ಮಹದಾಯಿ ವಿವಾದ : ಪ್ರಧಾನಿ ಮೋದಿ ಭೇಟಿಗಾಗಿ ದೆಹಲಿಗೆ ರೈತ ನಿಯೋಗ ಪ್ರಯಾಣ

ಕಳಸಾ ಬಂಡೂರಿ ಹಾಗೂ ಮಹದಾಯಿ ನಾಲಾ ವಿವಾದ ಪರಿಹಾರಕ್ಕೆ ಪ್ರಧಾನಿ ನರೇಂದ್ರಮೋದಿ ಭೇಟಿ ಹಿನ್ನೆಲೆಯಲ್ಲಿ ರೈತ ನಿಯೋಗವೊಂದು ದೆಹಲಿಗೆ ಪ್ರಯಾಣ ಬೆಳೆಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಕಳಸಾ ಬಂಡೂರಿ ಹಾಗೂ ಮಹದಾಯಿ ನಾಲಾ ವಿವಾದ ಪರಿಹಾರಕ್ಕೆ  ಪ್ರಧಾನಿ ನರೇಂದ್ರಮೋದಿ ಭೇಟಿ ಹಿನ್ನೆಲೆಯಲ್ಲಿ ರೈತ ನಿಯೋಗವೊಂದು ದೆಹಲಿಗೆ  ಪ್ರಯಾಣ ಬೆಳೆಸಿದೆ.

ಪ್ರಧಾನಮಂತ್ರಿಗಳಿಂದ ರೈತರಿಗೆ ಬುಲಾವ್ ಹಿನ್ನಲೆ ಪ್ರಧಾನಿ ಮೋದಿಯ ಭೇಟಿಗೆ ರೈತರು ಸಿದ್ಧವಾಗಿದ್ದು,   14 ಅಥವಾ 15 ರಂದು ಪ್ರಧಾನಿ ಮೋದಿಯವರನ್ನ ರೈತರ‌ ನಿಯೋಗ ಭೇಟಿಯಾಗಲಿದೆ. ಇದೇ ವೇಳೆ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೂ ರೈತ ನಿಯೋಗ ಮಾತುಕತೆ ನಡೆಸಲಿದೆ.

ನಿವೃತ್ತ ನ್ಯಾಯಮೂರ್ತಿ ಎನ್. ವೆಂಕಟಾಚಲಯ್ಯ ನೇತೃತ್ವದಲ್ಲಿ ರಾಜ್ಯದ ರೈತರ‌ ನಿಯೋಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದೆ. ಬೆಂಗಳೂರಿನ ಸಹ್ಯಾದ್ರಿ ಜನ-ಜಲ ಸೊಸೈಟಿ ಹಾಗೂ ಸಹಯೋಗ, ಮಹದಾಯಿ ಮಹಾವೇದಿಕೆ ಸಹಯೋಗದಲ್ಲಿ ಈ ಭೇಟಿ ನಡೆಯಲಿದೆ ಎಂದು ತಿಳಿದುಬಂದಿದೆ.

ಹುಬ್ಬಳ್ಳಿ, ಧಾರವಾಡ, ರಾಮದುರ್ಗ, ನರಗುಂದ ಸೇರಿದಂತೆ ರಾಜ್ಯದ 23 ಜನ ರೈತರು ದಿಲ್ಲಿಗೆ ತೆರಳಲಿದ್ದಾರೆ. ಇಂದು ಹುಬ್ಬಳ್ಳಿಯಿಂದ ಬೆಂಗಳೂರಿಗೆ ರೈತರು ಪ್ರಯಾಣ ಬೆಳೆಸಿದ್ದು, ನಾಳೆ ಬೆಂಗಳೂರಿನಿಂದ ವಿಮಾನದ ಮೂಲಕ ದಿಲ್ಲಿಗೆ ತೆರಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com