ನನ್ನನ್ನು ಬಂಧಿಸಿದ್ದಕ್ಕಾಗಿ ಬಿಜೆಪಿ ವಿರುದ್ಧ ಮೊಕದ್ದಮೆ ಹೂಡುವೆ: ಮುತಾಲಿಕ್

ಇದು ಸತ್ಯಕ್ಕೆ ಸಂದ ಜಯ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ...
ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್
ಮಂಗಳೂರು: ಇದು ಸತ್ಯಕ್ಕೆ ಸಂದ ಜಯ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
2009ರ ಮಂಗಳೂರು ಪಬ್ ದಾಳಿ ಪ್ರಕರಣದ ಸಂಬಂಧ ಬಂಧಿಸಲಾಗಿದ್ದ 26 ಆರೋಪಿಗಳು ಆರೋಪಮುಕ್ತರೆಂದು ನ್ಯಾಯಾಲಯ ತೀರ್ಪು ಪ್ರಕಟಿಸಿದ ನಂತರ ಆರ್ಯ ಸಮಾಜದಲ್ಲಿ ಮಾತನಾಡಿದ ಅವರು, ಬಿಜೆಪಿಯವರದ್ದು ನಕಲಿ ಹಿಂದುತ್ವ ಎಂದು ಆರೋಪಿಸಿದ್ದಾರೆ. 
ಕೋರ್ಟ್ ನೀಡಿರುವ ತೀರ್ಪಿನ ಪ್ರತಿಯನ್ನು ಸಂಪೂರ್ಣವಾಗಿ ಓದಿದ ನಂತರ ಮುಂದಿನ ಹೆಜ್ಜೆ ಏನು ಎಂಬುದರ ಬಗ್ಗೆ ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ, 
2009 ರ ಜನವರಿ 24 ರಂದು ರಾತ್ರಿ ಪಾರ್ಟಿ ನಡೆಸುತ್ತಿದ್ದ ಯುವಕ, ಯುವತಿಯರ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಈ ಕುರಿತು ಪ್ರಮೋದ್ ಮುತಾಲಿಕ್ ಸೇರಿದಂತೆ 40ಕ್ಕೂ ಹೆಚ್ಚು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು.  ಪ್ರಕರಣ ನಡೆದ ದಿನ ನಾನು ಪುಣೆಯಲ್ಲಿದ್ದೆ ಎಂದು ಹೇಳಿದ್ದಾರೆ.
ನಾನು ಪುಣೆಯಿಂದ  ವಾಪಸಾಗುವ ವೇಳೆ ನನ್ನನ್ನು ಬೆಳಗಾವಿಯಲ್ಲಿ  ಬಂಧಿಸಲಾಗಿತ್ತು, ಒಂದು ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಮಂಗಳೂರಿನಲ್ಲಿ ಏನಾದರೂ ಈ ರೀತಿ ಮಾಡಿದ್ದರೇ, ಪೊಲೀಸರು ಯಡಿಯೂರಪ್ಪ ಅಥವಾ ಪರಮೇಶ್ವರ್ ಅವರನ್ನು ಬಂಧಿಸುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ, ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಹೂಡಿದ ತಂತ್ರ ಇದು ಎಂದು ದೂರಿದ್ದಾರೆ, ಇದು ಕ್ಷಮಿಸಲಾಗದ ಅಪರಾಧ ಎಂದಿದ್ದಾರೆ.
ಗೋವಾ ಸರ್ಕಾರ ತನ್ನನ್ನು ಬಹಿಷ್ಕರಿಸುವ ಸಂಬಂಧ ದಾವೆ ಹೂಡಿರುವುದಾಗಿ ಹೇಳಿದ್ದಾರೆ. ಬಲ್ಮಠದ ಅಮ್ನೇಶಿಯ ಪಬ್‌ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ 26 ಆರೋಪಿಗಳನ್ನು ಇಲ್ಲಿನ ಮೂರನೇ ಜೆಎಂಎಫ್‌ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ.
ಪ್ರಕರಣವನ್ನು ಸ್ಮರಿಸಿದ ಮುತಾಲಿಕ್ ಘಟನೆ ನಡೆದ ನಂತರ ಯುವಕರ ಪರವಾಗಿ ಸಂತ್ರಸ್ತರ ಬಳಿ ನಾನು ಕ್ಷಮೆ ಕೋರಿದ್ದೇನೆ, ಈ ಪ್ರಕರಣದಿಂದಾಗಿ ಇಂಗ್ಲೀಷ್ ಚಾನೆಲ್ ಗಳಿಂದ ನನಗೆ ಹೆಚ್ಚಿನ ಪಬ್ಲಿಸಿಟಿ ದೊರೆಯಿತು, 
ಇನ್ನೂ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ಬಂಧಿಸಿರುವ ಕೆ.ಟಿ ನವೀನ್ ಮುಗ್ಧನಾಗಿದ್ದೇನೆ ಎಂದು ಹೇಳಿದ್ದಾರೆ ಜೊತೆಗೆ ಆತನ ಪರವಾಗಿ  ವಾದ ಮಾಡಲು ಮುಂಬಯಿಯಿಂದ ವಕೀಲರನ್ನು ಕರೆತರಲಾಗವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com