ಇದ್ದಕ್ಕಿದ್ದಂತೆ ಶಾಂತಿವನದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು!

ಮಂಗಳೂರಿನಿಂದ 66 ಕಿಮೀ ದೂರದಲ್ಲಿರುವ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆ ನಡೆಸುತ್ತಿರುವ ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ...
ಧರ್ಮಸ್ಥಳ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ
ಧರ್ಮಸ್ಥಳ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ
ಮಂಗಳೂರು: ಮಂಗಳೂರಿನಿಂದ 66 ಕಿಮೀ  ದೂರದಲ್ಲಿರುವ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆ ನಡೆಸುತ್ತಿರುವ ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಈಗ ಎಲ್ಲರ ಕೇಂದ್ರ ಬಿಂದುವಾಗಿದೆ.
ಶಾಂತಿವನದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆ ಮಾತನಾಡಿರುವ ವಿಡಿಯೋಗಳು ಬಹಿರಂಗವಾಗಿರುವುದರಿಂದ ಎಲ್ಲರ ಚಿತ್ತ ಶಾಂತಿವನದತ್ತ ತಿರುಗಿದೆ. 
ಶಾಂತಿವನ ಎಂದರೇ ಶಾಂತಿ ಅರಣ್ಯ . ಪಶ್ಚಿಮ ಘಟ್ಟಗಳ ತಪ್ಪಲಿವ ಹಸಿರು ವನರಾಶಿಯ ನಡುವೆ ಶಾಂತಿವನವಿದ್ದು ಎಲ್ಲರನ್ನು ತನ್ನತ್ತ ಆಕರ್ಷಿಸುತ್ತದೆ.ಇಲ್ಲಿ ಸಾಂಪ್ರಾದಾಯಿತ ಯೋಗ ಮತ್ತು ನೈಸರ್ಗಿಕವಾಗಿ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತದೆ.
1987 ರಲ್ಲಿ  ಸುಮಾರು 53 ಎಕರೆ ಪ್ರದೇಶದಲ್ಲಿ ಹಸಿರು ಕ್ಯಾಂಪಸ್ ಆರಂಭಿಸಲಾಯಿತು. ಶಾಂತಿವನದಲ್ಲಿ ಸುಮಾರು 500 ಬೆಡ್ ಗಳಿದ್ದು, ಪ್ರತಿವರ್ಷ 15 ಸಾವಿರ ಜನರು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎಂದು ಶಾಂತಿವನದ ಮುಖ್ಯ ಆಡಳಿತಾಧಿಕಾರಿ ಡಾ, ಪ್ರಶಾಂತ ಶೆಟ್ಟಿ ಹೇಳಿದ್ದಾರೆ. ಮಧುಮೇಹ, ರಕ್ತದೊತ್ತಡ. ಬೆನ್ನು ನೋವು, ಸೇರಿದಂತೆ ಇತರೆ ಸಮಸ್ಯೆಗಳಿಗೆ ಯೋಗದ ಮೂಲಕ ಚಿಕಿತ್ಸೆ ನೀಡುತ್ತೇವೆ, ಇದು ತುಂಬಾ ಪರಿಣಾಮಕಾರಿಯಾಗಿದ್ದು, ಹಲವು ಜನರು ಇದರ ಪ್ರಯೋಜನ ಪಡೆದಿದ್ದಾರೆ.
ಈ ಆಸ್ಪತ್ರೆಯಲ್ಲಿ  ಮೆಡಿಕಲ್ ಕಾಲೇಜು ಕೂಡ ಇದೆ, ಈ ಕೇಂದ್ರಕ್ಕೆ ಮಾಜಿ ಪಿಎಂ ದೇವೇಗೌಡ ವಿಎಚ್ ಪಿ ಮುಖಂಡ ಅಶೋಕ್ ಸಿಂಘಾಲ್, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಮಾಜಿ ಸಿಎಂ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಗಾಯಕ ಎಸ್ ಪಿ ಬಾಲ ಸುಬ್ರಮಣ್ಯಂ ಸೇರಿದಂತೆ ಹಲವು ಗಣ್ಯರು ಇಲ್ಲಿಗೆ ಭೇಟಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com