ಬೆಂಗಳೂರು: ಒಂಟಿ ಮಹಿಳೆ ಕೊಲೆ; ಆರೋಪಿಗಳಿಗಾಗಿ ಹುಡುಕಾಟ

ಕಳೆದ ರಾತ್ರಿ ಚಾಮರಾಜಪೇಟೆಯ 5ನೇ ಕ್ರಾಸ್ ನಲ್ಲಿ ವಾಸವಿದ್ದ 45 ವರ್ಷದ ಮಹಿಳೆಯನ್ನು ಕೊಲೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ ರಾತ್ರಿ ಚಾಮರಾಜಪೇಟೆಯ 5ನೇ ಕ್ರಾಸ್ ನಲ್ಲಿ ವಾಸವಿದ್ದ 45 ವರ್ಷದ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಕೊಲೆಗೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಕುಟುಂಬ ಕಲಹ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಹತ್ಯೆಗೀಡಾದ ಮಹಿಳೆಯನ್ನು ವಿಜಯ ಎಂದು ಗುರುತಿಸಲಾಗಿದೆ. ವಿಜಯ ಚಾಮರಾಜಪೇಟೆಯಲ್ಲಿ ತನ್ನ ಸಾಕು ಮಗಳೊಂದಿಗೆ ವಾಸಿಸುತ್ತಿದ್ದರು. ಸಾಕು ಪುತ್ರಿ ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದು ಕಳೆದ ವಾರ ವಿಜಯಾರ ಇಷ್ಟದ ವಿರುದ್ಧ ಮದುವೆಯಾಗಿದ್ದಳು. ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಸಂಬಂಧಿಯೊಬ್ಬರು ವಿಜಯಾ ಅವರನ್ನು ಕಾಣಲು ಬಂದಿದ್ದ ವೇಳೆ ಕೊಲೆಯಾಗಿದ್ದು ಬೆಳಕಿಗೆ ಬಂದಿದೆ.

ಆಯುಧದಿಂದ ವಿಜಯಾರ ತಲೆಗೆ ಹಿಂದಿನಿಂದ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಮೊನ್ನೆ ಸೋಮವಾರ ಅಪರಾಹ್ನ ವಿಜಯಾ ಮನೆಗೆ ಸಾಕು ಮಗಳು ಮತ್ತು ಆಕೆಯ ಗಂಡ ಬಂದಿದ್ದರಂತೆ. ಈ ಸಂದರ್ಭದಲ್ಲಿ ಸಾಕಷ್ಟು ಜಗಳವಾಗಿದೆ. ಕೊಲೆಯಲ್ಲಿ ಅವರ ಪಾತ್ರವನ್ನು ಪತ್ತೆಹಚ್ಚಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಮರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದು ಕೇಸಿನ ವಿಚಾರಣೆಗೆ ಎರಡು ತಂಡಗಳನ್ನು ರಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com