ಬೆಂಗಳೂರು: ದೂರವಾಣಿ ನಗರದ ಐಟಿಐ ಇನ್ ಸ್ಟಿಟ್ಯೂಟ್ ನಲ್ಲಿ ಶಾಸಕ ಭೈರತಿ ಬಸವರಾಜ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು, ಈ ವೇಳೆ ಮಾಧ್ಯಮದವರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಸಣ್ಣ ತಿಕ್ಕಾಟದಿಂದ ಕೆಲ ಕಾಲ ಗೊಂದಲದ ವಾತಾವರಣ ಏರ್ಪಟ್ಟಿತ್ತು.
ವೇದಿಕೆಯಿಂದ ಸುಮಾರು 20 ಅಡಿ ದೂರದಲ್ಲಿ ಮಾಧ್ಯಮದವರಿಗೆ ಸ್ಥಳ ಕಾದಿರಿಸಲಾಗಿತ್ತು, ಇದರ ಮುಂದಿನ ಸಾಲುಗಳಲ್ಲಿ ಸೀಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕುಳಿತಿದ್ದರು, ಈ ವೇಳೆಗಾಗಲೇ ಕೆಲ ಮಾಧ್ಯಮದವರು ಕ್ಯಾಮೆರಾಗಳ ಜೊತೆ ಆಸೀನರಾಗಿದ್ದರು, ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಬರುವ ವೇಳೆಗೆ ಬಸ್ ಮತ್ತು ಕಾರುಗಳಲ್ಲಿ ಸುಮಾರು 20 ಪತ್ರಕರ್ತರು ಜೊತೆಯಲ್ಲಿ ಆಗಮಿಸಿದರು,
ಈ ವೇಳೆ ಬಂದ ಪತ್ರಕರ್ತರು ಪೋಡಿಯಂ ನಲ್ಲಿ ಬಂದು ಕುಳಿತರು, ಹೀಗಾಗಿ ಹಿಂದೆ ಕುಳಿತಿದ್ದವರಿಗೆ ನೋಡು ಏನು ಕಾಣುತ್ತಿರಲಿಲ್ಲ, ಹೀಗಾಗಿ ಎರಡು ಗುಂಪುಗಳ ನಡುವೆ ಗುಂಪು ಘರ್ಷಣೆ ನಡೆಯಿತು, ಈ ವೇಳೆ ಕೈಕೈ ಮಿಲಾಯಿಸಲಾಯಿತು, ಈ ವೇಳೆ ಶಾಸಕ ಬೈರತಿ ಬಸವರಾಜ್ ಸಮಾಧಾನವಾಗುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ,
ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಅಲ್ಲಿಂದ ತಮ್ಮ ಕ್ಯಾಮೆರಾಗಳನ್ನು ಎತ್ತಿಕೊಂಡು ಹೊರ ನಡೆದರು.ಕಾರ್ಯಕ್ರಮ ಬಹಿಷ್ಕರಿಸಿ ಅಲ್ಲಿಂದ ಹೊರ ನಡೆದರು. ಕೆಲ ಕ್ಷಣದಲ್ಲಿ ಪಕ್ಷದ ಕೆಲ ಕಾರ್ಯಕರುತರು ಮತ್ತು ಪೊಲೀಸರು ಅವರನ್ನು ವಾಪಸ್ ಕರೆ ತಂದರು. ನಂತರ ವಾಪಸ್ ಬಂದ ಪತ್ರಕರ್ತರು ಕಾರ್ಯಕ್ರಮ ಶೂಟಿಂಗ್ ನಲ್ಲಿ ಪಾಲ್ಗೊಂಡರು.