ಉನ್ನತ ಶಿಕ್ಷಣ ಮಂಡಳಿ ಅಧ್ಯಕ್ಷರನ್ನಾಗಿ ಪ್ರೊ. ರಂಗಪ್ಪ ನೇಮಕಕ್ಕೆ ಬಿಜೆಪಿ ವಿರೋಧ

ಅವ್ಯವಹಾರದ ಆರೋಪ ಎದುರಿಸುತ್ತಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಅವರನ್ನು ಉನ್ನತ ಶಿಕ್ಷಣ ...
ರಂಗಪ್ಪ ಮತ್ತು ಬಿಜೆಪಿ ಎಂ ಎಲ್ ಸಿ ಗೋ. ಮಧುಸೂದನ್
ರಂಗಪ್ಪ ಮತ್ತು ಬಿಜೆಪಿ ಎಂ ಎಲ್ ಸಿ ಗೋ. ಮಧುಸೂದನ್
ಬೆಂಗಳೂರು: ಅವ್ಯವಹಾರದ ಆರೋಪ ಎದುರಿಸುತ್ತಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಅವರನ್ನು ಉನ್ನತ ಶಿಕ್ಷಣ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿದರೇ. ಹೋರಾಟ ನಡೆಸುವುದಾಗಿ ಬಿಜೆಪಿ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ತಿನ ಸದಸ್ಯ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌, ಮೇಲ್ಮನೆ ಮಾಜಿ ಸದಸ್ಯ ಗೋ.ಮಧುಸೂದನ್‌,''ಕರ್ನಾಟಕ ಮುಕ್ತ ವಿವಿ 2013-14 ರಿಂದ ಮಾನ್ಯತೆ ಕಳೆದುಕೊಂಡಿದೆ. ಇದುವರೆಗೂ ವಿವಿಗೆ ಮಾನ್ಯತೆ ದೊರೆತಿಲ್ಲ. ಅಂದಿನಿಂದ ಯಾವುದೇ ಶೈಕ್ಷಣಿಕ ಚಟುವಟಿಕೆ ನಡೆಯದೇ ವಿವಿ ಕೋಮಾ ಸ್ಥಿತಿಯಲ್ಲಿದೆ. ಇದಕ್ಕೆ ರಂಗಪ್ಪ ಅವರೇ ನೇರವಾಗಿ ಕಾರಣರಾಗಿದ್ದು ಇಂಥವರನ್ನು ಉನ್ನತ ಶಿಕ್ಷಣ ಮಂಡಳಿಗೆ ನೇಮಿಸಬಾರದು,'' ಎಂದು ಆಗ್ರಹಿಸಿದರು. 
ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರನ್ನು  ಸಿದ್ದರಾಮಯ್ಯ  ಗೃಹ ಇಲಾಖೆಗೆ ಸಲಹೆಗಾರರನ್ನಾಗಿ ನೇಮಿಸಿದ್ದಕ್ಕೇ ಅಂದು ಕುಮಾರ ಸ್ವಾಮಿ ವಿರೋಧ ವ್ಯಕ್ತ ಪಡಿಸಿದ್ದರು, ಆದರೆ ಈಗ ಕುಮಾರ ಸ್ವಾಮಿ ಮತ್ತೆ ಅದೇ ಕೆಲಸಕ್ಕೆ ಮುಂದಾಗಿದ್ದಾರೆ, ವಿವಿಯಲ್ಲಾಗಿರುವ ಅಕ್ರಮಗಳನ್ನು ಸಿಬಿಐ ತನಿಖೆಗೆ ವಹಿಸುವಂಕತೆ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com