ತುಮಕೂರು: 81 ವರ್ಷದ ವೃದ್ದನಿಂದ ಕಠಿಣ ಯೋಗ ಆಸನಗಳು

ಕಳೆದ 30 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿರುವ 81 ವರ್ಷದ ಜಿ.ವಿ ವೆಂಕಟನಾರಾಯಣ ಶಾಸ್ತ್ರಿ ಎಷ್ಠೇ ಕಷ್ಟದ ಆಸನಗಳನ್ನು ಸರಾಗವಾಗಿ ...
ವೆಂಕಟನಾರಾಯಣ ಶಾಸ್ತ್ರಿ ಆಸನಗಳು
ವೆಂಕಟನಾರಾಯಣ ಶಾಸ್ತ್ರಿ ಆಸನಗಳು
ತುಮಕೂರು: ಕಳೆದ 30 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿರುವ  81 ವರ್ಷದ ಜಿ.ವಿ ವೆಂಕಟನಾರಾಯಣ ಶಾಸ್ತ್ರಿ ಎಷ್ಠೇ ಕಷ್ಟದ ಆಸನಗಳನ್ನು ಸರಾಗವಾಗಿ ಮಾಡುತ್ತಾರೆ.
81 ವರ್ಷದ ಶಾಸ್ತ್ರಿ ಬಾಬಾ ರಾಮ್ ದೇವ್ ಅವರಂತೆ ನೌಲಿ,  ಶಿರಶಾಸನ, ಮಯೂರು ಪದ್ಮಾಸನ ಗಳನ್ನು ಸುಲಭವಾಗಿ ಮಾಡುತ್ತಾರೆ. ಇದುವರೆಗೂ ಶಾಸ್ತ್ರಿ ಅವರು ಸಾವಿರಾರು ಮಂದಿಗೆ ಯೋಗ ಕಲಿಸಿದ್ದಾರೆ,
ಮೊಳಕೆ ಕಟ್ಟಿದ ರಾಗಿಯನ್ನು ಹೆಚ್ಚಾಗಿ  ತಿನ್ನುವ ಇವರಿಗೆ ಮೊಳಕೆ ಶಾಸ್ತ್ರಿ ಎಂಬ ಹೆಸರು ಕೂಡ ಇದೆ. 30 ವರ್ಷದವರಾಗಿದ್ದಾಗ ಶಾಸ್ತ್ರಿ ಅವರಿಗೆ ಹೊಟ್ಟೆಯ ಅಲ್ಸರ್ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲಿದ್ದರು, ಹಲವು ರೀತಿಯ ಔಷಧಿ ತೆಗೆದುಕೊಂಡರೂ ಪ್ರಯೋಜನವಾಗಲಿಲ್ಲ, ಹೀಗಾಗಿ ಅಂದಿನಿಂದ ಮೊಳಕೆ ರಾಗಿ ಮತ್ತು ಹಣ್ಣು ಹಾಗೂ ಜ್ಯೂಸ್ ಸೇವಿಸಲು ನಿರ್ಧರಿಸಿರು,  ಅದಾದ ನಂತರ ಅಲ್ಲಿಂದ ಇಲ್ಲಿಯವರೆಗೂ ವೈದ್ಯರ ಬಳಿಗೆ ಹೋಗುವ ಪ್ರಮೇಯ ಬರಲಿಲ್ಲ.
ಸೂಕ್ತವಾದ ಪಥ್ಯ ಹಾಗೂ ಯೋಗ ಅಭ್ಯಾಸ ಮಾಡಿದರೇ ಯಾವ ರೋಗವೂ ಹತ್ತಿರ ಸುಳಿಯುವುದಿಲ್ಲ ಎಂದು ಹೇಳಿದ್ದಾರೆ, ತಮ್ಮ ಅನುಭವಗಳನ್ನೆಲ್ಲಾ ಕ್ರೂಢೀಕರಿಸಿ ಇದುವರೆಗೂ 4 ಪುಸ್ತಕಗಳನ್ನು ಬರೆದಿದ್ದಾರೆ, ರೋಗದಿಂದ ಯೋಗದ ಕಡೆಗೆ, ಈ ಪುಸ್ತಕ ಎರಡು ಬಾರಿ  ಮುದ್ರಣ ಕಂಡು ಹಾಟ್ ಕೇಕ್ ನಂತೆ ಮಾರಾಟವಾಯಿತು. ಬಿಎಸ್ ಸಿ ಪದವೀಧರರಾಗಿರುವ ಶಾಸ್ತ್ರಿ ಟೆಲಿಕಾಂ ಇಲಾಖೆಯಲ್ಲಿ ಕೆಲಸ ಮಾಡಿದ್ದರು.
ಮುಂಜಾನೆ 2.30 ಕ್ಕೆ ಹಾಸಿಗೆಯಿಂದ ಏಳುವ ಶಾಸ್ತ್ರಿ ಮೈಗೆಲ್ಲಾ ಕೊಬ್ಬರಿ ಎಣ್ಣೆ ಹಚ್ಚಿ,ಯೋಗಕ್ಕಾಗಿ ತಮ್ಮ ದೇಹ ಸಿದ್ದಪಡಿಸುತ್ತಾರೆ, ಕಾಲಿನ ಬೆರಳುಗಳಿಂದ ಎಣ್ಣೆ ಹಚ್ಚಿಕೊಳ್ಳುವುದರಿಂದ ನನಗೆ ಶೀತ ಆಗುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಅಂತರರಾಷ್ಟ್ರೀಯ ಯೋಗದಿನಾಚರಣೆ ಅಂಗವಾಗಿ ಮೈಸೂರಿನ ರೇಸ್ ಕ್ಲಬ್ ರಸ್ತೆಯಲ್ಲಿ ಸಿದ್ದತೆ ನಡೆಸಲಾಗಿದ್ದು, 2 ಗಂಟೆಗಳ ಯೋಗ ಅಭ್ಯಾಸ ನಡೆಯಲಿದೆ 80 ಸಾವಿರ ಯೋಗ ಪಟುಗಳು 47 ಆಸನಗಳನ್ನು ಪ್ರದರ್ಶಿಸಲಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com