ರಾಜ್ಯ ಸರ್ಕಾರದ ವಿಷನ್-2025: ದಾಖಲೆಯಲ್ಲಿ ಏನೇನಿದೆ?

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆಮಾಡಿರುವ ನವ ಕರ್ನಾಟಕ ವಿಷನ್ 2025 ದಾಖಲೆಯಲ್ಲಿ ...
ವಿಷನ್ 2025 ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ವಿಷನ್ 2025 ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆಮಾಡಿರುವ ನವ ಕರ್ನಾಟಕ ವಿಷನ್ 2025 ದಾಖಲೆಯಲ್ಲಿ ಎಲ್ಲರಿಗೂ ಕೈಗೆಟಕುವ ದರದಲ್ಲಿ ವಸತಿ, ರಾಜ್ಯಾದ್ಯಂತ ಹವಾಮಾನ ರಸ್ತೆ ಜಾಲ, 75 ಲಕ್ಷ ಹೆಚ್ಚುವರಿ ಉದ್ಯೋಗ ಮತ್ತು ಉತ್ತಮ ಅಂತರ್ಜಾಲ ಸಂಪರ್ಕವನ್ನು ಒಳಗೊಂಡಿದೆ.

ವಿಷನ್ 2025 ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಣುಕಾ ಚಿದಂಬರಂ ಮಾತನಾಡಿ, ದಾಖಲೆಗಳ ತಯಾರಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಸುತ್ತಾಡಿದ್ದೇವೆ. ಇದು ಅತ್ಯಂತ ಜನಸ್ನೇಹಿ ದಾಖಲೆಯಾಗಿದೆ ಯಾಕೆಂದರೆ ಜನರ ಬಳಿ ಹೋಗಿ ಅವರಿಗೆ ಏನೇನು ಬೇಕು ಎಂದು ಕೇಳಿದ್ದೇವೆ. ಜನರಿಂದ ಅಭಿಪ್ರಾಯ, ಬೇಡಿಕೆಗಳನ್ನು ಸಂಗ್ರಹಿಸಿದ ನಂತರ ದಾಖಲೆಗಳನ್ನು ಸಂಗ್ರಹಿಸಿ ಅದನ್ನು ಕಾರ್ಯರೂಪಕ್ಕೆ ತರಲಿದ್ದೇವೆ ಎಂದು ಹೇಳಿದರು.

ವಿಷನ್ 2025ನಲ್ಲಿ 200ಕ್ಕೂ ಹೆಚ್ಚು ಶಿಫಾರಸುಗಳಿದ್ದು ಅವುಗಳು ಶಿಕ್ಷಣ, ಕೃಷಿ, ಆರೋಗ್ಯ ವಲಯ, ಉತ್ತಮ ರಸ್ತೆ ಸೌಕರ್ಯ, ವಸತಿ, ಕಂಪ್ಯೂಟರ್ ಶಿಕ್ಷಣ, ಮಹಿಳಾ ಸಶಕ್ತೀಕರಣ ಮತ್ತು ರಾಜ್ಯದ ಸಂಸ್ಕೃತಿ ಮತ್ತು ಭಾಷೆಗಳ ಅಭಿವೃದ್ಧಿಯನ್ನು ಒಳಗೊಂಡಿದೆ. ಪರಿಸರ ಸಂರಕ್ಷಣೆ ಮತ್ತು ಸ್ವಚ್ಛ ಇಂಧನ ಬಳಕೆ, ಮರುಬಳಕೆ ಸಂಪನ್ಮೂಲಗಳಾದ ಸೌರವಿದ್ಯುತ್, ವಾಯು, ಬಯೋಮಾಸ್ ಗಳನ್ನು ಬಳಸಿ 2025ರ ವೇಳೆಗೆ ಇಂಧನದ ಶೇಕಡಾ 50ರಷ್ಟು ಬೇಡಿಕೆ ಈಡೇರಿಸುವುದನ್ನು ವಿಷನ್ 2025ನಲ್ಲಿ ಸೇರಿಸಲಾಗಿದೆ.

ಗ್ರಾಮೀಣ ಭಾಗಗಳಲ್ಲಿ ಉತ್ತಮ ಶಿಕ್ಷಣಕ್ಕೆ, ಗ್ರಾಮೀಣ ಶಾಲೆ ಬಸ್ ಯೋಜನೆಗಳನ್ನು ಪ್ರತಿ ಹಳ್ಳಿಗೆ ನೀಡಲು ದಾಖಲೆಯಲ್ಲಿ ಶಿಫಾರಸು ಮಾಡಲಾಗಿದೆ. ಅಂದರೆ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳಿಗೆ ಬಸ್ ಸಂಚಾರ ವ್ಯವಸ್ಥೆಯಾಗಿದೆ. ಇದರಿಂದ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗುತ್ತದೆ. ಪ್ರಾಥಮಿಕ ಶಾಲಾ ಹಂತದಲ್ಲಿ ಕಂಪ್ಯೂಟರ್ ಕೇಂದ್ರಗಳ ಸ್ಥಾಪನೆ ಮಾಡುವ ಅಗತ್ಯವನ್ನು ಶಿಫಾರಸು ಮಾಡಲಾಗಿದೆ. 12ನೇ ತರಗತಿಯವರೆಗೆ ಪ್ರತಿ ಹೋಬಳಿ ಮಟ್ಟದಲ್ಲಿ ಆಂತರಿಕ ಪ್ರೌಢಶಾಲೆ, ಗ್ರಾಮೀಣ  ಪ್ರದೇಶಗಳಲ್ಲಿ  ವಿದ್ಯುತ್ ಸಂಪರ್ಕವಿಲ್ಲದಿರುವ ಪ್ರದೇಶಗಳಲ್ಲಿ ಪ್ರತಿ ಮಗುವಿಗೆ ಸೌರ ವಿದ್ಯುತ್, ಶಿಕ್ಷಣ ವ್ಯವಸ್ಥೆ ಸರಿಯಾಗಿಲ್ಲದಿರುವ ಕಡೆಗಳಲ್ಲಿ ಅಂಗನವಾಡಿಗಳನ್ನು ಎಲ್ ಕೆಜಿ, ಯುಕೆಜಿ ಮತ್ತು ಆಂತರಿಕ ಶಿಕ್ಷಣ ವ್ಯವಸ್ಥೆಯವರೆಗೆ ಮೇಲ್ದರ್ಜೆಗೇರಿಸುವುದು,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com