
ಬೆಂಗಳೂರು: ಪಿಯುಸಿ ನಂತರ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ ಫಲಿತಾಂಶ ಪ್ರಕಟಗೊಂಡಿದೆ.
ಎಂಜಿನಿಯರಿಂಗ್ ನಲ್ಲಿ ವಿಜಯಪುರ ಜಿಲ್ಲೆಯ ಸಿದ್ಧಾರ್ಥ ದೊಡ್ಡಮನಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯ ನಾರಾಯಣ್ ಪೈ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಬೆಂಗಳೂರಿನ ಮಹಿಮಾ ಕೃಷ್ಣ ತೃತೀಯ ಹಾಗೂ ಬಳ್ಳಾರಿಯ ಎಸ್ಆರ್ ಅಪರೂಪ ನಾಲ್ಕನೇ ರ‍್ಯಾಂಕ್ ಗಳಿಸಿದ್ದಾರೆ. ತುಹಿನ್ ಗಿರಿನಾಥ್ ಬೆಂಗಳೂರಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಎಂಜಿನಿಯರಿಂಗ್‌ನಲ್ಲಿ ವಿಜಯಪುರದ ಶ್ರೀಧರ ದೊಡ್ಮನಿ ಪ್ರಥಮ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡದ ನಾರಾಯಣ ಪೈ ದ್ವಿತೀಯ ಸ್ಥಾನ ಪಡೆದಿದ್ದಾರೆ. ಡಿಬೋರ್ಸ್ ಸನ್ಯಾಸಿ 3 ನೇ ಸ್ಥಾನ ಪಡೆದಿದ್ದಾರೆ.
ಬೆಂಗಳೂರಿನ ಹುಡುಗಿ ಅನೀತಾ ಜೇಮ್ಸ್ ಬೆಂಗಳೂರಿಗೆ ಹೆಣ್ಣುಮಕ್ಕಳಲ್ಲಿ ಪ್ರಥಮ ಸ್ಥಾನ ಹಾಗೂ ಎಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೆ 5ನೇ ರ್ಯಾಂಕ್ ಗಳಿಸಿದ್ದಾರೆ.
ಪಶುವೈದ್ಯ ವಿಭಾಗದಲ್ಲಿ ವಿನೀತ್ ಮೆಗುರು ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.ಜೂನ್ 25ರಿಂದ ಮೊದಲ ಹಂತದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಆಗಸ್ಟ್ 18ಕ್ಕೆ ಕೊನೆಯ ಹಂತದ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ.
ಸಚಿವ ಸಂಪುಟ ರಚನೆಯಾಗದಿರುವುದರಿಂದ ವೈದ್ಯಕೀಯ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸುದ್ದಿಗೋಷ್ಠಿ ನಡೆಸಿ ಮಧ್ಯಾಹ್ನ 1 ಗಂಟೆಗೆ ಪ್ರಾಧಿಕಾರದ ಕಚೇರಿಯಲ್ಲಿ ಫಲಿತಾಂಶದ ವಿವರ ಹಾಗೂ ಟಾಪರ್ಸ್ಗಳ ಪಟ್ಟಿ ಬಿಡುಗಡೆ ಮಾಡಿದರು.
ಇಂದು ಅಪರಾಹ್ನ 3 ಗಂಟೆಗೆ ವೆಬ್ ಸೈಟ್ ಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ. ಫಲಿತಾಂಶಕ್ಕೆ http://kea.kar.nic.in, http://cet.kar.nic.in, http://karresults.nic.in ನಲ್ಲಿ ವೀಕ್ಷಿಸಬಹುದು.
ಸಿಇಟಿ ಮೇ 12 ಹಾಗೂ 13 ರಂದು ನಡೆಸಲಾಯಿತು. ಒಟ್ಟು 1,57,580 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಬೆಂಗಳೂರಿನಲ್ಲಿ 73 ಕೇಂದ್ರಗಳು ಸೇರಿದಂತೆ ರಾಜ್ಯಾದ್ಯಂತ 343 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು ಇದರಲ್ಲಿ 82079 ವಿದ್ಯಾ ರ್ಥಿಗಳಿದ್ದರೆ, 75501 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು.
ರ್ಯಾಂಕ್ ಪಡೆದವರ ವಿವರ ಇಂತಿದೆ:
ಇಂಜಿನಿಯರಿಂಗ್:
1. ಶ್ರೀಧರ್ ದೊಡ್ಡಮನಿ, ವಿಜಯಪುರ.
2. ನಾರಾಯಣ್ ಪೈ, ದಕ್ಷಿಣ ಕನ್ನಡ.
3. ದೇಬರಾಸೋ ಸನ್ಯಾಸಿ, ಬಳ್ಳಾರಿ.
4. ತುಹಿನ್ ಗಿರಿನಾಥ್, ಬೆಂಗಳೂರು.
5. ಅನಿತಾ ಜೇಮ್ಸ್, ಬೆಂಗಳೂರು.
ಬಿಎಸ್ಸಿ ಅಗ್ರಿಕಲ್ಚರ್ :
1. ಶ್ರೀಧರ್ ದೊಡ್ಡಮನಿ, ವಿಜಯಪುರ.
2. ಸಾಯಿಕುಮಾರ್ ಆರ್.ಸಾಧುನವರ್, ಹುಬ್ಬಳ್ಳಿ.
3. ಮಹಿಮ ಕೃಷ್ಣ, ಬೆಂಗಳೂರು.
ಪಶುಸಂಗೋಪನೆ:
1. ವಿನೀತ್ ನೇಗುರ್ಲ, ಮಂಗಳೂರು.
2. ಎಸ್.ಆರ್.ಅಪೂರ್ವ, ಬಳ್ಳಾರಿ.
3. ಆದಿತ್ಯ ಚಿದಾನಂದ್ ಈಶ್ವರ್ಲಾ, ಬೆಂಗಳೂರು.
ಡಿ ಫಾರ್ಮಾ:
1. ತುಹಿನ್ ಗಿರಿನಾಥ್, ಬೆಂಗಳೂರು.
2. ಅನಿತಾ ಜೇಮ್ಸ್, ಬೆಂಗಳೂರು.
3. ಎಂ.ಯೋಗೀಶ್ ಮಹದೇವ ರೆಡ್ಡಿ, ಬೆಂಗಳೂರು.
ವಿದ್ಯಾರ್ಥಿಗಳ ದಾಖಲೆ ಪರಿಶೀಲನೆ ಇದೇ ತಿಂಗಳ 5ರಿಂದ ರಾಜ್ಯದ 16 ಕೇಂದ್ರಗಳಲ್ಲಿ ಆರಂಭವಾಗಲಿದೆ.
Advertisement