ಹಸು ಮಾರಾಟಗಾರನ ಸಾವು: ಹಿರಿಯಡ್ಕ ಸಬ್ ಇನ್ಸ್‌ಪೆಕ್ಟರ್ ಬಂಧನ

ಹಸುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೃದ್ಧನ ಶಂಕಾಸ್ಪದ ಸಾವಿನ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ಹಿರಿಯಡ್ಕ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅನ್ನು ಬಂಧಿಸಿದ್ದಾರೆ...
ಗೋವುಗಳು
ಗೋವುಗಳು
Updated on
ಉಡುಪಿ: ಹಸುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೃದ್ಧನ ಶಂಕಾಸ್ಪದ ಸಾವಿನ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ಹಿರಿಯಡ್ಕ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. 
ಮಂಗಳೂರಿನ ಜೋಗಟ್ಟೆಯ ಹಸಿನಬ್ಬ ಸಾವಿನ ಹಿನ್ನೆಲೆಯಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಡಿ.ಎನ್.ಕುಮಾರ್ ಅವರನ್ನು ವಜಾಗೊಳಿಸಿದ್ದು ಇದೀಗ ಅವರನ್ನು ಬಂಧಿಸಲಾಗಿದೆ. ಹಸನಬ್ಬನ ಶವ ಪೆರ್ಡೂರು ಸಮೀಪ ಕಳೆದ ಗುರುವಾರ ಸಿಕ್ಕಿತ್ತು. ಇದೊಂದು ಕೊಲೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದರು.
ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಕುಮಾರ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಪೊಲೀಸ್ ಸಿಬ್ಬಂದಿ ಸೇವೆಯಿಂದ ವಜಾಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಬುಧವಾರ ನಸುಕಿನ ಜಾವ ಹಸನಬ್ಬ ಮೂವರು ಸಹಚರರೊಂದಿಗೆ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಹಿಡಿದಿದ್ದಾರೆ. ಉಳಿದ ಮೂವರು ತಪ್ಪಿಸಿಕೊಂಡರು. ಮರುದಿನ ಹಸನಬ್ಬ ಶವವಾಗಿ ಪತ್ತೆಯಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com