3 ಮನೆಗಳಿಂದ ಗೌರಿ ಲಂಕೇಶ್ ಹತ್ಯೆಗೆ ಕಾರ್ಯಾಚರಣೆ: 21 ಮೊಬೈಲ್ ಬಳಸಿದ್ದ ಅಮೋಲ್ ಕಾಳೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಅಮೋಲ್ ಕಾಳೆ ಅಲಿಯಾಸ್ ಬಾಯ್ ಸಾಬ್, ಮತ್ತೊಬ್ಬ ಆಱೋಪಿ ಪರಶುರಾಮ್ ವಾಗ್ಮೋರೆ ಜೈಲಿಗೆ ಬಂದಾಗ ತಲೆ...
ಗೌರಿ ಲಂಕೇಶ್
ಗೌರಿ ಲಂಕೇಶ್
ಬೆಂಗಳೂರು:  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಅಮೋಲ್ ಕಾಳೆ ಅಲಿಯಾಸ್ ಬಾಯ್ ಸಾಬ್, ಮತ್ತೊಬ್ಬ ಆರೋಪಿ ಪರಶುರಾಮ್ ವಾಗ್ಮೋರೆ ಜೈಲಿಗೆ ಬಂದಾಗ ತಲೆ ಚಚ್ಚಿಕೊಂಡಿದ್ದಾನೆ ಎಂದು ಹೇಳಲಾಗಿದೆ.ಬಂಧಿತ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆಯನ್ನು ನೋಡಿದ ಕೂಡಲೇ ಜೋರಾಗಿ ಕಿರುಚಿಕೊಂಡು ಗೋಡೆಗೆ ಮತ್ತು ಬಾಗಿಲಿಗೆ ತಲೆ ಚಚ್ಚಿಕೊಂಡಿದ್ದಾನೆ.
ಜೂನ್ 12 ರಂದು ಕಾಳೆಯನ್ನು ಬೆಳಗಾವಿಯಯಲ್ಲಿ ಎಸ್ ಐಟಿ ಅಧಿಕಾರಿಗಳು ವಶಕ್ಕೆ ತೆಗದುಕೊಂಡಿದ್ದಾರೆ. ವಿಚಾರಣೆ ವೇಳೆ ಕಾಳೆ ಪೊಲೀಸರಿಗೆ ಮೂರು ಸ್ಥಳಗಳನ್ನು ತೋರಿಸಿದ್ದಾನೆ.  ಆ ಪ್ರದೇಶಗಳಲ್ಲಿ ತನ್ನ ಸಹಚರರು ಇದ್ದಿದ್ದಾಗಿ ಹೇಳಿದ್ದಾನೆ, ಕಾಳೆ ವರ್ತನೆ ನೋಡಿದರೇ ಆತನಿಗೆ ವಾಗ್ಮೋರೆ ಪರಿಚಯ ಚೆನ್ನಾಗಿಯೇ ಇದೆ ಎಂಬುದು ತಿಳಿಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಂದು ಮನೆ ಸಾಯಿ ಲಕ್ಷ್ಮಿ ಲೇಔಟ್ ನ ಸರ್ಕಾರಿ ಶಾಲೆ ಹಿಂಭಾಗ ಮತ್ತೊಂದು ಮನೆ ಮಾಗಡಿ ಮೈನ್ ರೋಡ್ ನಲ್ಲಿದೆ. ಸಾಯಿ ಲಕ್ಷ್ಮಿ ಲೇಔಟ್ನ ಮನೆಯೊಂದರಲ್ಲಿ ಕೂದಲುಗಳು ಸಿಕ್ಕಿದ್ದು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ
ಕಾಳೆ, ಅಮಿತ್ ಮತ್ತು ಎಡ್ವೇ ಎಂಬುವರ ಜೊತೆ ಯಶವಂತಪುರ ಸರ್ಕಲ್ ನಲ್ಲಿರುವ ಮನೆಯಲ್ಲಿದ್ದುದ್ದಾಗಿ ಹೇಳಿದ್ದಾನೆ. ಆ ಮನೆಯಲ್ಲಿದ್ದುಕೊಂಡು ಗೌರಿ ಅವರ ಚಲನಲನಗಳನ್ನು ಗಮನಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸೀಜ್ ಮಾಡಿರುವ ಡೈರಿಯಲ್ಲಿ  ಕೋಡ್ ವರ್ಡ್ ಬರೆದಿಡಲಾಗಿದೆ.
ಆರೋಪಿ ಕಾಳೆ ಸುಮಾರು 21 ಮೊಬೈಲ್ ಹಾಗೂ ಸುಜಿತ್ 22 ಮೊಬೈಲ್ ಗಳನ್ನು ಬಳಸಿದ್ದಾರೆ.,ಈ ಮೊಬೈಲ್ ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲ.ಯಕ್ಕ ಕಳುಹಿಸಲಾಗಿದೆ.
ಅಧಿಕಾರಿಗಳು ಆರೋಪಿಗಳ ಪೋಷಕರ ವಿಚಾರಣೆ ನಡೆಸಿದ್ದಾರೆ,  ಬೆಂಗಳೂರಿಗೆ ಆಗಮಿಸಿದ್ದ  ಬಂಧಿತ ಪರಶುರಾಮ್ ವಾಗ್ಮೋರೆ ಅವರಿಗೆ ಪೋಷಕರ ಜೊತೆ ಫೋನ್ ನಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದರು.ತಮ್ಮ ಮಗ ಯಾವುದೇ ತಪ್ಪು ಮಾಜಿಲ್ಲ ಎಂದು ವಾಗ್ಮೋರೆ ತಂದೆ ಹೇಳಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com