
ಬೆಂಗಳೂರು: ಮೈಸೂರು-ತಲಸ್ಸೇರಿ ರೈಲು ಮಾರ್ಗ ಯೋಜನೆಯನ್ನು ಕೈಬಿಡಲು ಸರ್ಕಾರ ನಿರ್ಧರಿಸಿದೆ. ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಈ ಬಗ್ಗೆ ಅಧಿಕೃತ ಘೋಷಣೆಯನ್ನು ಸಂಸತ್ತಿನ ಕಲಾಪದ ವೇಳೆ ಇಂದು ಮಾಡುವ ಸಾಧ್ಯತೆಯಿದೆ.
ಕೊಡಗು ವನ್ಯಮೃಗಗಳ ಏಕೀಕರಣ ರಂಗ ಮತ್ತು ಟ್ರಸ್ಟಿಗಳ ಅಧಿಕಾರಿಗಳ ನಿಯೋಗ ಮತ್ತು ರಾಷ್ಟ್ರೀಯ ವನ್ಯಮೃಗಗಳ ಮಂಡಳಿ ಸದಸ್ಯರುಗಳು ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
ಯೋಜನೆಯ ಅಸಾಧ್ಯತೆ ಬಗ್ಗೆ ರೈಲ್ವೆ ಸಚಿವರು ಈಗಾಗಲೇ ಕೇರಳ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕೊಡಗು ಮತ್ತು ಬೆಂಗಳೂರಿನ ಪರಿಸರತಜ್ಞರು, ವನ್ಯಜೀವ ಸಂರಕ್ಷಣ ಹೋರಾಟಗಾರರು ಮತ್ತು ಇತರ ಕಾರ್ಯಕರ್ತರು ಮೈಸೂರು-ತಲಸ್ಸೇರಿ ರೈಲು ಮಾರ್ಗ ಯೋಜನೆ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಯೋಜನೆ ಜಾರಿಯಾದರೆ ಪರಿಸರ ಮತ್ತು ಜೀವಸಂಕುಲ ಸಮತೋಲನಕ್ಕೆ ಅಪಾರ ಹಾನಿಯಾಗುತ್ತದೆ ಎಂಬುದು ಹೋರಾಟಗಾರರ ವಾದವಾಗಿತ್ತು.
Advertisement