ಸಿಇಟಿ ಫಲಿತಾಂಶ: ದಾಖಲೆಗಳ ಪರಿಶೀಲನೆ ಜೂನ್ 5ಕ್ಕೆ ಆರಂಭ

ಸಿಇಟಿ ಫಲಿತಾಂಶ ಘೋಷಣೆಯ ನಂತರ ವೃತ್ತಿಪರ ಕೋರ್ಸ್ ಗಳ ಸೀಟು ಹಂಚಿಕೆಗೆ ದಾಖಲೆಗಳ ...
ಸಿಇಟಿ ಫಲಿತಾಂಶದಲ್ಲಿ ರ್ಯಾಂಕ್ ಗಳಿಸಿದ ತುಹಿನ್ ಗಿರಿನಾಥ್ ಪೋಷಕರೊಂದಿಗೆ ಸಂತಸದಲ್ಲಿರುವುದು
ಸಿಇಟಿ ಫಲಿತಾಂಶದಲ್ಲಿ ರ್ಯಾಂಕ್ ಗಳಿಸಿದ ತುಹಿನ್ ಗಿರಿನಾಥ್ ಪೋಷಕರೊಂದಿಗೆ ಸಂತಸದಲ್ಲಿರುವುದು

ಬೆಂಗಳೂರು: ಸಿಇಟಿ ಫಲಿತಾಂಶ ಘೋಷಣೆಯ ನಂತರ ವೃತ್ತಿಪರ ಕೋರ್ಸ್ ಗಳ ಸೀಟು ಹಂಚಿಕೆಗೆ ದಾಖಲೆಗಳ ಪರಿಶೀಲನೆ ಜೂನ್ 5ರಿಂದ ಆರಂಭವಾಗಲಿದೆ.

ರಾಜ್ಯಾದ್ಯಂತ 16 ಕೇಂದ್ರಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯಲಿದ್ದು ವಿದ್ಯಾರ್ಥಿಗಳು ನಿಗದಿತ ಕೇಂದ್ರಗಳಲ್ಲಿ ತಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಬಹುದು. ಆನ್ ಲೈನ್ ಮೂಲಕ ಆದಾಯ ದಾಖಲೆಗಳನ್ನು ಪರಿಶೀಲನೆ ಮಾಡುವ ಅವಕಾಶ ಕೂಡ ಇದೆ. ಇಡೀ ವೃತ್ತಿಪರ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ಆಗಸ್ಟ್ 18ಕ್ಕೆ ಮುಕ್ತಾಯವಾಗಲಿದೆ.

ಈ ಮಧ್ಯೆ ಮೆಡಿಕಲ್ ಮತ್ತು ಡೆಂಟಲ್ ಕಲಿಯಲು ಇಚ್ಛಿಸುವ ಅಭ್ಯರ್ಥಿಗಳು ಮತ್ತು ಭಾರತೀಯ ವೈದ್ಯಕೀಯ ಮತ್ತು ಆಯುರ್ವೇದ ವ್ಯವಸ್ಥೆ ಕೋರ್ಸ್ ಗಳಿಗೆ ಪ್ರವೇಶ ಪಡೆಯಲಿಚ್ಛಿಸುವವರು ನೀಟ್ ಪರೀಕ್ಷೆಯ ಫಲಿತಾಂಶದವರೆಗೆ ಕಾಯಬೇಕಾಗುತ್ತದೆ. ಆರ್ಕಿಟೆಕ್ಚರ್ ಕೋರ್ಸ್ ಗಳಿಗೆ ಪ್ರವೇಶ ಬಯಸುವವರು ನಾಟಾದ ಫಲಿತಾಂಶಕ್ಕೆ ಕಾಯಬೇಕಾಗುತ್ತದೆ.

ನೀಟ್ ಫಲಿತಾಂಶ ಬರಬೇಕಿರುವುದರಿಂದ ಸಾಧ್ಯವಾದಷ್ಟು ಕೌನ್ಸೆಲಿಂಗ್ ಅವಧಿಯನ್ನು ಮುಂದಕ್ಕೆ ಹಾಕಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಲಿದೆ. ನೀಟ್ ಫಲಿತಾಂಶದ ಆಧಾರದ ಮೇಲೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೌನ್ಸೆಲಿಂಗ್ ನ ಮೊದಲ ಮತ್ತು ದ್ವಿತೀಯ ಸುತ್ತನ್ನು ಮುಗಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ ಮಂಜುಳಾ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ನಿಗದಿತ ವೇಳಾಪಟ್ಟಿ ಪ್ರಕಾರ, ಮೆಡಿಕನ್ ಕೌನ್ಸೆಲಿಂಗ್ ನ ಮೊದಲ ಸುತ್ತನ್ನು ಜೂನ್ 25ರಿಂದ ಜುಲೈ 5ರೊಳಗೆ ಮತ್ತು ಇಡೀ ವೈದ್ಯಕೀಯ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಆಗಸ್ಟ್ 18ರೊಳಗೆ ಮುಗಿಸಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com