ಬೆಂಗಳೂರು: ವಾರಾಂತ್ಯಗಳಲ್ಲಿ ಚರ್ಚ್ ಸ್ಟ್ರೀಟ್ ವಾಹನ ಮುಕ್ತವಾಗಿಸಲು ಚಿಂತನೆ

ನಗರದ ಬ್ರಿಗೇಡ್ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆಗಳ ಜಂಕ್ಷನ್ ನಲ್ಲಿ ನ್ಯೂಯಾರ್ಕ್ ಟೈಮ್ಸ್ ಸ್ಕ್ವೈರ್ ....
ಹೊಸದಾಗಿ ಉದ್ಘಾಟನೆಗೊಂಡ ಚರ್ಚ್ ಸ್ಟ್ರೀಟ್
ಹೊಸದಾಗಿ ಉದ್ಘಾಟನೆಗೊಂಡ ಚರ್ಚ್ ಸ್ಟ್ರೀಟ್

ಬೆಂಗಳೂರು: ನಗರದ ಬ್ರಿಗೇಡ್ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆಗಳ ಜಂಕ್ಷನ್ ನಲ್ಲಿ ನ್ಯೂಯಾರ್ಕ್ ಟೈಮ್ಸ್ ಸ್ಕ್ವೈರ್ ಮಾದರಿಯಲ್ಲಿ ಬೆಂಗಳೂರು ಸ್ಕ್ವೈರ್ ನಿರ್ಮಿಸಲು ಸರ್ಕಾರ ಪರಿಗಣಿಸುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಅಮೆರಿಕಾದ ನ್ಯೂಯಾರ್ಕ್ ಸಿಟಿಯ ಮಿಡ್ ಟೌನ್ ಮಾನ್ ಹಟ್ಟನ್ ವಿಭಾಗದಲ್ಲಿ ಪ್ರಮುಖ ವಾಣಿಜ್ಯ ಕೇಂದ್ರ, ಪ್ರವಾಸಿ ತಾಣ, ಮನರಂಜನಾ ಕೇಂದ್ರ ಟೈಮ್ ಸ್ಕ್ವಾರ್ ಆಗಿದ್ದು ಇಲ್ಲಿ ವರ್ಷಕ್ಕೆ ಸುಮಾರು 5 ಕೋಟಿ ಮಂದಿ ಭೇಟಿ ನೀಡುತ್ತಾರೆ. ಇದೇ ರೀತಿ ಬೆಂಗಳೂರಿನಲ್ಲಿ ಬೆಂಗಳೂರು ಸ್ಕ್ವಾರ್ ರಚಿಸಲು ಸರ್ಕಾರ ಮುಂದಾಗಿದೆ ಎಂದು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಇಲ್ಲಿ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರ್ ಸ್ಥಾಪನೆಯ ಚರ್ಚ್ ಸ್ಟ್ರೀಟ್ ನ್ನು ಉದ್ಘಾಟಿಸಿದರು.

ವಾರಾಂತ್ಯಗಳಲ್ಲಿ ಚರ್ಚ್ ಸ್ಟ್ರೀಟ್ ನ್ನು ವಾಹನ ಮುಕ್ತಗೊಳಿಸುವ ಕುರಿತು ಚರ್ಚಿಸಲು ಸಭೆಯನ್ನು ನಡೆಸಲಾಗುವುದು ಎಂದು ಜಾರ್ಜ್ ತಿಳಿಸಿದರು. ರಾಮಲಿಂಗಾ ರೆಡ್ಡಿ ಮತ್ತು ಶಾಸಕ ಎನ್.ಎ.ಹಾರಿಸ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇಲ್ಲಿ ಅನೇಕ ಮಂದಿ ಕಾಂಗ್ರೆಸ್ ಬೆಂಬಲಿಗರು ಸೇರಿ ಎನ್.ಎ.ಹಾರಿಸ್ ಅವರ ಪರ ಘೋಷಣೆ ಕೂಗುವುದು ಕಂಡುಬಂತು.

ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಕಳಿಪುರಂ ಮೇಲ್ಸೇತುವೆ/ಕೆಳಸೇತುವೆ, ಎಂ.ಜಿ.ರಸ್ತೆಯಲ್ಲಿ ಪಾದಚಾರಿ ಮಾರ್ಗದ ಮೇಲ್ದರ್ಜೆಗೇರಿಸುವಿಕೆ, ಫ್ರೀಡಂ ಪಾರ್ಕ್ ನಲ್ಲಿ ಬಹು ಹಂತದ ಕಾರು ಪಾರ್ಕಿಂಗ್ ಯೋಜನೆಯನ್ನು ಉದ್ಘಾಟಿಸಿದರು. ಬೆಳ್ಳಂದೂರು ಕೆರೆಯ ಪುನರುಜ್ಜೀವನ ಕೆಲಸ ಕಾಮಗಾರಿಯನ್ನು ವೀಕ್ಷಿಸಿದ ಅವರು ಕೆಲಸವನ್ನು ತ್ವರಿತವಾಗಿ ನಡೆಸುವಂತೆ ಸೂಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com