ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ ಶೀಘ್ರದಲ್ಲೇ ಖಾಸಗಿ ವನ್ಯಜೀವಿ ಸಂರಕ್ಷಣಾಲಯ

ರಾಜ್ಯದ ಬಂಡೀಪುರ, ನಾಗರಹೊಳೆ, ಬಿಆರ್ ಟಿ ಅಥವಾ ಕಾಳಿ, ಭಿಮ್ ಗಡ್ ಅಥವಾ ಭದ್ರಾ ಹುಲಿ ಸಂರಕ್ಷಣಾಲಯದ ಸುತ್ತ ಶೀಘ್ರದಲ್ಲಿಯೇ ಖಾಸಗಿ ವನ್ಯಜೀವಿ ಸಂರಕ್ಷಣಾಲಯ ತಲೆ ಎತ್ತುವ ಸಾಧ್ಯತೆ ಇದೆ.
ಬೆಂಗಳೂರು: ರಾಜ್ಯದ ಬಂಡೀಪುರ, ನಾಗರಹೊಳೆ, ಬಿಆರ್ ಟಿ ಅಥವಾ ಕಾಳಿ, ಭಿಮ್ ಗಡ್ ಅಥವಾ ಭದ್ರಾ ಹುಲಿ ಸಂರಕ್ಷಣಾಲಯದ ಸುತ್ತ ಶೀಘ್ರದಲ್ಲಿಯೇ ಖಾಸಗಿ  ವನ್ಯಜೀವಿ ಸಂರಕ್ಷಣಾಲಯ ತಲೆ ಎತ್ತುವ ಸಾಧ್ಯತೆ ಇದೆ.
ಮಾನವ- ವನ್ಯಜೀವಿ ಸಂಘರ್ಘ ಕಡಿಮೆ ಮಾಡಲು ಹಾಗೂ  ವನ್ಯಜೀವಿಗಳ  ತಿರುಗಾಟಕ್ಕೆ ಇದರಿಂದ ಹೆಚ್ಚಿನ ಸ್ಥಳಾವಕಾಶ ದೊರೆಯಲಿದೆ ಎಂದು ಅರಣ್ಯ ಇಲಾಕೆ ಅಧಿಕಾರಿಗಳು ವಿವರಿಸಿದ್ದಾರೆ. ಆದರೆ, ಇದರ ಅವಶ್ಯಕತೆ ಇರಲಿಲ್ಲ. ರೆಸಾರ್ಟ್ ಮಾಲೀಕರು ಹಾಗೂ ಅವರ ಬೆಂಬಲಿಗರು  ಹಿಂಬಾಗಿಲ ಮೂಲಕ  ಪ್ರವೇಶಿಸಿಸಲು ಅವಕಾಶ ಮಾಡಿಕೊಡಲಾಗುತ್ತಿದೆ  ಎಂದು ಪರಿಸರ ಹೋರಾಟಗಾರರು ಆರೋಪಿಸಿದ್ದಾರೆ.
 ಇದಕ್ಕೆ ಸಂಬಂಧಿಸಿದಂತೆ ಕಾನೂನಿನ ಪ್ರತಿ ಸಿದ್ಧವಾಗಿದ್ದು, ಚರ್ಚೆ ನಡೆಯುತ್ತಿದೆ, ಮುಂದಿನ ವಾರ ಅಂತಿಮಗೊಳಿಸುವ ಸಾಧ್ಯತೆ ಇದೆ. ರಾಜ್ಯ ಅರಣ್ಯ ಕಾನೂನು 1963 ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 39ರ ವ್ಯಾಪ್ತಿಯಡಿ  ಖಾಸಗಿ ವನ್ಯಜೀವಿ ಸಂರಕ್ಷಣಾಲಯವನ್ನು ಸ್ಥಾಪಿಸಲಾಗುತ್ತಿದೆ.
ಖಾಸಗಿ ವನ್ಯಜೀವಿ ಸಂರಕ್ಷಣೆಗಾಗಿ  ಸಂರಕ್ಷಿತ ಪ್ರದೇಶ ಒಳಗೆ ಅಥವಾ ಅದರ ಸುತ್ತ   ಜನರು ಭೂಮಿ ಹೊಂದಲು ರಾಜ್ಯ ಖಾಸಗಿ ಸಂರಕ್ಷಣಾ ಕಾನೂನು 2018ರಲ್ಲಿ ಅವಕಾಶ ಮಾಡಿಕೊಟ್ಟಿದೆ. ಆದಾಗ್ಯೂ,  ಪರಿಸರ ಸ್ನೇಹಿ ಪ್ರವಾಸೋದ್ಯಮ ಮತ್ತಿತರ  ಚಟುವಟಿಕೆಗಾಗಿ ಈ ಭೂಮಿಯಲ್ಲಿ ಶೇ. 5 ರಷ್ಟು ಭೂಮಿಯನ್ನು ರೆಸಾರ್ಟ್, ಹೋಟೆಲ್, ಹೋಮ್ ಸ್ಟೇಂ ಕಟ್ಟಲು ಬಳಸಿಕೊಳ್ಳಬಹುದಾಗಿದೆ.
ನಿರ್ವಹಣಾ ಸಮಿತಿ

ಮಿಶ್ರ ಪ್ರತಿಕ್ರಿಯೆ
ಖಾಸಗಿ ವನ್ಯಜೀವಿ ಸಂರಕ್ಷಣಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಮಿಶ್ರ ಪ್ರತಿಕ್ರಿಯೆಗಳು ಕಂಡುಬರುತ್ತಿವೆ.  ಈ ವಿಷಯ ಕುರಿತಂತೆ ಚರ್ಚಿಸಲು ಜೂನ್. 25 ರಂದು ಅರಣ್ಯ ಇಲಾಖೆ ಸಭೆ ಕರೆದಿದೆ. ಈ ಯೋಜನೆ ಉತ್ತಮವಾಗಿದೆ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ. ಆದರೆ, ಪರಿಸರ ಹೋರಾಟಗಾರರು ವಿರೋಧ ವ್ಯಕ್ತಪಡಿಸುತ್ತಾರೆ. ಕೃಷಿ, ತೋಟಗಾರಿಕೆ ಬೆಳೆಯುವ ಪ್ರದೇಶವನ್ನು ಖಾಸಗಿ ಸಂರಕ್ಷಣಾಲಯದಲ್ಲಿ ಒಳಪಡಿಸಲಾಗುತ್ತದೆ.
ಏನು ಮಾಡಬೇಕು, ಮಾಡಬಾರದು,

Related Stories

No stories found.

Advertisement

X
Kannada Prabha
www.kannadaprabha.com