ಲೋಕಾಯುಕ್ತ ಕಚೇರಿಯ ಲೋಹಪತ್ತೆ ಯಂತ್ರ ನಿಷ್ಕ್ರಿಯ: ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ

ಕರ್ನಾಟಕ ಲೋಕಾಯುಕ್ತ ಕಚೇರಿಯಲ್ಲಿ ಭದ್ರತೆಯ ಕೊರತೆಯಿದೆ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಜೆ ಆರೋಪಿಸಿದ್ದಾರೆ. ರಾಜ್ಯ ಸರ್ಕಾರದ ಪ್ರಮುಖ...
ಲೋಕಾಯುಕ್ತ ಕಚೇರಿ ಎದುರು ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾ
ಲೋಕಾಯುಕ್ತ ಕಚೇರಿ ಎದುರು ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾ

ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಕಚೇರಿಯಲ್ಲಿ ಭದ್ರತೆಯ ಕೊರತೆಯಿದೆ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಜೆ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ಪ್ರಮುಖ ಕಚೇರಿಗಳ ಭದ್ರತಾ ಉಪಕರಣಗಳನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಕೂಡ ಅವರು ಹೇಳಿದ್ದಾರೆ.

ಬೆಂಗಳೂರಿನ ಮಲ್ಯ ಆಸ್ಪತ್ರೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಕಚೇರಿ ಮುಂದಿರುವ ಲೋಹಪತ್ತೆ ಯಂತ್ರ(ಮೆಟಲ್ ಡಿಟೆಕ್ಟರ್) ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಬದಲಿ ಉಪಕರಣವನ್ನು ಅಶವಡಿಸುವಂತೆ ಅಥವಾ ದುರಸ್ತಿ ಮಾಡುವಂತೆ ಕಳೆದೆರಡು ವರ್ಷಗಳಲ್ಲಿ ಸರ್ಕಾರಕ್ಕೆ ಕನಿಷ್ಠವೆಂದರೂ 20 ಬಾರಿ ಪತ್ರ ಬರೆಯಲಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರು ಸರ್ಕಾರದಿಂದ ತಮಗೆ ಹೆಚ್ಚು ಭದ್ರತೆ ಬೇಕೆಂದು ಕೋರಿದ್ದರು ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಲೋಕಾಯುಕ್ತ ಕಚೇರಿ ಮುಂದಿನ ಲೋಹಪತ್ತೆ ಯಂತ್ರ ಕೆಲಸ ಮಾಡುತ್ತಿದ್ದರೆ ವಿಶ್ವನಾಥ್ ಶೆಟ್ಟಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿ ಕಚೇರಿ ಪ್ರವೇಶಿಸುತ್ತಿದ್ದಂತೆ ಆತನ ಕೈಯಲ್ಲಿದ್ದ ಆಯುಧವನ್ನು ಪತ್ತೆಹಚ್ಚಿ ದಾಳಿ ನಡೆಯುವುದನ್ನು ತಪ್ಪಿಸಬಹುದಾಗಿತ್ತು. ಇದು ಭದ್ರತೆಯ ಕೊರತೆಯಿಂದಾಗಿ ಘಟನೆ ನಡೆದಿದೆ. ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆ ದಾಳಿ ನಡೆಯಲು ಕಾರಣವಾದ ಎಲ್ಲಾ ಲೋಪದೋಷಗಳನ್ನು ರಾಜ್ಯ ಸರ್ಕಾರ ಪತ್ತೆಹಚ್ಚಬೇಕು ಎಂದು ಸಂತೋಷ್ ಹೆಗ್ಡೆ ಒತ್ತಾಯಿಸಿದ್ದಾರೆ.



ದಾಳಿ ನಂತರ ಲೋಕಾಯುಕ್ತ ಕಚೇರಿಗೆ ಆಗಮಿಸುತ್ತಿರುವ ವಿಧಿವಿಜ್ಞಾನ ತಂಡ

ಈ ಹಿಂದೆ, ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸ ಸೌಧ, ಲೋಕಾಯುಕ್ತ ಕಚೇರಿ, ಎಂ.ಎಸ್.ಬಿಲ್ಡಿಂಗ್, ಹೈಕೋರ್ಟ್ ಗೆ ಹೆಚ್ಚಿನ ಭದ್ರತೆ ಒದಗಿಸಲು ಭದ್ರತಾ ಲೆಕ್ಕಪರಿಶೋಧನೆ ನಡೆಸಲಾಗಿತ್ತು. ಕೊನೆಗೆ ಹೆಚ್ಚಿನ ಭದ್ರತೆಯಿಂದ ಲೋಕಾಯುಕ್ತ ಕಚೇರಿ ಮತ್ತು ಎಂ.ಎಸ್.ಬಿಲ್ಡಿಂಗ್ ನ್ನು ರದ್ದುಪಡಿಸಲಾಗಿತ್ತು. ಎಂ.ಎಸ್.ಬಿಲ್ಡಿಂಗ್ ನಲ್ಲಿ ಹಲವು ಅಧಿಕಾರಿಗಳು ಕೆಲಸ ಮಾಡುತ್ತಿರುವುದರಿಂದ ಅಲ್ಲಿಗೆ ಹೆಚ್ಚಿನ ಭದ್ರತೆ ಬೇಕೆಂದು ಉಪ ಲೋಕಾಯುಕ್ತರು ಕೂಡ ಈ ಹಿಂದೆ ಕಳವಳ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com