ನಾಟಕದಲ್ಲಿ ಕೂಡ ಕರ್ನಾಟಕ ರಾಜಕೀಯ ಮತ್ತು ಲಿಂಗಾಯತ ಧರ್ಮ ವಿಚಾರಗಳ ಚರ್ಚೆ!

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಧರ್ಮದ ವಿಚಾರ ಪ್ರಮುಖ ಪಾತ್ರ ...
ತಲೆದಂಡ ನಾಟಕದ ದೃಶ್ಯ
ತಲೆದಂಡ ನಾಟಕದ ದೃಶ್ಯ

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಧರ್ಮದ ವಿಚಾರ ಮತ್ತು ಜಾತಿ ರಾಜಕೀಯ ಪ್ರಮುಖ ಪಾತ್ರ ವಹಿಸಿರುವ ಸಂದರ್ಭದಲ್ಲಿ, ಬೆಂಗಳೂರು ಮೂಲದ ರಂಗಸಿರಿ ನಾಟಕ ತಂಡ ಈ ವಾರಾಂತ್ಯ ತಲೆದಂಡ ನಾಟಕ ಪ್ರದರ್ಶನ ಮಾಡಲಿದೆ. ಅದರಲ್ಲಿ ಕರ್ನಾಟಕ ರಾಜಕೀಯದ ಲಿಂಗಾಯತ ಧರ್ಮ ಮತ್ತು ಜಾತಿ ರಾಜಕೀಯವೇ ಪ್ರಮುಖ ಸಂಭಾಷಣೆಯ ಭಾಗವಾಗಲಿದೆ.

ತಲೆದಂಡ ನಾಟಕವನ್ನು ಬರೆದವರು ಗಿರೀಶ್ ಕಾರ್ನಾಡ್ ಮತ್ತು ಈ ನಾಟಕವನ್ನು ಸಂದೀಪ್ ಪೈ ನಿರ್ದೇಶಿಸುತ್ತಿದ್ದಾರೆ. ಕಳೆದ ತಿಂಗಳು 24ರಂದು ಮೊದಲ ಬಾರಿಗೆ ನಗರದಲ್ಲಿ ಈ ನಾಟಕ ಪ್ರದರ್ಶನಗೊಂಡಿತ್ತು. ಅದು ಗಿರೀಶ್ ಕಾರ್ನಾಡ್ ಅವರ 80ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ನಾಲ್ಕು ದಿನಗಳ ಕಾರ್ನಾಡ್ ನಾಟಕೋತ್ಸವ ಆಯೋಜಿಸಲಾಗಿತ್ತು.

12ನೇ ಶತಮಾನದ ಲಿಂಗಾಯತ ತತ್ವಜ್ಞಾನಿ ಬಸವಣ್ಣನವರ ಸಮಾಜ ಸುಧಾರಣೆ, ಆಡಳಿತ ವೈಖರಿ ಮತ್ತು ಲಿಂಗಾಯತ ತತ್ವಗಳ ಬಗ್ಗೆ ನಾಟಕದಲ್ಲಿ ತೋರಿಸಲಾಗಿದೆ. ಶರಣ ಚಳವಳಿಯ ಆರಂಭ, ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸಮಾನತೆ ವಿರುದ್ಧ ನಡೆಯುವ ಹೋರಾಟಗಳ ಬಗ್ಗೆ ತೋರಿಸಲಾಗಿದೆ.

12ನೇ ಶತಮಾನದ ವ್ಯವಸ್ಥೆಯ ವಿಷಯ ತಲೆದಂಡ ನಾಟಕದಲ್ಲಿ ಇದ್ದರೂ ಕೂಡ ನಾಟಕದ ಸಾಮಾಜಿಕ-ರಾಜಕೀಯ ವಿಷಯಗಳು ಇಂದಿಗೆ ಕೂಡ ಪ್ರಸ್ತುತವಾಗಿದೆ. ನಾಟಕದಲ್ಲಿ ಪ್ರಮುಖ ಬಂಡಾಯದ ಪಾತ್ರ ವಹಿಸುತ್ತಿರುವ ಹರ್ಷಿಕ್ ಕೌಶಿಕ್, ನಾಟಕವನ್ನು ಮಾಡುತ್ತಾ ಹೋದಂತೆ ನಮಗೆ ಅದರಲ್ಲಿನ ವಿಷಯ ಇಂದಿನ ಸಮಾಜಕ್ಕೆ ಕೂಡ ಪ್ರಸ್ತುತ ಎನ್ನಿಸಿತು. ಇಂದಿಗೆ ಸಹ ಸಮಾಜದಲ್ಲಿ ಜಾತಿ ವ್ಯವಸ್ಥೆ ಎಷ್ಟು ಭದ್ರವಾಗಿ ನೆಲೆಯೂರಿದೆ ಎಂದು ನಮಗೆಲ್ಲರಿಗೂ ಗೊತ್ತಿದೆ. ಅದು ರಾಜಕೀಯ ವ್ಯವಸ್ಥೆ ಮೇಲೆ ಗಾಢ ಪರಿಣಾಮ ಬೀರುತ್ತದೆ. ಜಾತಿ ವ್ಯವಸ್ಥೆ ನಾವು ಕುಡಿಯುವ ನೀರು, ಜೀವಿಸುವ ನೆಲದ ಮೇಲೆ ಇದೆ ಎನ್ನುತ್ತಾರೆ ಅವರು.

ತಲೆದಂಡ ನಾಟಕ ನಾಳೆ ಭಾನುವಾರ ಸಂಜೆ 7 ಗಂಟೆಗೆ ಜೆ ಸಿ ರಸ್ತೆಯ ಎಡಿಎ ರಂಗಮಂದಿರದಲ್ಲಿ ಪ್ರದರ್ಶನ ಕಾಣಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com