಾಷ್ಟ್ರೀಯ ಭದ್ರತೆಯು ಅಪಾಯಕ್ಕೆ ಸಿಲುಕಲಿದೆ" ಸುಪ್ರೀಂ ಕೋರ್ಟ್ ನಲ್ಲಿ ಆಧಾರ್ ವಿರುದ್ಧ ಅರ್ಜಿ ಸಲ್ಲಿಸಿರುವ ಸುಧೀರ್  ಹೇಳಿದ್ದಾರೆ.
ಮಸೂದೆಯ ಪ್ರಾಥಮಿಕ ಸಮಸ್ಯೆ ಎಂದರೆ  ದತ್ತಾಂಶವು ಆಸ್ತಿ ಎಂಬ ಕಲ್ಪನೆ. ಎನ್ನುವುದಾಗಿ ಡೇಟಾ ಸೆಕ್ಯುರಿಟಿ ತಜ್ಞ ವಿ.ಆನಂದ್ ಅಭಿಪ್ರಾಯಪಟ್ಟಿದ್ದಾರೆ.
ಆಯೋಗಕ್ಕೆ ಡೇಟಾವನ್ನು ಯಾರು ನಿಯಂತ್ರಿಸಬೇಕು ಎನ್ನುವ ಮೂಲಭೂತ ಪ್ರಶ್ನೆ ಇರಬೇಕು.ಡೇಟಾ ನಿಡುವ ವ್ಯಕ್ತಿ ಅದರ ನಿಯಂತ್ರಣದಲ್ಲಿರಬೇಕೆಂದು ಆಯೋಗ ಶಿಫಾರಸು ಮಾಡಬೇಕಿತ್ತು. ಆದರೆ ಇಂತಹಯಾವುದೇ ನಿಬಂಧನೆ ಇಲ್ಲ ಎಂದು , ಅವರು ಹೇಳಿದರು.
"ನಾಗರಿಕರ ಒಪ್ಪಿಗೆ ಇದ್ದು ಅಥವಾ ಇಲ್ಲದೆಹೋದರೂ ಡೇಟಾವನ್ನು ಸಂಗ್ರಹಿಸಲು ಸರ್ಕಾರ ಮಸೂದೆಯಲ್ಲಿ ಅವಕಾಶ ನಿಡಿದೆ.ಮಾಹಿತಿ ಸೋರಿಕೆಗಾಗಿ ಕ್ರಮ ತೆಗೆದುಕೊಳ್ಳಲು ಮಾತ್ರ ಯುಐಡಿಎಐಗೆ ಅಧಿಕಾರ ನೀಡುತ್ತದೆ. ಆದರೆ, ಡೇಟಾ ಸೋರಿಕೆಯಾಗುತ್ತಿದೆ ಎನ್ನುವುದುಅನ್ನು ಎಂದಿನಿಂದಲೂ ನಿರಾಕರಿಸಿಕೊಂಡು ಬರಲಾಗುತ್ತಿದೆ. ಈ ಬಿಲ್ ನಲ್ಲಿ ಕಾನುನು ಕ್ರಮಗಳಷ್ಟೇ ಇದ್ದು ತಾಂತ್ರಿಕ ಪ್ರಶ್ನೆಗಳು ಇಲ್ಲ ಎಂದು ಅವರು ನುಡಿದರು.
ಮಸೂದೆಯನ್ನು ಖಂಡಿಸಿ ಸೈಬರ್ -ಸೆಕ್ಯುರಿಟಿ ತಜ್ಞರ ಗುಂಪೊಂದು ಸರ್ಕಾರಕ್ಕೆ ಓಪನ್ ಲೆಟರ್ ಸಹ ಬರೆದಿದೆ/ತ್ತಾಂಶಗಳ ವಿನಾಯಿತಿ ಸೇರಿದಂತೆ ಮೂರು ಪ್ರಮುಖ ಸಮಸ್ಯೆಗಳನ್ನು ಈ ಪತ್ರದಲ್ಲಿ ಚರ್ಚಿಸಲಾಗಿದೆ. ಮುಂದಿನ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಬಲವಾದ ಗೌಪ್ಯತೆ ಮತ್ತು ಮಾಹಿತಿ ಸಂರಕ್ಷಣೆ ಕಾನೂನು ಜಾರಿಗೆ ಬರಬೇಕು -ಹೆಚ್ಚುತ್ತಿರುವ ಡಿಜಿಟಲ್ ಪ್ರಜಾಪ್ರಭುತ್ವವನ್ನು ರಕ್ಷಿಸುವ ಒಂದು ನಿರ್ಣಾಯಕ ಹೆಜ್ಜೆ ಇದಾಗಬೇಕು" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದಾಗಿಯೂ ಮಸೂದೆಪರವಾಗಿಸಹ ಕೆಲ ಸಂಸ್ಥೆಗಳು ವಾದ ಮಂಡಿಸಿದೆ.ದೇಶದ ನಾಗರಿಕರು ಈಗ ತಮ್ಮ  ವೈಯುಕ್ತಿಕ ಡೇಟಾದ ಸುರಕ್ಷತೆ ಕುರಿತು ಭರವಸೆ ಹೊಂದಬಹುದು.ಸಾರ್ಕ್ ವಲಯ ಹಾಗು ಕಮ್ವಾಲ್ಟ್ ಡೇಟಾ ರಕ್ಷಣೆ ಕಂಪನಿ ಪ್ರಾದೇಶಿಕ  ಉಪಾಧ್ಯಕ್ಷ ರಮೇಶ್ ಮಾಮ್ಗೈನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com