ಶೀಘ್ರದಲ್ಲೇ ಸಿಎಂ ಕುಮಾರಸ್ವಾಮಿಯಿಂದ ಕಾವೇರಿ ಕುರಿತು ಕಿರು ಪುಸ್ತಕ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶೀಘ್ರದಲ್ಲೇ ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದ ಸಂಪೂರ್ಣ....
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶೀಘ್ರದಲ್ಲೇ ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಒಳಗೊಂಡ ಕಿರು ಪುಸ್ತಕವೊಂದನ್ನು ಹೊರ ತರಲು ತೀರ್ಮಾನಿಸಿದ್ದಾರೆ. 
ಸುಮಾರು 45 ಪುಟಗಳ ಈ ಪುಸ್ತಕದಲ್ಲಿ ತಮಿಳಿಗೆ ಭಾಷಾಂತರಿಸಿ, ಅದನ್ನು ತಮಿಳುನಾಡು ಸಚಿವರಿಗೆ, ಶಾಸಕರಿಗೆ, ಸಂಸದರಿಗೆ ಹಾಗೂ ಪ್ರತಿಪಕ್ಷ ನಾಯಕರಿಗೆ ಉಚಿತವಾಗಿ ನೀಡಲು ಸಿಎಂ ನಿರ್ಧರಿಸಿದ್ದಾರೆ. 
ಆದರೆ ಸಿಎಂ ಕುಮಾರಸ್ವಾಮಿ ಅವರ ಈ ನಿರ್ಧಾರಕ್ಕೆ ತಮಿಳುನಾಡಿನ ಆಡಳಿತರೂಢ ಎಐಎಡಿಎಂಕೆ ಮತ್ತು ಪ್ರತಿಪಕ್ಷ ಡಿಎಂಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕಾಲಾವಕಾಶ ನೀಡದೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸಿದ್ದರಿಂದ ರಾಜ್ಯಕ್ಕೆ ಆಗಬಹುದಾದ ಸಾಧಕ-ಬಾಧಕ ಕುರಿತು ಪುಸ್ತಕದಲ್ಲಿ ಮಾಹಿತಿ ಇರಲಿದೆ. ಈ ಮೂಲಕ ಹೋರಾಟದ ರೂಪುರೇಷೆ ಸಿದ್ಧಪಡಿಸುವ ಉದ್ದೇಶವಿದೆ ಎನ್ನಲಾಗಿದೆ.
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ನಿರ್ದೇಶನದಂತೆ ಸಿಎಂ ಕುಮಾರಸ್ವಾಮಿ ಅವರು ಈ ಪುಸ್ತಕ ಹೊರತರಲು ನಿರ್ಧರಿಸಿದ್ದು,15-20 ದಿನಗಳಲ್ಲಿ ಈ ಪುಸ್ತಕ ಹೊರ ಬರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಪುಸ್ತಕದಲ್ಲಿ ಏನಿರಲಿದೆ?
ಕಾವೇರಿ ನದಿಯ ಇತಿಹಾಸ, ನೀರಿನ ಪ್ರಮಾಣ, ವಿವಾದ, ನ್ಯಾಯ ಮಂಡಳಿ ತೀರ್ಪು, ಸುಪ್ರೀಂಕೋರ್ಟ್ ಅಂತಿಮ ತೀರ್ಪು, ನೀರು ನಿರ್ವಹಣಾ ಮಂಡಳ ರಚನೆ, ಕಾನೂನು ಹೋರಾಟಗಳ ಸಮಗ್ರ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿರುತ್ತದೆ.
ಯಾವ ಪಕ್ಷ ಆಡಳಿತದಲ್ಲಿದ್ದಾಗ ರಾಜ್ಯಕ್ಕೆ ಅನ್ಯಾಯ -ಅನುಕೂಲವಾಗಿದೆ. ಕಾಲಾನುಕ್ರಮದಲ್ಲಿ ನದಿ ನೀರು ಬಳಕೆ ಸಂಬಂಧ ಆಯಾ ಸರ್ಕಾರಗಳ ನಿಲುವು, ರಾಜ್ಯದ ಜನತೆ, ರೈತರು ಎದುರಿಸಿದ್ದ ಸಂಕಷ್ಟಗಳ ಮಾಹಿತಿ ಇರಲಿದೆ. ಆದರೆ, ಇದರಲ್ಲಿ ಯಾವುದೇ ರಾಜಕೀಯ ಇರುವುದಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com