ಮೈಸೂರು ಕಾರ್ಪೋರೇಟರ್ ವಿರುದ್ಧ ಹಣ ದುರ್ಬಳಕೆ ಆರೋಪ, ಸರ್ಕಾರದ ಕ್ರಮಕ್ಕೆ ಉಪ ಲೋಕಾಯುಕ್ತ ಆಗ್ರಹ

ಮೈಸೂರು ಮಹಾನಗರಪಾಲಿಕೆಯ ಓರ್ವ ಹಾಲಿ ಕಾರ್ಪೊರೇಟರ್, ಓರ್ವ ಮಾಜಿ ಕಾರ್ಪೋರೇಟರ್ ಹಾಗೂ ಇಬ್ಬರು ಅಧಿಕಾರಿಗಳ ವಿರುದ್ಧ ಹಣ ದುರ್ಬಳಕೆ ಆರೋಪ ಕೇಳಿ ಬಂದಿದೆ.
ಮೈಸೂರು ಮಹಾನಗರ ಪಾಲಿಕೆ
ಮೈಸೂರು ಮಹಾನಗರ ಪಾಲಿಕೆ
ಬೆಂಗಳೂರು: ಮೈಸೂರು ಮಹಾನಗರಪಾಲಿಕೆಯ ಓರ್ವ ಹಾಲಿ ಕಾರ್ಪೊರೇಟರ್, ಓರ್ವ ಮಾಜಿ ಕಾರ್ಪೋರೇಟರ್ ಹಾಗೂ ಇಬ್ಬರು ಅಧಿಕಾರಿಗಳ ವಿರುದ್ಧ ಹಣ ದುರ್ಬಳಕೆ ಆರೋಪ ಕೇಳಿ ಬಂದಿದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು  ಉಪ ಲೋಕಾಯುಕ್ತರು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ
ಮೈಸೂರಿನ ಅಶೋಕಪುರಂ ನ ಎರಡು ವಾರ್ಡ್ ಗಳಲ್ಲಿ ಅಸ್ತಿತ್ವದಲ್ಲೇ ಇರದ ’ಸಮುದಾಯ ಭವನ’ ನಿರ್ಮಾಣಕ್ಕಾಗಿ ಪರಿಶಿಷ್ಠ ಜಾತಿ ಕಲ್ಯಾಣ ನಿಧಿಯಿಂದ ಹಣ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಕುತೂಹಲಕಾರಿ ಅಂಶವೆಂದರೆ ದಾಖಲೆಗಳ ಪ್ರಕಾರ 25,000 ಜನಸಂಖ್ಯೆ ಹೊಂದಿರುವ ಈ ಎರಡು ವಾರ್ಡ್ ಗಳಲ್ಲಿ 26 ಸಮುದಾಯ ಸಭಾಂಗಣಗಳನ್ನು ನಿರ್ಮಾನ ಮಾಡಲಾಗಿದೆ. ಆದರೆ ಅವುಗಳಲ್ಲಿ ಒಟ್ಟು 12 ಭವನಗಳು ಅಸ್ತಿತ್ವದಲ್ಲೇ ಇಲ್ಲದಿದ್ದರೂ ಅವುಗಳ ಹೆಸರಲ್ಲಿ ಹಣ ಬಿಡುಗಡೆಯಾಗಿದೆ. ಅಶೋಕಪುರಂನ 7ಮತ್ತು  9ನೇ ನಂಬರ್ ವಾರ್ಡ್ ನಲ್ಲಿ ನಡೆದ ಈ ಹಗರಣ ಬೆಳಕಿಗೆ ಬಂದಿದೆ. 
ವರದಿಗಳ ಪ್ರಕಾರ ಆರೋಪಿಗಳು ವಾರ್ಡ್ ನಲ್ಲಿ ಅಸ್ತಿತ್ವದಲ್ಲಿರುವ ದೇವಾಲಯಗಳನ್ನೇ ಸಮುದಾಯ ಭವನಗಳೆಂದು ತೋರಿಸಿದ್ದಾರೆ.  ಹಗರಣ ನಡೆಸಿದ ಆರೋಪಿಗಳನ್ನು ಕಾರ್ಪೋರೇಟರ್ ಪುರುಷೋತ್ತಮ್ (ವಾರ್ಡ್ ನಂ 7) ಮತ್ತು ಮಾಜಿ ಕಾರ್ಪೊರೇಟರ್ ಪ್ರಭುಮೂರ್ತಿ (ವಾರ್ಡ್ ನಂ 9), ಸಹಾಯಕ ಕಮಿಷನರ್ ಎಚ್.ಕೆ. ದೇವರಾಜು ಮತ್ತು ಸಹಾಯಕ ಎಕ್ಸಿಕ್ಯುಟಿವ್ ಇಂಜಿನಿಯರ್ ನಾರಾಯಣಪ್ರಸಾದ್.ಎಂದು ಗುರುತಿಸಲಾಗಿದೆ.
ಇತ್ತೀಚೆಗೆ ನಿವೃತ್ತರಾದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ ಆದಿ ನೀಡಿದ ವರದಿಯಲ್ಲಿ ರಾಜ್ಯ ಸರ್ಕಾರ ಕಾರ್ಪೋರೇಟರ್ ಪುರುಷೋತ್ತಮ್ ಅವರ ಸದಸ್ಯತ್ವವನ್ನು ರದ್ದು ಮಾಡಬೇಕು, ಪ್ರಭುಮೂರ್ತಿ ವಿರುದ್ಧ ಆರೋಪ ಸಾಬೀತಾಗಿದ್ದು ಅವರ ವಿರುದ್ಧ ಕರ್ನಾಟಕ ಮುನಿಸಿಪಲ್ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.
ಕರ್ನಾಟಕ ಸಿವಿಲ್ ಸರ್ವಿಸ್ (ನಡವಳಿಕೆ) ರೂಲ್ಸ್, 1966 ರಡಿಯಲ್ಲಿ ದೇವರಾಜು ಮತ್ತು ನಾರಾಯಣಪ್ರಸಾದ್ ವಿರುದ್ಧ ಇಲಾಖೆಯ ವಿಚಾರಣೆ ಪ್ರಾರಂಭಿಸಲು ಸರ್ಕಾರ ಒಪ್ಪಿಗೆ ನೀಡಬೇಕೆಂದು ಆದಿ ಶಿಫಾರಸು ಮಾಡಿದ್ದಾರೆ. ತನ್ನ ಆದೇಶವನ್ನು ಮೂರು ತಿಂಗಳಿನಲ್ಲಿ ಕಾರ್ಯಗತಗೊಳಿಸಬೇಕೆಂದು ನ್ಯಾಯಮೂರ್ತಿ ಆದಿ ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ.
ಆರೋಪಿಗಳು ಮತ್ತೆ ಸಾರ್ವಜನಿಕ ಸೇವೆಗಳಿಗೆ ಮರಳಲು ಅಪೇಕ್ಷಿಸುತ್ತಿಲ್ಲ. ಇದನ್ನು ಗಮನಿಸಿದಾಗ ಇಂತಹಾ ಹಗರಣಗಳು ರಾಜ್ಯದ ಇತರೆ ನಗರಪಾಲಿಕೆಗಳಲ್ಲಿ ನಡೆದಿರಬಹುದು, ರಾಜ್ಯ ಸರ್ಕಾರ ಅದನ್ನೂ ಗಮನಿಸಬೇಕು., ಆದಿ ಹೇಳಿದ್ದಾರೆ.
ಮೈಸೂರಿನ ಅಶೋಕಪುರಂನ ನಿವಾಸಿ ಎಸ್. ಚಿದಂಬರ ಎನ್ನುವವರು ಈ ಸಂಬಂಧ ಉಪ ಲೀಕಾಯುಕ್ತರಿಗೆ ದೂರು ಸಲ್ಲಿಸಿದ್ದರು. 2008 ಮತ್ತು 2011ರ ನಡುವೆ ಎರಡು ವಾರ್ಡ್ ಗಳಲ್ಲಿ 26 ಸಮುದಾಯ ಭವನ ನಿರ್ಮಾಣವಾಗಿದೆ ಎಂದು ತೋರಿಸಿದ್ದಾರೆ. ಇದಕ್ಕಾಗಿ ಆರೋಪಿಗಳು ಪರಿಶಿಷ್ಠ ಜಾತಿ ಕಲ್ಯಾಣ ನಿಧಿಯ 2.13 ಕೋಟಿ ರೂ ಅಕ್ರಮವಾಗಿ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com