ಕಬ್ಬನ್ ಪಾರ್ಕ್ ಅತ್ಯಾಚಾರ ಪ್ರಕರಣ: ಇಬ್ಬರು ಸೆಕ್ಯುರಿಟಿ ಗಾರ್ಡ್ ಗೆ ಜೀವಾವಧಿ ಶಿಕ್ಷೆ

ಕಬ್ಬನ್ ಪಾರ್ಕ್ ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಕಬ್ಬನ್ ಪಾರ್ಕ್ ಇಬ್ಬರು ಸೆಕ್ಯುರಿಟಿ...
ಅಪರಾಧಿಗಳು
ಅಪರಾಧಿಗಳು
ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಕಬ್ಬನ್ ಪಾರ್ಕ್ ಇಬ್ಬರು ಸೆಕ್ಯುರಿಟಿ ಗಾರ್ಡ್ ಗಳಿಗೆ ಕೋರ್ಟ್ ಸೋಮವಾರ ಜೀವಾವಧಿ(ಸಾಯುವವರೆಗೆ) ಶಿಕ್ಷೆ ವಿಧಿಸಿದೆ.
2015ರ ನವೆಂಬರ್ ನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನಗರದ 54ನೇ ಸಿಸಿಎಚ್ ನ್ಯಾಯಾಲಯ, ಸೆಕ್ಯುರಿಟಿ ಗಾರ್ಡ್ ಗಳಾದ ರಾಜು ಮೇಧಿ(28) ಹಾಗೂ ಬೋಲಿನ್ ದಾಸ್(38)ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ ಸಂತ್ರಸ್ಥ ಮಹಿಳೆ ಎರಡು ಲಕ್ಷ ರುಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಧೀಶೆ ಎಂ.ಲತಾ ಅವರು ಆದೇಶಿಸಿದ್ದಾರೆ.
2015, ನವೆಂಬರ್ 11ರಂದು ತುಮಕೂರಿನ ಮಹಿಳೆಯೊಬ್ಬರು ಕಬ್ಬನ್ ಪಾರ್ಕ್ ನಲ್ಲಿರುವ ಟೆನಿಸ್ ಕ್ಲಬ್ ನ ಸದಸ್ಯತ್ವ ಪಡೆಯಲು ಬೆಂಗಳೂರಿಗೆ ಬಂದಿದ್ದರು. ಮಹಿಳೆ ಟೆನಿಸ್ ಕ್ಲಬ್ ತಲುಪುವ ವೇಳೆಗೆ ಕಚೇರಿಯ ಅವಧಿ ಮುಗಿದು ಹೋಗಿತ್ತು. ಕೆಲ ಕಾಲ ಕ್ಲಬ್ ಎದುರೆ ಕಾಯುತ್ತಿದ್ದ ಮಹಿಳೆಗೆ ಪಾರ್ಕ್ ನಿಂದ ಹೊರ ಹೋಗುವ ದಾರಿ ತೋರಿಸುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com