ಬಹುಭಾಷಾ ವಿದ್ವಾಂಸ ಡಾ. ಎಚ್.ವಿ.ನರಸಿಂಹ ಮೂರ್ತಿ ನಿಧನ

ಬಹುಭಾಷಾ ವಿದ್ವಾಂಸ ಸಂಸ್ಕೃತ ಪಂಡಿತ ಡಾ. ಎಚ್.ವಿ.ನರಸಿಂಹ ಮೂರ್ತಿ ನಿಧನರಾಗಿದ್ದಾರೆ.
ಬಹುಭಾಷಾ ವಿದ್ವಾಂಸ ಡಾ. ಎಚ್.ವಿ.ನರಸಿಂಹ ಮೂರ್ತಿ ನಿಧನ
ಬಹುಭಾಷಾ ವಿದ್ವಾಂಸ ಡಾ. ಎಚ್.ವಿ.ನರಸಿಂಹ ಮೂರ್ತಿ ನಿಧನ
ಬೆಂಗಳೂರು: ಬಹುಭಾಷಾ ವಿದ್ವಾಂಸ ಸಂಸ್ಕೃತ ಪಂಡಿತ ಡಾ. ಎಚ್.ವಿ.ನರಸಿಂಹ ಮೂರ್ತಿ ನಿಧನರಾಗಿದ್ದಾರೆ.
ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ನರಸಿಂಹಮೂರ್ತಿಗಳು ಭಾನುವಾರ ಬೆಳಗಿನ ಜಾವ ಬೆಂಗಳೂರಿನಲ್ಲಿರುವ ಅವರ ಮಗನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ನರಸಿಂಹಮೂರ್ತಿ ಅವರ ಮೃತದೇಹವನ್ನು ಕುಂದಾಪುರಕ್ಕೆ ತರಲಾಗುತ್ತಿದ್ದು ಸಂಜೆ ವೇಳೆಗೆ ಕುಂದಾಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಇವರಕಡೆಯ ಪುಸ್ತಕ  'ಕನ್ನಡ- ಕರ್ನಾಟಕ ರಸಪ್ರಶ್ನೆಗಳು' ಕಂಬದಕೋಣೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಬಿಡುಗಡೆಯಾಗಿತ್ತು.
ಚಿಕ್ಕಮಗಳೂರು  ಜಿಲ್ಲೆಯ ತೋಟದೂರು ಗ್ರಾಮದ ಮಾವಿನಕುಡಿಗೆ ಎಂಬಲಿ ಜನಿಸಿದ್ದ ನರಸಿಂಹಮೂರ್ತಿಗಳು ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ  70ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ನೂರಾರು ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿದ್ದ ಇವರು ಕುಂದಾಪುರ ಭಾಗದಲ್ಲಿ ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ಸಂಸ್ಕೃತ ಪ್ರಾದ್ಯಾಪಕರಾಗಿದ್ದ ಇವರು ಕುಂದಾಪುರ, ಉಡುಪಿ ಭಾಗದ .ಶೃಂಗೇರಿ ಶಾರದಾ ಪೀಠದ ಧರ್ಮಾಧಿಕಾರಿಯಾಗಿದ್ದರು. 
ನರಸಿಂಹಮೂರ್ತಿಗಳು ಕುಂದೇಶ್ವರ ದೇವಸ್ಥಾನದ ಮಾಜಿ ಧರ್ಮದರ್ಶಿಗಳು , ಸಂಸ್ಕೃತ ಪರಿಷದ್, ಜೇಸಿ, ರೋಟರಿ ಇತ್ಯಾದಿ ಅನೇಕ ಸಂಸ್ಥೆಗಳಲ್ಲೂ ಸಕ್ರಿಯರಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com