ಉಡುಪಿ: ಮದ್ಯ ಮಾರಾಟ ಉತ್ತೇಜಿಸಲು ಗ್ರಾಹಕರಿಗೆ ಆಟೋದಲ್ಲಿ ಉಚಿತ ಪ್ರಯಾಣ

ಕಾರ್ಕಳ ತಾಲೂಕಿನ ಅಜೇಕರ್ ಗ್ರಾಮದ ಬಾರ್ ನ ಮಾಲೀಕರೊಬ್ಬರು ತಮ್ಮ ವ್ಯಾಪಾರ ಉತ್ತೇಜನಗೊಳಿಸಲು ಗ್ರಾಹಕರಿಗೆ ಉಚಿತವಾಗಿ ಪ್ರಯಾಣ ವ್ಯವಸ್ಥೆ ಮಾಡಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಉಡುಪಿ: ಕಾರ್ಕಳ ತಾಲೂಕಿನ ಅಜೇಕರ್ ಗ್ರಾಮದ  ಬಾರ್ ನ ಮಾಲೀಕರೊಬ್ಬರು ತಮ್ಮ ವ್ಯಾಪಾರ ಉತ್ತೇಜನಗೊಳಿಸಲು ಗ್ರಾಹಕರಿಗೆ ಉಚಿತವಾಗಿ ಪ್ರಯಾಣ ವ್ಯವಸ್ಥೆ ಮಾಡಿದ್ದಾರೆ.
ಅಜೇಕರ್ ನ ಮಾರುಕಟ್ಟೆ ರಸ್ತೆಯಲ್ಲಿರುವ ರಚನಾ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕ ನವೀನ್ ಆಟೋ ರಿಕ್ಷಾದಲ್ಲಿ ತಮ್ಮ ಗ್ರಾಹಕರಿಗೆ ಉಚಿತವಾಗಿ ಸಂಚಾರ ಏರ್ಪಡಿಸಿದ್ದಾರೆ. ಹೆದ್ದಾರಿಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಗಳನ್ನು, ಮುಚ್ಚಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಬಾರ್ ಗಳಲ್ಲಿ ವ್ಯಾಪಾರ ಕುಸಿದಿದೆ.
ಆಟೋ ರಿಕ್ಷಾದ ಮೇಲೆ ಉಚಿತ ಪ್ರಯಾಣ ಎಂದು ಬರೆದಿರುವ ಬ್ಯಾನರ್ ಹಾಕಿಕೊಂಡು, ನವೀನ್ ಮುಖ್ಯರಸ್ತೆಯಿಂದ ಬಾರ್ ಗೆ ತಮ್ಮ ಆಟೋದಲ್ಲೇ ಡ್ರಾಪ್ ನೀಡುತ್ತಿದ್ದಾರೆ. ಸೋಮವಾರ ಪೂರ್ತಿ ದಿನ ಆಟೋವನ್ನು ಈ ಕೆಲಸಕ್ಕೆ ಬಳಸಿಕೊಂಡಿದ್ದಾರೆ. 
ಕೇವಲ ಅರ್ಧ ಗಂಟೆಯಲ್ಲೇ ಅಜೇಕರ್ ಪೊಲೀಸ್ ಠಾಣೆಯಿಂದ ಬಂದ ಪೊಲೀಸರು ನವೀನ್ ಗೆ ಎಚ್ಚರಿಕೆ ನೀಡಿದ್ದಾರೆ. ನವೀನ್ ಮಾಡುತ್ತಿರುವ ಕೆಲಸದಿಂದ ಕರ್ನಾಟಕ ಅಬಕಾರಿ ಕಾಯ್ದೆ ಉಲ್ಲಂಘನೆಯಾಗಿದೆ, ಶೀಘ್ರವೇ ನವೀನ್ ತಮ್ಮ ಉಚಿತ ಸೇವೆ ನಿಲ್ಲಿಸಬೇಕೆಂದು ಇನ್ಸ್ ಪೆಕ್ಟರ್ ರೋಸಾರಿಯಾ ಡಿಸೋಜಾ ಹೇಳಿದ್ದಾರೆ. ಜೊತೆಗೆ ನವೀನ್ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ ಅನ್ವಯ ಎಫ್ ಐ ಆರ್ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com