ಕೇಂದ್ರದಿಂದ ಕುಡಿಯುವ ನೀರಿನ ಅನುದಾನ ಇಳಿಕೆ: ಕೃಷ್ಣ ಬೈರೇಗೌಡ ಅಸಮಾಧಾನ

ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಶೇ.50ರಷ್ಟು ಅನುದಾನವನ್ನು ಕೇವಲ ಶೇ.12ಕ್ಕೆ ಇಳಿಸಿದೆ ...
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ

ಬೆಂಗಳೂರು: ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಶೇ.50ರಷ್ಟು ಅನುದಾನವನ್ನು ಕೇವಲ ಶೇ.12ಕ್ಕೆ ಇಳಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ

ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ವಿಧಾನಸೌಧದಲ್ಲಿ ಮಂಗಳವಾರ ಮಾತನಾಡಿ,''ಕೇಂದ್ರ ಸರಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ.  2013 ರಲ್ಲಿ ಕುಡಿಯುವ ನೀರಿನ ಸಂಬಂಧ ಕೇಂದ್ರ ಮತ್ತು ರಾಜ್ಯಗಳು 50:50 ಸೂತ್ರದಡಿ ಅನುದಾನ ಭರಿಸುತ್ತಿದ್ದವು. ಈಗ ಇದು 12:88 ಕ್ಕೆ ಬಂದು ನಿಂತಿದೆ. 2017-18 ರಲ್ಲಿ ರಾಜ್ಯ ಸರಕಾರ ಈ ಉದ್ದೇಶಕ್ಕೆ 2,594 ಕೋಟಿ ರೂ. ಖರ್ಚು ಮಾಡಿದೆ ಎಂದು ಹೇಳಿದರು.
3 ವರ್ಷದ ಹಿಂದೆ ಕೇಂದ್ರ, ರಾಜ್ಯ ಶೇ.50ರಷ್ಟು ಇತ್ತು. ಆದರೆ ಪ್ರಸ್ತುತ ಕೇಂದ್ರ ಶೇ.12, ರಾಜ್ಯ ಶೇ.88ರಷ್ಟು ಅನುದಾನ ವ್ಯತ್ಯಾಸವಾಗಿದೆ ಎಂದರು. ಮೋದಿ ಸರ್ಕಾರಕ್ಕೆ 4 ವರ್ಷ : ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು ಉದ್ಯೋಗ ಖಾತ್ರಿ ಬಾಬ್ತು 1050 ಕೋಟಿ ರೂ. ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ, ರಾಜ್ಯ ಸರ್ಕಾರದ ಹಣ ವಾಪಸ್ ಕೊಡಬೇಕಿದೆ. ಕೇಂದ್ರ ಸರ್ಕಾರ ಸಾಲದಲ್ಲಿದೆ ಎಂದರು. ಆಡಳಿತ ವ್ಯವಸ್ಥೆ 20 ವರ್ಷದಿಂದ ಕುಸಿದಿದೆ ಅದರ ಸುಧಾರಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ತಿಳಿಯಲು ಲೈವ್‌ ವ್ಯವಸ್ಥೆ ಮಾಡಲಾಗುವುದು. ಮಳೆಯಿಂದ ಹಾಳಾಗಿರುವ ಗ್ರಾಮೀಣ ರಸ್ತೆಗಳ ದುರಸ್ತಿಗೂ ಸೂಚಿಸಲಾಗಿದೆ,'' ಎಂದರು, ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಪದೇ ಪದೇ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನಾವಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com