ದ್ವಿತೀಯ ಪಿಯುಸಿ ಪರೀಕ್ಷೆ: ಮೊದಲ ದಿನ 30 ವಿದ್ಯಾರ್ಥಿಗಳಿಗೆ ಬರೆಯಲು ನಿರಾಕರಣೆ

ಪರೀಕ್ಷಾ ಕೊಠಡಿಗೆ ಅರ್ಧ ಗಂಟೆ ಮೊದಲೇ ತಲುಪಬೇಕ ಎಂದು ಪಿಯುಸಿ ಶಿಕ್ಷಣ ಇಲಾಖೆ ಮತ್ತು ....
ಬೆಂಗಳೂರಿನ ಪರೀಕ್ಷಾ ಕೇಂದ್ರದೊಳಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಸಂಭಾಷಣೆಯಲ್ಲಿ ತೊಡಗಿರುವುದು
ಬೆಂಗಳೂರಿನ ಪರೀಕ್ಷಾ ಕೇಂದ್ರದೊಳಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಸಂಭಾಷಣೆಯಲ್ಲಿ ತೊಡಗಿರುವುದು

ಬೆಂಗಳೂರು: ಪರೀಕ್ಷಾ ಕೊಠಡಿಗೆ ಅರ್ಧ ಗಂಟೆ ಮೊದಲೇ ತಲುಪಬೇಕ ಎಂದು ಪಿಯುಸಿ ಶಿಕ್ಷಣ ಇಲಾಖೆ ಮತ್ತು ಕಾಲೇಜು ಮುಖ್ಯಸ್ಥರ ಎಚ್ಚರಿಕೆ ನಂತರವೂ ಕೆಲವು ವಿದ್ಯಾರ್ಥಿಗಳು ನಿರ್ಲಕ್ಷ್ಯ ಮಾಡಿ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡ ಘಟನೆ ನಿನ್ನೆ ಆರಂಭಗೊಂಡಿರುವ ದ್ವಿತೀಯ ಪಿಯುಸಿ ಪರೀಕ್ಷೆ ದಿನ ನಡೆದಿದೆ.

ಬೆಂಗಳೂರಿನ ಕೊಲ್ಸ್ ಪಾರ್ಕ್ ನಲ್ಲಿ ಗುಡ್ವಿನ್ ಶಾಲೆಯ ಪರೀಕ್ಷಾ ಕೇಂದ್ರಕ್ಕೆ 45 ನಿಮಿಷ ತಡವಾಗಿ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷಾರ್ಥಿಗಳು ಅವಕಾಶ ನೀಡಲಿಲ್ಲ.
ತಡವಾಗಿ ಬಂದ ವಿದ್ಯಾರ್ಥಿಗಳಿಗೆ ಆರಂಭದಲ್ಲಿ ಮೇಲ್ವಿಚಾರಕರು ಅನುಮತಿ ನೀಡಿದ್ದರು. ಆದರೆ ಬೇರೆ ವಿದ್ಯಾರ್ಥಿಗಳು ವಿರೋಧಿಸಿದ್ದರಿಂದ ಅವರನ್ನು ಹೊರಗೆ ಕಳುಹಿಸಲಾಯಿತು. ನಾವೆಲ್ಲರೂ 10.15ರ ಸಮಯಕ್ಕೆ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆ ಸಿಕ್ಕಿ ಬರೆಯುತ್ತಿದ್ದೆವು. 10.50ರ ಹೊತ್ತಿಗೆ ಬಂದವರನ್ನು ಕೊಠಡಿ ಮೇಲ್ವಿಚಾರಕರು ಆರಂಭದಲ್ಲಿ ಪರೀಕ್ಷೆ ಬರೆಯಲು ಬಿಟ್ಟರು. ನಾವು ಆಕ್ಷೇಪ ವ್ಯಕ್ತಪಡಿಸಿದ್ದ ಕಾರಣ ಅವರನ್ನು ಮತ್ತೆ ಹೊರಗೆ ಕಳುಹಿಸಿದರು ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ. ಹೀಗೆ ಮೊದಲ ದಿನ 30 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ.

ಈಗಿರುವ ಪರೀಕ್ಷಾ ವ್ಯವಸ್ಥೆಯೊಳಗೆ ವಿದ್ಯಾರ್ಥಿಗಳಿಗೆ ಯಾದೃಚ್ಛಿಕವಾಗಿ ಪರೀಕ್ಷಾ ಕೇಂದ್ರಗಳನ್ನು ನೀಡಲಾಗಿತ್ತು. ವಿದ್ಯಾರ್ಥಿಗಳಿಗೆ ತುಂಬ ದೂರದಲ್ಲಿ ಪರೀಕ್ಷಾ ಕೇಂದ್ರಗಳನ್ನು ನೀಡಲಾಗಿತ್ತು. 2016ರಲ್ಲಿ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳು ಅರ್ಧ ಗಂಟೆ ಮೊದಲೇ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕೆಂದು ಸೂಚಿಸಲಾಗಿತ್ತು. ಆದರೆ ಹಲವು ಅಭ್ಯರ್ಥಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಪಿಯುಸಿ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.

ನನಗೆ ನನ್ನ ತಪ್ಪುಗಳು ಅರ್ಥವಾಗುತ್ತದೆ. ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ತಲುಪಬೇಕಾಗಿತ್ತು. ಆದರೆ ಟ್ರಾಫಿಕ್ ನಲ್ಲಿ  ಸಿಲುಕಿಹಾಕಿಕೊಂಡು ತಡವಾಗಿ ತಲುಪಿದೆ. ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ತಲುಪಲು ಅರ್ಧ ಗಂಟೆ ಸಾಕು, ಆದರೆ ಇಂದು ಟ್ರಾಫಿಕ್ ಇತ್ತು ಎನ್ನುತ್ತಾರೆ ವಿದ್ಯಾರ್ಥಿಯೊಬ್ಬರು.

ತಡವಾಗಿ ಬಂದ ವಿದ್ಯಾರ್ಥಿಗಳ ಪೋಷಕರು ಕೂಡ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪರೀಕ್ಷಾಧಿಕಾರಿಗಳನ್ನು ಮನವಿ ಮಾಡಿಕೊಂಡರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಪರೀಕ್ಷೆ ಕಳೆದುಕೊಂಡ ವಿದ್ಯಾರ್ಥಿಗಳು ಮೇ/ಜೂನ್ ನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಕುಳಿತುಕೊಳ್ಳಬಹುದು.

ನಿನ್ನೆಯ ಮೊದಲ ದಿನ ಪರೀಕ್ಷೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪರೀಕ್ಷಾ ಕೇಂದ್ರಗಳಿಗೆ ಸರಿಯಾದ ಸಮಯಕ್ಕೆ ಪ್ರಶ್ನೆಪತ್ರಿಕೆಗಳು ಬಂದಿದ್ದು ಯಾವುದೇ ವಿಳಂಬವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com