ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆ ಕೊನೆಗೂ ಉದ್ಘಾಟನೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬದಲಿ ರಸ್ತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ...
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು; ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬದಲಿ ರಸ್ತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಈ ರಸ್ತೆಯಿಂದ ವೈಟ್ ಫೀಲ್ಡ್, ಹೊಸಕೋಟೆ, ಕೆ.ಆರ್.ಪುರಂ ಮತ್ತು ಹೊರ ವರ್ತುಲ ರಸ್ತೆಯ ನಿವಾಸಿಗಳಿಗೆ ವಿಮಾನ ನಿಲ್ದಾಣಕ್ಕೆ ಹೋಗಲು ಹತ್ತಿರವಾಗಲಿದೆ. ಕಳೆದ ವರ್ಷವೇ ಈ ರಸ್ತೆ ಉದ್ಘಾಟನೆಗೊಳ್ಳಬೇಕಿತ್ತು.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ಸಾರ್ವಜನಿಕ ಇಲಾಖೆಯ ಉನ್ನತ ಅಧಿಕಾರಿ, ಬೇಗೂರು ಮತ್ತು ವಿಮಾನ ನಿಲ್ದಾಣದ ನಡುವಿನ ಅಂತರ 450 ಮೀಟರ್ ಗಳಿದ್ದು ಅದನ್ನು ಹೊಸದಾಗಿ ಮುಕ್ತಾಯಗೊಳಿಸಲಾಗಿದೆ. ಇದು 6 ಪಥದ ದಾರಿಯಾಗಿದ್ದು ಚತುಷ್ಪಥವನ್ನು ಸಂಚಾರಕ್ಕೆ ಬಳಸಬಹುದಾಗಿದೆ ಎಂದು ಹೇಳಿದರು. ಇನ್ನು ಮುಂದೆ ವಿಮಾನ ನಿಲ್ದಾಣಕ್ಕೆ ಹೋಗುವವರು ಮೈಲನಹಳ್ಳಿ ಕ್ರಾಸ್ ನಿಂದ ಬೇಗೂರಿಗೆ 2.1 ಕಿಲೋ ಮೀಟರ್ ಉದ್ದದ ರಸ್ತೆಯನ್ನು ಬಳಸಿ ನಂತರ ಬೇಗೂರಿನಿಂದ ವಿಮಾನ ನಿಲ್ದಾಣದ ಹೊಸ ರಸ್ತೆಯನ್ನು ಬಳಸಬಹುದು ಎಂದು ಹೇಳಿದರು.

ರಸ್ತೆ ಉದ್ಘಾಟನೆ ವಿಳಂಬವಾಗಲು ಕಾರಣವೇನೆಂದು ಕೇಳಿದರೆ, ಭೂ ಒತ್ತುವರಿ ವಿಳಂಬವಾಯಿತು. ಕೇಬಲ್ ನ್ನು ವರ್ಗಾಯಿಸಲು ಬೆಸ್ಕಾಂ ಕೂಡ ಅಧಿಕ ಸಮಯ ತೆಗೆದುಕೊಂಡಿತು ಎಂದು ಹೇಳುತ್ತಾರೆ.

ರಸ್ತೆ ಕೊನೆಗೂ ಉದ್ಘಾಟನೆಗೊಂಡಿದ್ದು ಇದರಿಂದ ರಾಷ್ಟ್ರೀಯ ಹೆದ್ದಾರಿ 7 ಮತ್ತು ಹೆಬ್ಬಾಳ ಮೇಲ್ಸೇತುವೆ, ಕೆ.ಆರ್.ಪುರಂ, ಮೇಕ್ರಿ ಸರ್ಕಲ್ ಮತ್ತು ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎನ್ನುತ್ತಾರೆ ಸಾರಿಗೆ ತಜ್ಞ ಸಂಜೀವ್ ದ್ಯಾಮನ್ನವರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com