13 ಕ್ರೀಡಾ ಸಾಧಕರಿಗೆ 2017ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2017ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟಿಸಿದೆ.13 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2017ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟಿಸಿದೆ.ಕ್ರೀಡಾಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಮಹನೀಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಉಡುಪಿಯಲ್ಲಿ ಏಕಲವ್ಯ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದರು.13 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲಾಗುತ್ತಿದೆ. ಸಾಧಕರಿಗೆ 2 ಲಕ್ಷ ರೂಪಾಯಿ ನಗದು ಹಾಗೂ ಏಕಲವ್ಯ ಕಂಚಿನ ಪ್ರತಿಮೆ ನೀಡಲಾಗುವುದು ಎಂದು ಅವರು ಹೇಳಿದರು.

ವಿಜೇತರು: ಹರ್ಷಿತ ಎಸ್‌(ಅಥ್ಲೆಟಿಕ್),  ರಾಜೇಶ್ ಪ್ರಕಾಶ್ ಉಪ್ಪಾರ್(ಬ್ಯಾಸ್ಕೇಟ್ ಬಾಲ್‌), ಪೂರ್ವಿಶ್‌ ಎಸ್‌ ರಾಮ್(ಬ್ಯಾಡ್ಮಿಂಟನ್‌), ರೇಣುಕಾ ದಂಡಿನ್‌(ಸೈಕ್ಲಿಂಗ್‌), ಮಯೂರ್ ಡಿ ಭಾನು(ಶೂಟಿಂಗ್‌), ಕಾರ್ತಿಕ್‌ ಎ(ವಾಲಿಬಾಲ್‌), ಮಾಳವಿಕ ವಿಶ್ವನಾಥ್(ಈಜು), ಕೀರ್ತನಾ ಟಿ.ಕೆ(ರೋಯಿಂಗ್), ಅಯ್ಯಪ್ಪ ಎಂ.ಬಿ(ಹಾಕಿ), ಸುಕೇಶ್‌ ಹೆಗ್ಡೆ(ಕಬಡ್ಡಿ), ಗುರುರಾಜ(ಭಾರ ಎತ್ತುವುದು), ಸಂದೀಪ್ ಬಿ ಕಾಟೆ(ಕುಸ್ತಿ), ರೇವತಿ ನಾಯಕ ಎಂ (ಪ್ಯಾರಾ ಈಜುಪಟು)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com