'ನಿಮ್ಮ ಕನಸುಗಳನ್ನು ಬೆನ್ನತ್ತಿ, ಏನಾಗುತ್ತದೆ ಎಂಬ ಚಿಂತೆ ಬೇಡ': ಮೇಘನಾ ಶಾನ್ ಬಾಗ್

ನಿಮ್ಮ ಕನಸುಗಳನ್ನು ಬೆನ್ನತ್ತಿ ಅದರ ಫಲಿತಾಂಶ ಏನಾಗುತ್ತದೆ ಎಂಬುದರ ಬಗ್ಗೆ ನಿಮಗೆ ಚಿಂತೆ ಬೇಡ ಎಂದು ದೇಶದ ಆರನೇಯ ...
ಪೋಷಕರೊಂದಿಗೆ ಮೇಘನಾ
ಪೋಷಕರೊಂದಿಗೆ ಮೇಘನಾ
Updated on
ಚಿಕ್ಕಮಗಳೂರು: ನಿಮ್ಮ ಕನಸುಗಳನ್ನು ಬೆನ್ನತ್ತಿ ಅದರ ಫಲಿತಾಂಶ ಏನಾಗುತ್ತದೆ ಎಂಬುದರ ಬಗ್ಗೆ ನಿಮಗೆ ಚಿಂತೆ ಬೇಡ ಎಂದು ದೇಶದ ಆರನೇಯ ಹಾಗೂ ದಕ್ಷಿಣ ಭಾರತದ ಮೊದಲ ಮಹಿಳಾ ಪೈಲಟ್ ಮೇಘನ್ ಶಾನ್ ಭಾಗ್ ಸಾಹಸದ ಮಾತುಗಳನ್ನಾಡಿದ್ದಾರೆ.
ಮೇಘನಾ ಅವರು ಮೈಸೂರಿನ ಶ್ರೀ ಜಯ ಚಾಮರಾಜೇಂದ್ರ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿಯನ್ನು 2011 ರಿಂದ 2015 ರ ಅವಧಿಯಲ್ಲಿ ಓದಿದ್ದರು. ಬಳಿಕ ಮನಾಲಿ ಯಲ್ಲಿ ಪರ್ವತಾರೋಹಣ ಮತ್ತು ಗೋವಾ ದಲ್ಲಿ ಪ್ಯಾರಾಗ್ಲೈಡಿಂಗ್ ಕೋರ್ಸ್ ಅನ್ನು 2016 ರಲ್ಲಿ ಪೂರ್ಣಗೊಳಿಸಿದ್ದರು. ಹೈದರಾಬಾದ್ ಆಕಾಡೆಮಿಗೆ ಸೇರುವ ಮುನ್ನ ಏರ್ ಫೋರ್ಸ್ ಆಕಾಡೆಮಿಯ ಫ್ಲೈಯಿಂಗ್ ಬ್ರಾಂಚ್ ನ ನಲ್ಲಿ ಫೈಟರ್ ಸ್ಟ್ರೀಮ್ ತರಬೇತಿ ಪೂರ್ಣಗೊಳಿಸಿದ್ದರು.
ಭಾರತೀಯ ವಾಯುಪಡೆಯ ಮೊದಲ ಮಹಿಳಾ ಪೈಲಟ್ ಆದ ಅವನಿ ಚತುರ್ವೇದಿ ಸೇರಿದಂತೆ ಭವನ ಕಾಂತ್, ಮೋಹನಾ ಸಿಂಗ್ ಅವರ ಕಥೆಗಳನ್ನು ಓದಿ 2016 ರಲ್ಲಿ ಫೈಟರ್ ಪೈಲಟ್ ಆಗಲು ಸ್ಫೂರ್ತಿ ಪಡೆದಿದ್ದಾಗಿ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮನಾಲಿಯಲ್ಲಿ ಪರ್ವತಾರೋಹಣ ಮತ್ತು ಗೋವಾದಲ್ಲಿ ಪ್ಯಾರಾಗ್ಲೈಡಿಂಗ್ ತರಬೇತಿ ಪಡೆದಿದ್ದಾರೆ. ದುಂಡಿಗಲ್‌ನ ಏರ್‌ಫೋರ್ಸ್ ಅಕಾಡೆಮಿಗೆ ಅವರು 2017ರ ಜನವರಿಯಲ್ಲಿ ಪ್ರವೇಶ ಪಡೆದಿದ್ದರು.
ದುಂಡಿಗಲ್‌ ವಾಯುಪಡೆ ಅಕಾಡೆಮಿಯಲ್ಲಿ ಮೇಘನಾ ಯುದ್ಧವಿಮಾನ ಪೈಲಟ್ ತರಬೇತಿ ಪದವಿ ಪೂರೈಸಿದ್ದಾರೆ. ಪದವಿ ಪೂರೈಸಿದವರ ಪಥಸಂಚಲನ ಶನಿವಾರ ಇಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಮೇಘನಾ ಮತ್ತು ಮತ್ತೋರ್ವ ಯುವತಿಯನ್ನು ಯುದ್ಧವಿಮಾನದ ಪೈಲಟ್‌ ಆಗಿ ಆಯ್ಕೆ ಮಾಡಿರುವ ವಿಷಯವನ್ನು ಅಧಿಕೃತವಾಗಿ ಘೋಷಿಸಲಾಯಿತು.
ಮೇಘನಾ ಅವರ ತಂದೆ ಎಂ.ಕೆ.ಸುರೇಶ್ ವಕೀಲರಾಗಿದ್ದಾರೆ. ತಾಯಿ ಉಡುಪಿಯ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿದ್ದಾರೆ.ಮಗಳ ಸಾಧನೆಗೆ ತಂದೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಸದ್ಯ ಬೆಂಗಳೂರಿನಲ್ಲಿರುವ ಮೇಘನಾ ತಮ್ಮ ಸ್ನೇಹಿತ ಜೊತೆ ಕಾಲ ಕಳೆಯಲು ನಿರ್ಧರಿಸಿದ್ದಾರೆ, ವಿಮಾನ ತರಬೇತುದಾರ ಕಿರಣ್ ಅವರಿಂದ ತರಬೇತಿ ಪಡೆದು ಮೊದಲ ಹಂತ ಪೂರೈಸಿರುವ ಮೇಘನಾ  ತಮ್ಮ ಮುಂದಿನ ಪ್ರಯಾಣಕ್ಕೆ ಸಿದ್ಧರಾಗಿದ್ದಾರೆ,  ಬೀದರ್ ನ ಐಎಎಫ್ ನೆಲೆಯಲ್ಲಿ ಹಾರಾಟ ನಡೆಸಲಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com