
ಬೆಂಗಳೂರು: 2018-19ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಪ್ರವೇಶ ಶುಲ್ಕ ಶೇಕಡಾ 15ರಷ್ಟು ಹೆಚ್ಚಾಗಲಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಶುಲ್ಕ ಹೆಚ್ಚಳಕ್ಕೆ ಒಪ್ಪಿಗೆ ನೀಡಿದ್ದು ಈ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ನಿರ್ವಹಣೆ ಮಧ್ಯೆ ಅಧಿಕೃತ ಒಪ್ಪಂದವೇರ್ಪಟ್ಟಿದೆ.
ಖಾಸಗಿ ವೈದ್ಯಕೀಯ ಕಾಲೇಜುಗಳ ನಿರ್ವಹಣೆ ವೈದ್ಯಕೀಯ ಸೀಟುಗಳ ಶುಲ್ಕವನ್ನು ಇನ್ನಷ್ಟು ಹೆಚ್ಚಿಸುವಂತೆ ಕೇಳಿದ್ದು ಶೇಕಡಾ 15ರಷ್ಟು ಹೆಚ್ಚಿಸಲು ನಾವು ಮುಂದಾಗಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಈ ಬಗ್ಗೆ ಒಪ್ಪಂದವೇರ್ಪಟ್ಟಿದೆ ಎಂದು ಖಾಸಗಿ ವೈದ್ಯಕೀಯ ಕಾಲೇಜುಗಳ ಮಂಡಳಿಯ ಪ್ರತಿನಿಧಿಗಳು ಖಚಿತಪಡಿಸಿದ್ದಾರೆ. ಶೇಕಡಾ 15ರಷ್ಟು ಹೆಚ್ಚಳ ಮಾಡಿ ನಾವು ಒಪ್ಪಂದಕ್ಕೆ ಸಹಿ ಹಾಕಿದ್ದೇವೆ ಎಂದು ಕಾಮೆಡ್ ಕೆ ಉಪಾಧ್ಯಕ್ಷ ಎಂ.ಆರ್.ಜಯರಾಮ್ ತಿಳಿಸಿದ್ದಾರೆ.
ಪ್ರಸ್ತುತ ಮ್ಯಾನೇಜ್ ಮೆಂಟ್ ಕೋಟಾದಡಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳಿಗೆ 6.60 ಲಕ್ಷ ಮತ್ತು ಸರ್ಕಾರಿ ಕೋಟಾದಡಿ 4.40 ಲಕ್ಷ ರೂಪಾಯಿಗಳಿದೆ. ಡೆಂಟಲ್ ಕೋರ್ಸ್ ಗೆ ಖಾಸಗಿ ಕೋಟಾದಡಿ 3.52 ಲಕ್ಷ ಮತ್ತು ಸರ್ಕಾರಿ ಕೋಟಾದಡಿ 2.25 ಲಕ್ಷ ಶುಲ್ಕವಿದೆ.
Advertisement