ಶಿವಮೊಗ್ಗ: ಅಗ್ನಿ ದುರಂತದಲ್ಲಿ ನಾಶವಾಗಿ ಹೋಗಿದ್ದ ಶರಾವತಿ ಹೈಡೆಲ್ ವಿದ್ಯುತ್ ಯೋಜನೆಯ ನಿಯಂತ್ರಣ ಕೊಠಡಿಗೆ ಇದೀಗ ಹೈಟೆಕ್ ಸ್ಪರ್ಶ ನೀಡಿ ಅತ್ಯಾಧುನಿಕಗೊಳಿಸಲಾಗಿದೆ. ಸ್ಕಾಡಾ(ಮೇಲ್ವಿಚಾರಣೆ ನಿಯಂತ್ರಣ ಮತ್ತು ಅಂಕಿಅಂಶ ಪಡೆಯುವಿಕೆ) ತಂತ್ರಜ್ಞಾನದ ಮೂಲಕ ಅತ್ಯಾಧುನಿಕಗೊಳಿಸಲಾಗಿದ್ದು 6 ತಿಂಗಳಲ್ಲಿ ನಿಯಂತ್ರಣ ಘಟಕಕ್ಕೆ ನವೀಕರಣ ನೀಡಿ ಮೊನ್ನೆ ಶುಕ್ರವಾರ ಇದನ್ನು ಉದ್ಘಾಟಿಸಲಾಯಿತು.
2016ರ ಫೆಬ್ರವರಿ 18ರಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡು ಶರಾವತಿ ಹೈಡಲ್ ವಿದ್ಯುತ್ ನಿಯಂತ್ರಣ ಘಟಕ ಸಂಪೂರ್ಣವಾಗಿ ಹಾನಿಯಾಗಿತ್ತು. ತಾಂತ್ರಿಕ ದೋಷದಿಂದ ಬೆಂಕಿ ಹತ್ತಿ ಉರಿದು ಇತರೆಡೆಗಳಿಗೆ ವಿಸ್ತರಣೆಯಾಗಿ ಕೇಬಲ್ ಗಳು, ಕಟ್ಟಡ ಮತ್ತು ನಿಯಂತ್ರಣ ಕೊಠಡಿ, ಜನರೇಟರ್ ಮತ್ತು ಟರ್ಬಿನ್ ಗಳು ಸಹ ಹಾನಿಗೀಡಾಗಿದ್ದವು. ಹೀಗಾಗಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಇಲ್ಲಿಂದ ಕೆಲ ಸಮಯಗಳವರೆಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿ ಬದಲಿ ಎರಡು ಘಟಕಗಳು ಕಾರ್ಯನಿರ್ವಹಿಸುವಂತೆ ಮಾಡಿತ್ತು.
ಇದಾದ ಬಳಿಕ ಸರ್ಕಾರ ಇಡೀ ಯೋಜನೆಯ ಘಟಕವನ್ನು ನವೀಕರಿಸಲು ನಿರ್ಧರಿಸಿತು. ಅದರ ಪ್ರಕಾರ, ಕೇವಲ 178 ದಿನಗಳಲ್ಲಿ 64 ಕೋಟಿ ರೂಪಾಯಿ ವೆಚ್ಚದಲ್ಲಿ ಘಟಕವನ್ನು ನವೀಕರಿಸಲಾಯಿತು. ಅಗ್ನಿ ಅವಘಡದ ನಂತರ ಕೆಪಿಸಿಎಲ್ ಎಲ್ಲಾ 10 ವಿದ್ಯುತ್ ಉತ್ಪಾದನೆ ಘಟಕಗಳನ್ನು ಅಕ್ಟೋಬರ್ 14ರೊಳಗೆ ದುರಸ್ತಿಗೊಳಿಸಿತು.
ನಂತರ ಕೆಪಿಸಿಎಲ್ ಶರಾವತಿ ಹೈಡಲ್ ವಿದ್ಯುತ್ ನಿಯಂತ್ರಣ ಘಟಕಕ್ಕೆ ಡಿಜಿಟಲ್ ಸ್ಪರ್ಶ ನೀಡಿತು. ಈ ನಿಯಂತ್ರಣ ಘಟಕವನ್ನು ಕೈಗಾರಿಕಾ ಘಟಕಗಳು ಮತ್ತು ಸಾಧನಗಳನ್ನು ನಿಯಂತ್ರಿಸಿ ನಿರ್ವಹಿಸಲು ಬಳಸಲಾಗುತ್ತದೆ. ಪ್ರಸ್ತುತ ಶರಾವತಿ ವಿದ್ಯುತ್ ಘಟಕ 1,035 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುತ್ತದೆ.
Advertisement