ನಮ್ಮ ರಕ್ತ-ಮಾಂಸ ಹಂಚಿಕೊಂಡು ಜನಿಸಿದ ಮಗುವನ್ನು ನಾವೇ ಏಕೆ ಕೊಲ್ಲುತ್ತೇವೆ'?

ನಮ್ಮ ಮಗುವನ್ನು ರಕ್ಷಿಸಿಕೊಳ್ಳಲು ನಾವು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ರಕ್ತ,ಮಾಂಸ ಹಂಚಿಕೊಂಡ ಕಂದಮ್ಮನನ್ನು ನಾವು ಏಕೆ ಕೊಲ್ಲಲು...
ಮಗುವಿನ ಸಮಾಧಿಗಾಗಿ ತೋಡಿದ್ದ ಹಳ್ಳ
ಮಗುವಿನ ಸಮಾಧಿಗಾಗಿ ತೋಡಿದ್ದ ಹಳ್ಳ
ಬೆಳಗಾವಿ: ಹೆಣ್ಣು ಮಗುವನ್ನು ಜೀವಂತವಾಗಿ ಸಮಾಧಿ ಮಾಡಲು ಯತ್ನಿಸಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಮ್ಮ ಮಗುವನ್ನು ರಕ್ಷಿಸಿಕೊಳ್ಳಲು ನಾವು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ರಕ್ತ, ಮಾಂಸ ಹಂಚಿಕೊಂಡ ಕಂದಮ್ಮನನ್ನು ನಾವು ಏಕೆ ಕೊಲ್ಲಲು ಬಯಸುತ್ತೇವೆ ಎಂದು ಮಗುವಿನ ತಂದೆ ಸಂದೀಪ್ ಜಾದರ್ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಬೆಳಗಾವಿಯ ಶಹಾಪೂರದ ಸ್ಮಶಾನದಲ್ಲಿ ಎರಡು ತಿಂಗಳ ಹೆಣ್ಣುಮಗುವನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿದರು ಎಂಬ ವರದಿ ಪ್ರಕಟವಾಗಿತ್ತು. ಮಗು ಮಿದುಳಿನ ರಕ್ತ ಸ್ರಾವದಿಂದ ಬಳಲುತ್ತಿತ್ತು. ಗುರುವಾರ ಸಂಜೆ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ಕೊನೆಯುಸಿರೆಳೆದಿತ್ತು , 
ಶಹಾಪೂರ ಸಮಾಧಿಯಲ್ಲಿ ಕೆಲಸ ಮಾಡುವ ವಾಚ್ ಮನ್ ರಾಜೇಶ್ ಬಂಚ್ ಗುಂಪೊಂದು ಹೆಣ್ಣು ಮಗುವನ್ನು ಜೀವಂತ ಸಮಾಧಿ ಮಾಡಲು ಬಂದಿದ್ದರು ಎಂದು ಹೇಳಿದ್ದರು. ಮಗುವನ್ನು ಗುಂಡಿಯೊಳಗೆ ಹಾಕುವ ವೇಳೆ ಅದು ಕೈಕಾಲು ಆಡಿಸುತ್ತಿತ್ತು. ಹೀಗಾಗಿ ಜೀವಂತ ಮಗುವನ್ನು ಸಮಾಧಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಕಳುಹಿಸಿದ್ದರು. ಮಗು ಸಾವಿನ ಸಮೀಪದಲ್ಲಿದೆ, ಸತ್ತಂತೆಯೇ ಲೆಕ್ಕ ಹೀಗಾಗಿ ಸಮಾಧಿ ಮಾಡಬೇಕೆಂದು ಬಂದವರು ಹೇಳಿದ್ದರು.
ಆದರೆ ಮಗುವಿನ ತಂದೆ ಬೇರೆಯದ್ದೇ ಕಥೆ ಹೇಳುತ್ತಿದ್ದಾರೆ. 45 ದಿನಗಳ ನನ್ನ ಮಗು ಮಿದುಳಿನ ರಕ್ತ ಸ್ರಾವದಿಂದ ಬಳಲುತ್ತಿತ್ತು, ಚಿಂತಾಜನಕ ಸ್ಥಿತಿಯಲ್ಲಿದ್ದ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ಮಗುವಿನ ತಂದೆ ಜಾದರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com