ನಮ್ಮದು ಸಮ್ಮಿಶ್ರ ಸರ್ಕಾರ, ಎಸಿಬಿ ವಿಸರ್ಜನೆ ಬಗ್ಗೆ ನನ್ನೊಬ್ಬನ ನಿರ್ಧಾರ ಸಾಧ್ಯವಿಲ್ಲ: ಕುಮಾರಸ್ವಾಮಿ

ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿರುವ ಕಾರಣದಿಂದ ಭ್ರಷ್ಠಾಚಾರ ನಿಗ್ರಹ ದಳ(ಎಸಿಬಿ)ಯನ್ನು ವಿಸರ್ಜಿಸುವ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಕುಮಾರಸ್ವಾಮಿ
ಕುಮಾರಸ್ವಾಮಿ
ಬೆಂಗಳೂರು: ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿರುವ ಕಾರಣದಿಂದ ಭ್ರಷ್ಠಾಚಾರ ನಿಗ್ರಹ ದಳ(ಎಸಿಬಿ)ಯನ್ನು ವಿಸರ್ಜಿಸುವ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಚುನಾವಣೆಗೆ ಮುನ್ನ ಪಕ್ಷದ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದಂತೆ ಎಸಿಬಿಯನ್ನು ವಿಸರ್ಜಿಸಲು ಈಗ ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.
ಲೋಕಾಯುಕ್ತ ಮಾಜಿ ನ್ಯಾಯಮೂರ್ತಿ ಸಂತೋಷ್ ಹೆಗಡೆ ಸೇರಿದಂತೆ ಅನೇಕ ಭ್ರಷ್ಠಾಚಾರ ವಿರೋಧಿ ಹೋರಾಟಗಾರರೌ ಮುಖ್ಯಮಂತ್ರಿಗಳು ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಮ್ಮದೇ ಸ್ವತಂತ್ರ ಸರ್ಕಾರವಾಗಿದ್ದರೆ ನಾನು ಈ ಕುರಿತಂತೆ ಸ್ವಂತ ನಿರ್ಧಾರ ತೆಗೆದುಕೊಳ್ಳಬಹುದು, ಆದರೆ ಇದು ಸಮ್ಮಿಶ್ರ ಸರ್ಕಾರ ನಾನೇನು ಮಾಡಬೇಕಾದರೂ ಎಲ್ಲರೊಡನೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು" ಸುದ್ದಿಗಾರರೊಡನೆ ಮಾತನಾಡಿದ ಕುಮಾರಸ್ವಾಮಿ ಹೇಳಿದ್ದಾರೆ.
ಎಸಿಬಿ ವಿಸರ್ಜಿಸಿ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ಸಿಗುವಂತೆ ಮಾಡುವುದಾಗಿ ಚುನಾವಣೆ ಪೂರ್ವದಲ್ಲಿ ಕುಮಾರಸ್ವಾಮಿ ಜನತೆಗೆ ಭರವಸೆ ನೀಡಿದ್ದರು."ನೀವು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದಾದರೆ ನೀವೇಕೆ ಭರವಸೆಗಳನ್ನು ನೀಡಿದ್ದಿರಿ?"  ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪ್ರಶ್ನಿಸಿದ್ದಾರೆ.
"ಕೇವಲ ರಾಜ್ಯ ಸರ್ಕಾರವಷ್ಟೇ ಅಲ್ಲ, ಕೇಂದ್ರ ಸರ್ಕಾರ ಸಹ ಲೋಕಾಯುಕ್ತ ಅಥವಾ ಲೋಕಪಾಲ್ ನಂತಹಾ ಸಂಸ್ಥೆಗಳಿಗೆ ಪರಮಾಧಿಕಾರ ನೀಡಲು ಹಿಂದೇಟು ಹಾಕುತ್ತದೆ. ಹಾಗೇನಾದರೂ ನೀಡಿದ್ದರೆ ಅವರೇನು ಮಾಡಲಿದ್ದಾರೆ ಎನ್ನುವುದನ್ನು ಆ ಸಂಸ್ಥೆಗಳೇ ಜಗಜ್ಜಾಹೀರು ಮಾಡಲಿದೆ" ಸಂತೋಷ್ ಹೆಗ್ಡೆ  ಹೇಳಿದ್ದಾರೆ.
"ಉನ್ನತ ಅಧಿಕಾರಿಗಳು, ರಾಜಕಾರಣಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಎಸಿಬಿ ಮತ್ತೆ ವಿಧಾನಸೌಧದಲ್ಲಿರುವ ಅದೇ ರಾಜಕಾರಣಿಗಳ ಅನುಮತಿ ಪಡೆಯಬೇಕಿದೆ, ಹೀಗಿರುವಾಗ ಎಸಿಬಿ ಹೇಗೆ ಸ್ವತಂತ್ರ ಸ್ವಾಯತ್ತ ಸಂಸ್ಥೆಯಾಗಲು ಸಾಧ್ಯ?" ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕೃಷಿ ಸಾಲದ ಮನ್ನಾ ನಂತರ ಕುಮಾರಸ್ವಾಮಿ ನಾವು ಸಮ್ಮಿಶ್ರ ಸರ್ಕಾರದಲ್ಲಿರುವುದರಿಂದ ಯಾವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದು ಎಂದು ಮುಖ್ಯಮಂತ್ರಿಗಳು ಇದೀಗ ಎರಡನೇ ಬಾರಿ ಒಪ್ಪಿಕೊಂಡಿಉದ್ದಾರೆ.
ಕಸ್ತೂರಿರಂಗನ್-ಕುಮಾರಸ್ವಾಮಿ ಭೇಟಿ
ಇದಕ್ಕೂ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಖ್ಯಾತ ವಿಜ್ಞಾನಿ ಡಾ. ಕೆ. ಕಸ್ತೂರಿರಂಗನ್ ಅವರನ್ನು ಭೇಟಿ ಮಾಡಿದರು ಅವರು ಮುಂದಿನ ಬಜೆಟ್ ನಲ್ಲಿ ಕರ್ನಾಟಕದ ಜ್ಞಾನ ಆಯೋಗ, ನೀಡಿದ ಶಿಫಾರಸ್ ಜಾರಿಯ ಕುರಿತು ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com