
ಬೆಂಗಳೂರು: ಯಶವಂತಪುರ-ಲಕ್ನೊ ಎಕ್ಸ್ ಪ್ರೆಸ್ ರೈಲಿನಲ್ಲಿ ಮತ್ತು ಬರುವ ಬಿಸ್ಕೆಟ್ ಮತ್ತು ತಂಪು ಪಾನೀಯಗಳನ್ನು ಸೇವಿಸಿ 22ರಿಂದ 50 ವರ್ಷದೊಳಗಿನ ಪುರುಷ ಪ್ರಯಾಣಿಕರು ಪ್ರಜ್ಞಾಹೀನರಾಗಿ ಬಿದ್ದ ಘಟನೆ ನಿನ್ನೆ ಸಂಭವಿಸಿದೆ.
ಕೇವಲ ಪ್ರಜ್ಞಾಹೀನರಾದದ್ದು ಮಾತ್ರವಲ್ಲದೆ ತಮ್ಮ ವಸ್ತುಗಳಾದ ಲ್ಯಾಪ್ ಟಾಪ್, 6 ಮೊಬೈಲುಗಳು, 15,000 ರೂಪಾಯಿ ನಗದು ಮತ್ತು ಬ್ಯಾಗೇಜ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದುಹೋದ ವಸ್ತುಗಳ ಬೆಲೆಯನ್ನು ಇನ್ನೂ ಅಂದಾಜಿಸಿಲ್ಲ ಆದರೂ ಸುಮಾರು 1 ಲಕ್ಷ ಬೆಲೆಬಾಳಬಹುದು ಎಂದು ಹೇಳಲಾಗಿದೆ. ಎಲ್ಲರೂ ಮಧ್ಯಪ್ರದೇಶದ ಜಬಲ್ಪುರ್ ಮತ್ತು ಛತ್ತೀಸ್ ಗಢದ ರಾಯ್ ಪುರ್ ನವರಾಗಿದ್ದಾರೆ.
12539 ಸಂಖ್ಯೆಯ ರೈಲಿನ ಸಾಮಾನ್ಯ ಬೋಗಿಯಲ್ಲಿ ನಿನ್ನೆ ಬೆಳಗ್ಗೆ ಈ ಘಟನೆ ನಡೆದಿದೆ.
ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಅಪರಿಚಿತರಿಂದ ಯಾವುದೇ ವಸ್ತುಗಳನ್ನು ತೆಗೆದುಕೊಳ್ಳಬೇಡಿ ಎಂದು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಕೂಡ ಈ ಘಟನೆ ನಡೆದಿದೆ.
ರೈಲು ಯಶವಂತಪುರ ರೈಲು ನಿಲ್ದಾಣದಿಂದ ಬೆಳಗ್ಗೆ 10.55ಕ್ಕೆ ಹೊರಟಿತು. ರೈಲು ಹೊರಟ ಕೂಡಲೇ ಕೆಆರ್ ಪುರಂ ಹತ್ತಿರ ಸಾಗುತ್ತಿದ್ದಾಗ ಇಬ್ಬರು ಅಪರಿಚಿತರು ಈ 11 ಮಂದಿ ಪುರುಷರೊಂದಿಗೆ ಹಿಂದಿಯಲ್ಲಿ ಮಾತನಾಡುತ್ತಾ ಸ್ನೇಹಿತರಾದರು. ತಮ್ಮ ಮಗಳ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದಾಗಿ ಹೇಳಿ ಅವರಿಗೆ ಬಿಸ್ಕೆಟ್, ತಂಪು ಪಾನೀಯಗಳನ್ನು ನೀಡಿದರು. ಕುಡಿದ ಸ್ವಲ್ಪ ಹೊತ್ತಿನಲ್ಲಿಯೇ ಎಲ್ಲರೂ ಮತ್ತು ಬಂದಂತಾಗಿ ಪ್ರಜ್ಞೆತಪ್ಪಿ ಮಲಗಿದರು.
ಸಾಯಂಕಾಲ 5.45ರ ಸುಮಾರಿಗೆ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಗೆ ಗುಂಡೂರು ಜಂಕ್ಷನ್ ಹತ್ತಿರ ರೇಣಿಗುಂಟಾ ಎಂಬ ಬಳಿ ರೈಲು ಚಲಿಸುತ್ತಿದ್ದಾಗ ಕರೆ ಬಂತು. ಕೆಲವು ಪ್ರಯಾಣಿಕರು ಪ್ರಜ್ಞೆತಪ್ಪಿ ಬೋಗಿಯಲ್ಲಿ ಮಲಗಿದ್ದಾರೆ ಎಂದು. ರೈಲು ಗುಡೂರು ಬಳಿ ನಿಂತಿತು. ಅಲ್ಲಿಗೆ ರೈಲ್ವೆ ರಕ್ಷಣಾ ಸಿಬ್ಬಂದಿ ಬಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಎಬ್ಬಿಸಿ ಗುಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.
Advertisement