6 ಬೋಗಿಗಳ ಮೆಟ್ರೊ ರೈಲಿನ ವೇಳಾಪಟ್ಟಿ, ಮಾರ್ಗ ಇಂದಿನಿಂದ ಪರಿಷ್ಕರಣೆ

ಬೆಂಗಳೂರು ಮೆಟ್ರೊ ರೈಲು ನಿಗಮದ ಮೊದಲ 6 ಬೋಗಿಗಳ ರೈಲಿನ ಸಂಚಾರ ಸಮಯ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮದ ಮೊದಲ 6 ಬೋಗಿಗಳ ರೈಲಿನ ಸಂಚಾರ ಸಮಯ ಗುರುವಾರದಿಂದ ಬದಲಾವಣೆಯಾಗಿದೆ. ಬೆಳಗಿನ ಹೊತ್ತು ಹೆಚ್ಚುವರಿ ಪ್ರಯಾಣ ಮಾರ್ಗವನ್ನು ತರಲಾಗಿದ್ದು ಕಡಿಮೆ ಅವಧಿಯ ಸಂಚಾರವನ್ನು ಮೂರರಿಂದ ಒಂದು ಟ್ರಿಪ್ ಗೆ ಇಳಿಸಲಾಗಿದೆ. ಕಳೆದ 22ರಂದು ಆರಂಭದ ದಿನ ಮೂರು ಟ್ರಿಪ್ ಎಂದು ಘೋಷಿಸಲಾಗಿತ್ತು.

ಕಳೆದ ರಾತ್ರಿ ಹೊರಡಿಸಿರುವ ಹೊಸ ವೇಳಾಪಟ್ಟಿ ಪ್ರಕಾರ, 6 ಬೋಗಿಗಳ ರೈಲಿನ ಸಂಚಾರದಲ್ಲಿ ಬೆಳಗಿನ ಹೊತ್ತು ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯವರೆಗೆ ನೇರಳೆ ಬಣ್ಣದ ಮಾರ್ಗದಲ್ಲಿ ಸಂಪೂರ್ಣ ಎರಡು ಸುತ್ತು ಸಂಚರಿಸಲಿದೆ. ಈ ಮೊದಲು ಪಶ್ಚಿಮ ದಿಕ್ಕಿಗೆ ಈ ನೇರಳೆ ಬಣ್ಣದ ಮೆಟ್ರೊ ರೈಲು ವಿಜಯನಗರದವರೆಗೆ ಮಾತ್ರ ಸಂಚರಿಸುತ್ತಿತ್ತು.
ಮತ್ತೊಂದು ಬದಲಾವಣೆಯೆಂದರೆ ಒಂದು ಸುತ್ತಿನ ಪ್ರಯಾಣ ವಿಸ್ತರಣೆಯಾಗಿರುವುದು.

ವಿಜಯನಗರ ಮತ್ತು ಎಂ ಜಿ ರಸ್ತೆಯ ನಡುವೆ ಸಂಚರಿಸುವ ಬದಲು ಇನ್ನು ಮುಂದೆ ವಿಜಯನಗರ ಮತ್ತು ಬೈಯಪ್ಪನಹಳ್ಳಿ ಮಧ್ಯೆ ಎರಡೂ ಮಾರ್ಗಗಳಲ್ಲಿ ರೈಲು ಸಂಚರಿಸಲಿದೆ. ಬೆಳಗ್ಗೆ ಮತ್ತು ಸಾಯಂಕಾಲ ಹೊತ್ತು ರೌಂಡ್ ಟ್ರಿಪ್ ನಲ್ಲಿ ಬದಲಾವಣೆಯಾಗಿದ್ದು, ವಾರಾಂತ್ಯಗಳಲ್ಲಿ ಈ 6 ಬೋಗಿಗಳ ರೈಲು ಸಂಚರಿಸುವುದಿಲ್ಲ.

ಪ್ರಯಾಣಿಕರ ಅಗತ್ಯಗಳಿಗೆ ತಕ್ಕಂತೆ ಬದಲಾವಣೆ ಮಾಡಲಾಗಿದೆ. ಈ ವೇಳಾಪಟ್ಟಿ ಕೂಡ ಮುಂದೆ ಬದಲಾವಣೆಯಾಗಬಹುದು. ಜನರ ಬೇಡಿಕೆಗೆ ತಕ್ಕಂತೆ ಮುಂದಿನ ದಿನಗಳಲ್ಲಿ ಬದಲಾಗಬಹುದು. ಒಂದು ವಾರ-ಹತ್ತು ದಿನಗಳ ಕಾಲ ನೋಡಿಕೊಂಡು ನಂತರ ಮತ್ತೊಂದು ವೇಳಾಪಟ್ಟಿ ನಿಗದಿಪಡಿಸಲಾಗುವುದು ಎಂದು ಮೆಟ್ರೊ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಯುಎ ವಸಂತ್ ರಾವ್ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ಮಹಿಳೆಯರು ಮಹಿಳಾ ಬೋಗಿಗಳನ್ನು ಹೆಚ್ಚೆಚ್ಚು ಬಳಸುವಂತೆ ಕರೆ ನೀಡಿದ್ದಾರೆ. ಹಲವು ಮಹಿಳೆಯರು ಮಹಿಳಾ ಬೋಗಿಗಳಿಗೆ ಹತ್ತದೆ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಮಹಿಳಾ ಬೋಗಿಗಳನ್ನು ಮಹಿಳೆಯರು ಹೆಚ್ಚೆಚ್ಚು ಬಳಸಿದರೆ ಸಾಮಾನ್ಯ ಬೋಗಿಗಳಲ್ಲಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸಬಹುದು ಎನ್ನುತ್ತಾರೆ ವಸಂತ್ ರಾವ್.

ಪ್ರಸ್ತುತ ಆರು ಬೋಗಿಗಳ ರೈಲಿನಲ್ಲಿ 1500ರಿಂದ 1600 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಸ್ಥಳವನ್ನು ಸೂಕ್ತವಾಗಿ ಬಳಸಿಕೊಂಡರೆ 2 ಸಾವಿರಕ್ಕೆ ಅಧಿಕ ಪ್ರಯಾಣಿಕರು ಪ್ರಯಾಣಿಸಬಹುದು. ಆರು ಬೋಗಿಗಳ ರೈಲಿನಿಂದ ಪ್ರಯಾಣಿಕರ ಸಂಖ್ಯೆ ದಿನಕ್ಕೆ ನಾಲ್ಕೂವರೆ ಲಕ್ಷಗಳಷ್ಟಾಗಿದೆ ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com