ಇಂದಿರಾಗಾಂಧಿ ಸರ್ವಾಧಿಕಾರಿ ಧೋರಣೆಯಿಂದ ದೇಶ ಕೆಲಕಾಲ ಕತ್ತಲೆ ಕೂಪದಲ್ಲಿತ್ತು: ಎಂ.ಜೆ ಅಕ್ಬರ್

ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಸರ್ವಾಧಿಕಾರಿ ಧೋರಣೆಯಿಂದ ದೇಶ ಕೆಲ ಕಾಲ ಕತ್ತಲೆ ಕೂಪದಲ್ಲಿ ಮುಳುಗುವಂತಾಯಿತು ...
ಯಡಿಯೂರಪ್ಪ ಜೊತೆ ಎಂಜೆ ಆಕ್ಬರ್
ಯಡಿಯೂರಪ್ಪ ಜೊತೆ ಎಂಜೆ ಆಕ್ಬರ್
ಬೆಂಗಳೂರು: ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಸರ್ವಾಧಿಕಾರಿ ಧೋರಣೆಯಿಂದ ದೇಶ ಕೆಲ ಕಾಲ ಕತ್ತಲೆ ಕೂಪದಲ್ಲಿ ಮುಳುಗುವಂತಾಯಿತು ಎಂದು ಕೇಂದ್ರ ಸಚಿವ ಎಂ.ಜೆ ಅಕ್ಬರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ,ವಂಶವಾಹಿ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು.
1975 ರಿಂದ 1977 ರವವರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು, ಇಲ್ಲಿರುವ ಕೆಲವರು ಇನ್ನೂ ಜನಿಸಿರಲಿಲ್ಲ, ಆ ಸಮಯದಲ್ಲಿ ಜನರ ಪರಿಸ್ಥಿತಿ ಎಷ್ಟು ಕೆಟ್ಟದಾಗಿತ್ತು ಎಂದು ನಿಮಗ್ಯಾರಿಗೂ ಊಹಿಸಿಕೊಳ್ಳಲು ಸಾಧ್ಯವಿಲ್ಲ . ದೇಶದಲ್ಲಿ ಹೇರಿದ ತುರ್ತು ಪರಿಸ್ಥಿತಿ ಸ್ವತಂತ್ರ್ಯಾ ಭಾರತದ ಜಲಿಯನ್ ವಾಲಾಬಾಗ್ ದುರಂತ ಎಂದು ವಿಷಾಧ ವ್ಯಕ್ತ ಪಡಿಸಿದರು. 
1975ರ ಜೂನ್ 25 ರಂದು ತುರ್ತುಪರಿಸ್ಥಿತಿ ಘೋಷಿಸಲಾಯಿತು.ಅದು 1977ರ ಮಾರ್ಚ್ 21 ಕ್ಕೆ ಕೊನೆಗೊಂಡಿತ್ತು. ನಂತರ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿ ಮತ್ತು ಅವರ ಪುತ್ರ ಸಂಜಯ ಗಾಂಧಿ ಹೀನಾಯವಾಗಿ ಸೋತರು.
19 ತಿಂಗಳ ಅವಧಿಯನ್ನು ನೆನಪಿಸಿಕೊಳ್ಳಲು ಭಯವಾಗುತ್ತಿದೆ. ಕರಾಳ ಅಪಾಯದ ಅವಧಿ ಅದಾಗಿತ್ತು. ವಾಕ್ ಸ್ವಾತಂತ್ರ್ಯ ಮಾತ್ರವಲ್ಲ, ಬದುಕುವ ಹಕ್ಕನ್ನು ಕಸಿದುಕೊಂಡಿತ್ತು. ಕೆಲವು ನೀತಿಗಳು ಸಹ ಕ್ರೂರ ರೂಪ ಪಡೆದುಕೊಂಡವು ಎಂದು ತಿಳಿಸಿದರು.. 
ಇನ್ನೂ ಪ್ರಧಾನಿ ಮೋದಿ ಅವರನ್ನು ಕಾಂಗ್ರೆಸ್ ಮುಖಂಡ ರಂದೀಪ್ ಸುರ್ಜೆವಾಲಾ  ಮೊಗಲ್ ದೊರೆ ಔರಂಗ ಜೇಬ್ ಗೆ ಹೋಲಿಸಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com