ಸಾಲ ಮನ್ನಾಗೆ ಸಿದ್ದರಾಮಯ್ಯ ವಿರೋಧ: ರೈತ ಸಂಘದಿಂದ ಮಾಜಿ ಸಿಎಂಗೆ ಎಚ್ಚರಿಕೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದೊಡನೆ ಸಹಕರಿಸಬೇಕು, ವಿನಾ ಕಾರಣ ವಿವಾದಾತ್ಮಕ ಹೇಳಿಕೆ ನೀಡಿ ರೈತರ ಸಾಲ ಮನ್ನಾ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುವುದು.....
ಕೋಡಿಹಳ್ಳಿ ಚಂದ್ರಶೇಖರ್
ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದೊಡನೆ ಸಹಕರಿಸಬೇಕು, ವಿನಾ ಕಾರಣ ವಿವಾದಾತ್ಮಕ ಹೇಳಿಕೆ ನೀಡಿ ರೈತರ ಸಾಲ ಮನ್ನಾ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಮುಂಬರುವ ಬಜೆಟ್ ನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರೈತರ ಸಾಲ ಮನ್ನಾ ಯೋಜನೆ ಘೋಷಣೆಗೆ ವಿಫಲವಾದರೆ ರೈತರು ಸಾಲ ಮರುಪಾವತಿಸದೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ರೈತ ಸಂಘಟನೆ ಅಧ್ಯಕ್ಷರು ಹೇಳಿದ್ದಾರೆ.
"ಸಿದ್ದರಾಮಯ್ಯನವರಲ್ಲಿ ನನ್ನದೊಂದು ಸರಳ ಮನವಿ ಇದೆ, ರೈತರ ಸಾಲ ಮನ್ನಾ ವಿಚಾರದಲ್ಲಿ ಕಾಂಗ್ರೆಸ್ ವಿಭಿನ್ನ ಪ್ರತಿಕ್ರಿಯೆ ನಿಡಿ ವಿವಾದ ಹುಟ್ಟು ಹಾಕುವುದನ್ನು ನಿಲ್ಲಿಸಬೇಕು. ಅವರು ಸರ್ಕಾರದೊಡನೆ ಸಹಕರಿಸಬೇಕು ರೈತರು ಈ ಸಾಲದ ಸಮಸ್ಯೆಯಿಂದ ಹೊರಬರಲು ಸಹಾಯ ನೀಡಬೇಕು": ಚಂದ್ರಶೇಖರ್ ಒತ್ತಾಯಿಸಿದರು.
ಮುಖ್ಯಮಂತ್ರಿಗಳು ಮಾತನಾಡುವುದನ್ನು ನಿಲ್ಲಿಸಿ ಸಾಲ ಮನ್ನಾ ಕುರಿತಂತೆ ಕೆಲಸ ಪ್ರಾರಂಭಿಸಬೇಕು. ಹಾಗಿಲ್ಲವಾದರೆ ಸಂಘಟನೆಯು ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಮುಂಬರುವ ಬಜೆಟ್ ಅಧಿವೇಶನದಲ್ಲಿ ಜೆಡಿ (ಎಸ್) -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ಕನಿಷ್ಠ ಬೆಳೆ ಸಾಲ ಮನ್ನಾವನ್ನು ಘೋಷಿಸಲು ವಿಫಲವಾದರೆ  ರಾಜ್ಯದಾದ್ಯಂತದ ರೈತರು ತಮ್ಮ ಸಾಲಗಳನ್ನು ಮರುಪಾವತಿಸದೆ ಪ್ರತಿಭಟಿಸಲಿದ್ದಾರೆ. "ಸಾಲ ಮನ್ನಾ ಯೋಜನೆ ನಮಗೆ ಸಹಮತವಾಗದೆ ಹೋದಲ್ಲಿ ನಾವು ಸಾಲ ಮರುಪಾವತಿಗೆ ನಿರಾಕರಿಸಲಿದ್ದೇವೆ" ಅವರು ಹೇಳಿದ್ದಾರೆ.
ರೈತರ ಒಕ್ಕೂಟಗಳು ಪ್ರಸ್ತುತ ಸಮ್ಮತಿಸಿರುವಂತೆ ಜೀವನೋಪಾಯಕ್ಕೆ ಇತರೆ ಆದಾಯ ಮೂಲ ಹೊಂದಿರುವ ರೈತರ ಶೋಧನೆಗೆ ಸರ್ಕಾರ ಮುಂದಾಗಿದೆ. ಅಲ್ಲದೆ ಮೊದಲ ಹಂತವಾಗಿ ಬೆಳೆ ಸಾಲಗಳನ್ನಷ್ಟೇ ಮನ್ನಾ ಮಾಡಲಾಗುವುದು, ಎರಡನೇ ಹಂತದಲ್ಲಿ ಕೃಷಿ ಸಲಕರಣೆ, ಇತರೆ ಕೃಷಿ ಸಂಬಂಧಿತ ಸಾಲ ಮನ್ನಾ ಮಾಡುವುದು ಎಂದು ಸರ್ಕಾರ ಯೋಜನೆಯಲ್ಲಿ ಪ್ರಸ್ತಾಪಿಸಿದೆ.
"ನಾವು ಒಂದೇ ಬಾರಿಗೆ ರಾಜ್ಯದ ಎಲ್ಲಾ ರೈತರ ಸಾಲ ಮನ್ನಾಗೆ ಕೇಳಿದ್ದೇವೆ. ಹಾಗೆಯೇ ಸ್ವಾಮಿನಾಥನ್ ಕಮಿಷನ್ ಶಿಫಾರಸಿನಂತೆ ಕೃಷಿ ಸಾ;ಅ ಹಾಗೂ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ನಾವು ಮುಂದಿನ ದಿನಗಳಲ್ಲಿ ಸಾಲ ಮನ್ನಾಗೆ ಆಗ್ರಹಿಸುವಂತೆ ಮಾಡಬಾರದು" ಚಂದ್ರಶೇಖರ್ ಹೇಳೀದ್ದಾರೆ.
ಕೃಷಿ ಸಾಲ ಮನ್ನಾ ವಿರೋಧಿಸಿ ಸಿದ್ದರಾಮಯ್ಯನವರ ಸಂದೇಶವಿದ್ದ ವೀಡಿಯೋ ವೈರಲ್ ಆದ ಬಳಿಕ ರೈತಸಂಘ ಈ ಪ್ರತಿಕ್ರಿಯೆ ನಿಡಿದೆ. ರಒತ ಸಂಘದ ಈ ಹೇಳಿಕೆ ನೇರವಾಗಿ ಸಿದ್ದರಾಮಯ್ಯನವರ ವಿರುದ್ಧ ದಾಳಿ ಎಂಬಂತೆ ಕಾಣುತ್ತಿದೆ.
"ಸಾಲ ಮನ್ನಾ ಘೋಷಣೆಯಾಗದೆ ಹೋದಲ್ಲಿ ರೈತ ಸಂಘವು ಇದೇ ಮೊದಲ ಬಾರಿಗೆ ರಾಜಕೀಯ ನಿರ್ಧಾರವನ್ನು ತೆಗೆದುಕೊಳ್ಳಲಿದೆ. 2019ರ ಲೋಕಸಭಾ ಚುನಾವಣೆಲ್ಲಿ ಯಾರಿಗೆ ಬೆಂಬಲ ನಿಡಬೇಕು, ಯಾರನ್ನು ತಿರಸ್ಕರಿಸಬೇಕೆಂದು ನಿರ್ಧಾರಕ್ಕೆ ಬರಲಿದ್ದೇವೆ" ಕೋಡಿಹಳ್ಳಿ ಚಂದ್ರಶೇಖರ್ ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com