ಪ್ರತ್ಯೇಕ ಲಿಂಗಾಯತ ಧರ್ಮ: ಕೇಂದ್ರದ ನಿರ್ಧಾರಕ್ಕೆ ಶಾಮನೂರು ಶಿವಶಂಕರಪ್ಪ ಸ್ವಾಗತ

ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಶಾಸಕರಾದ ಶಾಮನೂರು ಶಿವಶಂಕರಪ್ಪ ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತ ರಾಜ್ಯದ ಬೇಡಿಕೆಯನ್ನು ತಿರಸ್ಕರಿಸಿದ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ
ದಾವಣಗೆರೆ: ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಶಾಸಕರಾದ ಶಾಮನೂರು ಶಿವಶಂಕರಪ್ಪ ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತ ರಾಜ್ಯದ ಬೇಡಿಕೆಯನ್ನು ತಿರಸ್ಕರಿಸಿದ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಲಿಂಗಾಯತರು ಹಾಗೂ ವೀರಶೈವ ಇಬ್ಬರೂ ಒಂದೇ. ಇವರನ್ನು ಬೇರೆಯೆಂದು ಬಿಂಬಿಸಿ ಲಿಂಗಾಯತ ಪ್ರತ್ಯೇಕ ಧರ್ಮ ಮಾಡ ಹೊರಟಿದ್ದದ್ದು ದುರಂತ. ಇದೀಗ ಕೇಂದ್ರ ಸರ್ಕಾರ ಪ್ರತ್ಯೇಕ ಧರ್ಮ ಬೇಡಿಕೆ ತಳ್ಳಿ ಹಾಕಿರುವುದು ಉತ್ತಮ ಕ್ರಮ ಎಂದು ಅವರು ಹೇಳಿದ್ದಾರೆ.
ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯಲ್ಲಿರುವ  ನಿವೃತ್ತ ಐಎಎಸ್ ಅಧಿಕಾರಿಯ ಎಸ್.ಎಂ.ಜಮಾದಾರ್ ಅವರ ಕುರಿತು ಮಾತನಾಡಿದ ಶಿವಶಂಕರಪ್ಪ " ಅವರು, ಐಎಎಸ್ ಅಧಿಕಾರಿಯಾಗಿದ್ದಾಗ ಸಮಾಜಕ್ಕೆ ಒಳ್ಳೆಯದನ್ನು ಮಾಡಲಿಲ್ಲ. ಈಗ ನನಗೆ ಸಮಾಜಕ್ಕೆ ಒಳಿತು ಮಾಡಿ ಎಂದು ಹೇಳಲು ಬರುತ್ತಾರೆ. ನನಗೆ ಬುದ್ದಿ ಹೇಳಲು ಅವರು ಯಾವ ನೈತಿಕ ಹಕ್ಕನ್ನೂ ಹೊಂದಿಲ್ಲ"  ಎಂದರು.
"ಸಮಾಜಕ್ಕೆ ಒಳಿತಾಗುವ ಸಲುವಾಗಿ ನಾನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ನಡುವೆ ಮಾತುಕತೆ ನಡೆಸುವ ನಿರ್ಧಾರದ ಪರ ನಿಲ್ಲುತ್ತೇನೆ" ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com