ಮೈಸೂರು: ಅಕ್ರಮ ಮಾರಕಾಸ್ತ್ರಗಳನ್ನು ಹೊಂದಿದ ಹಿನ್ನೆಲೆಯಲ್ಲಿ ನಂಜನಗೂಡು ಪಟ್ಟಣ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ಕಿಂಗ್ ಪಿನ್ ಶಸ್ತ್ರಾಸ್ತ್ರ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದಾನೆ.
ಪ್ರಕರಣ ಸಂಬಂಧ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೊಲೆ ಅಪರಾಧಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ, ಅಪ್ಸರ್ ಖಾನ್, ಬಿಜೆಪಿ ಮುಖಂಡ ಧನರಾಜ್ ಬೋಲಾ, ಸಾದಿಕ್ ಪಾಷಾ, ಮತ್ತು ಶೆಹನ್ ಶಾ ಬಂಧಿತ ಆರೋಪಿಗಳು. ಬಂಧಿತರೆಲ್ಲಾ ನಂಜನಗೂಡು ನಗರದ ನೀಲಕಂಠ ನಗರದವರಾಗಿದ್ದಾರೆ.
ಬಂಧಿತರಿಂದ 1 ಪಿಸ್ತೂಲ್ 12 ಸಜೀವ ಗುಂಡುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಖಾನ್ ಉತ್ತರ ಪ್ರದೇಶದ ವ್ಯಕ್ತಿಯೊಂದಿಗೆ ಜೈಲಿನಲ್ಲಿದ್ದುಕೊಂಡೇ ಸಂಪರ್ಕ ಸಾಧಿಸಿದ್ದ. ಆಸ್ತಿ ಸಂಬಂಧಿತ ಅಪರಾಧ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು. ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದ, ಜೈಲಿನಲ್ಲಿದ್ದುಕೊಂಡೇ ಶಸ್ತ್ರಾಸ್ತ್ರ ಮಾರಾಟದಲ್ಲಿ ತೊಡಗಿದ್ದ,
ಈಗಾಗಲೇ 2 ಕೊಲೆಗಳಲ್ಲಿ ಬಾಗಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತೀರುವ ಅಪ್ಸ್‍ರ್ ಖಾನ್ ಜೈಲಿನಿಂದಲೇ ಧನರಾಜ್ ಬೂಲಾಗೆ ಉತ್ತರ ಪ್ರದೇಶದ ಮೂಲದ ಶಸ್ತ್ರಾಸ್ತ ಮಾರಾಟಗಾರನ ಖಚಿತ ವಿಳಾಸ ನೀಡಿ ಈ ಪಿಸ್ತೂಲ್ ಹಾಗೂ ಗುಂಡುಗಳು ಧನರಾಜ್ ಬೂಲಾ ಕೈ ಸೇರುವಂತೆ ವ್ಯವಹಾರ ನಡೆಸಿದ್ದ ಎಂದು ಹೇಳಲಾಗಿದೆ.