ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ಯುವ ಶಕ್ತಿ ದೇಶದ ಭವಿಷ್ಯವನ್ನು ಬದಲಾಯಿಸಬಹುದು: ಪ್ರಧಾನಿ ಮೋದಿ

ದೇಶದ ಯುವಜನತೆಯನ್ನು ಶ್ಲಾಘಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಯುವಜನತೆಯ ಅಪಾರ ...
Published on

ತುಮಕೂರು; ದೇಶದ ಯುವಜನತೆಯನ್ನು ಶ್ಲಾಘಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಯುವಜನತೆಯ ಅಪಾರ ಶಕ್ತಿಯಿಂದ ದೇಶದ ಭವಿಷ್ಯವನ್ನು ಬದಲಾಯಿಸಬಹುದು ಎಂದು ಹೇಳಿದ್ದಾರೆ.

ಅವರು ಇಂದು ತುಮಕೂರಿನಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಯುವ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿ, ಯುವ ಜನಾಂಗದ ಜೊತೆ ಏನೇ ಮಾತನಾಡುವಾಗಲೂ ಏನಾದರೊಂದು ಕಲಿಯಲಿರುತ್ತದೆ. ನಾನು ಯುವಜನತೆಯನ್ನು ಭೇಟಿ ಮಾಡಿ ಅವರೊಂದಿಗೆ ಮಾತನಾಡಿ, ಅವರ ಮಾತುಗಳನ್ನು ಕೇಳಿ ಅವರ ಆಶಾವಾದ ಮತ್ತು ಸ್ಪೂರ್ತಿಗನುಗುಣವಾಗಿ ಕೆಲಸ ಮಾಡಲು ಇಚ್ಛಿಸುತ್ತೇನೆ ಎಂದಿದ್ದಾರೆ.

2014ರಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿಯನ್ನು ಬಳಸಲು ಸರ್ಕಾರ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ಇಂದು ಯುವಕರು ತಮ್ಮದೇ ಸ್ವಂತ ಉದ್ಯಮ ಆರಂಭಿಸಬಹುದು. ಬ್ಯಾಂಕೇತರ ಖಾತ್ರಿಯ ಸಾಲ ಪಡೆಯಬಹುದು. ಇದಕ್ಕಾಗಿ ಪ್ರಧಾನ ಮಂತ್ರಿಯವರ ಹಣ ಯೋಜನೆಯನ್ನು ಸರ್ಕಾರ ಆರಂಭಿಸಿದೆ. ಇದುವರೆಗೆ ಸುಮಾರು 11 ಕೋಟಿ ರೂಪಾಯಿ ಸಾಲವನ್ನು ಹಣ ಯೋಜನೆಯಡಿ ನೀಡಲಾಗಿದೆ. ಕರ್ನಾಟಕದ ಯುವಕರಿಗೆ 14.1 ದಶಲಕ್ಷ ಸಾಲವನ್ನು ನೀಡಲಾಗಿದೆ ಎಂದರು.

ಕೌಶಲ್ಯಾಭಿವೃದ್ಧಿ ಮತ್ತು ಸ್ವ ಉದ್ಯೋಗವನ್ನು ಸರ್ಕಾರ ಪ್ರೋತ್ಸಾಹಿಸುವುದಲ್ಲದೆ ಯುವಜನತೆ ಉತ್ಪಾದಿಸಿದ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಮಾರುಕಟ್ಟೆ ಒದಗಿಸಲಿದೆ ಎಂದರು.
ಕರ್ನಾಟಕದ ಜನತೆಯನ್ನು ಶ್ಲಾಘಿಸಿದ ಅವರು, ಧಾರ್ಮಿಕತೆ ಮತ್ತು ತಂತ್ರಜ್ಞಾನಗಳ ನಡುವೆ ಕರ್ನಾಟಕದ ಜನತೆ ಸಮತೋಲನ ಕಾಪಾಡಿಕೊಂಡಿದ್ದಾರೆ. ಇಲ್ಲಿನ ಜನರು ದೇವರು, ಧಾರ್ಮಿಕತೆ ಬಗ್ಗೆಯೂ ಮಾತನಾಡುತ್ತಾರೆ, ಜೊತೆಗೆ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಕೂಡ ಮುಕ್ತವಾಗಿ ಚರ್ಚೆ ನಡೆಸುತ್ತಾರೆ. ಇದು ದೇಶದ ಇತರ ಭಾಗಗಳಿಗೆ ಕೂಡ ಮಾದರಿಯಾಗಿದೆ ಎಂದರು.

ಯುವ ಜನತೆಯಲ್ಲಿ ನಿಮ್ಮ ಜೀವ ನಿರ್ಣಯವೇನೆಂದು ಕೇಳಿದ ಅವರು, ನಾನು ಕೂಡ ನನ್ನ ಜೀವನದಲ್ಲಿ ಈ ಪ್ರಶ್ನೆಯನ್ನು ಕೇಳಿಕೊಂಡಿದ್ದೆ. ಈ ಪ್ರಶ್ನೆ ಬಂದ ತಕ್ಷಣ ಜೀವನದ ಹಾದಿ ಸ್ಪಷ್ಟವಾಗುತ್ತಾ ಹೋಗುತ್ತದೆ ಎಂದು ಪ್ರಧಾನಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com