ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೇಸಿಗೆ ಶಿಬಿರದಲ್ಲಿ ಭಾಗವಹಿಸುವ ಸರ್ಕಾರಿ ಶಾಲೆ ಮಕ್ಕಳಿಗೆ ಈ ವರ್ಷ ಮಜ್ಜಿಗೆ ಪೂರೈಕೆ

ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸುವ ಬೇಸಿಗೆ ಶಿಬಿರದಲ್ಲಿ ಭಾಗವಹಿಸುವ ಸರ್ಕಾರಿ ಶಾಲೆಗಳಲ್ಲಿ ....

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸುವ ಬೇಸಿಗೆ ಶಿಬಿರದಲ್ಲಿ ಭಾಗವಹಿಸುವ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ನಡೆಸುತ್ತಿರುವ ಮಕ್ಕಳಿಗೆ ಈ ವರ್ಷ ಮಜ್ಜಿಗೆ ನೀಡಲಾಗುತ್ತಿದೆ. ಬೇಸಿಗೆ ಶಿಬಿರದ ಎರಡನೇ ಆವೃತ್ತಿ 'ಸ್ವಲ್ಪ ಓದು-ಸ್ವಲ್ಪ ಮೋಜು'' ಕಾರ್ಯಕ್ರಮವನ್ನು 5 ಮತ್ತು 6ನೇ ತರಗತಿ ತೇರ್ಗಡೆ ಹೊಂದಿದ ಮಕ್ಕಳಿಗೆ ಈ ಶೈಕ್ಷಣಿಕ ವರ್ಷದಲ್ಲಿ ಆಯೋಜಿಸಲಾಗುತ್ತಿದೆ.

ರಾಜ್ಯಾದ್ಯಂತ 7,050 ಸರ್ಕಾರಿ ಶಾಲೆಗಳನ್ನು ಬೇಸಿಗೆ ಶಿಬಿರಗಳಿಗೆ ಗುರುತಿಸಲಾಗಿದ್ದು, ಪ್ರೌಢಶಾಲೆ ತರಗತಿಗಳಿಗೆ ಕಾಲಿಡುವ ಮುನ್ನ ಮಕ್ಕಳ ಮೂಲಜ್ಞಾನವನ್ನು ಸುಧಾರಿಸಲು ಈ ರೀತಿಯ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.

ಈ ಬೇಸಿಗೆ ಶಿಬಿರಕ್ಕೆ ಆಯ್ಕೆ ಮಾಡಿಕೊಂಡಿರುವ ಬಹುತೇಕ ಶಾಲೆಗಳು ಬರಗಾಲಪೀಡಿತ ತಾಲ್ಲೂಕುಗಳಲ್ಲಿವೆ. ಇಲ್ಲಿ ಶಿಬಿರಗಳಲ್ಲಿ ಭಾಗವಹಿಸುವ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಅವರು ಶಿಬಿರಗಳಿಗೆ ಬರುವುದಿಲ್ಲ ಎನ್ನುತ್ತಾರೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್.

ಬೇಸಿಗೆಯಲ್ಲಿ ಹೆಚ್ಚಾಗುವ ತಾಪಮಾನ ಮಕ್ಕಳಿಗೆ ಬಿಸಿಯೂಟ ಮಾತ್ರವಲ್ಲದೆ ಮಧ್ಯಾಹ್ನದ ನಂತರ ಮಜ್ಜಿಗೆ ಒದಗಿಸಲಿದ್ದೇವೆ. ಮಜ್ಜಿಗೆ ಪೂರೈಸಲು ನಾವು ಕರ್ನಾಟಕ ಹಾಲು ಒಕ್ಕೂಟದ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಶುದ್ಧವಾದ ಕುಡಿಯುವ ನೀರು ಒದಗಿಸುವುದು ಕೂಡ ಮುಖ್ಯವಾಗಿರುತ್ತದೆ ಎನ್ನುತ್ತಾರೆ ಸಚಿವ ಸೇಠ್.

ಸ್ವಲ್ಪ ಓದು-ಸ್ವಲ್ಪ ಮೋಜು 5 ವಾರಗಳ ಉಚಿತ ಬೇಸಿಗೆ ಶಿಬಿರವಾಗಿದ್ದು ಮಕ್ಕಳ ಕೌಶಲ್ಯ, ಗಣಿತ ಮತ್ತು ವಿಜ್ಞಾನ ವಿಷಯಗಳ ಕೌಶಲ್ಯಗಳನ್ನು ಸುಧಾರಿಸುವುದಾಗಿದೆ.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸರಳ ಗಣಿತ ಮತ್ತು ಇಂಗ್ಲಿಷ್ ನಲ್ಲಿ ಸರಳ ವಾಕ್ಯಗಳನ್ನು ಓದುವುದಕ್ಕೆ ಕಷ್ಟವಾಗುತ್ತದೆ ಎಂದು ವಾರ್ಷಿಕ ಶಿಕ್ಷಣ ವರದಿಯಿಂದ ತಿಳಿದುಬಂದಿದೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗದಿದ್ದರೆ ಮುಂದೆ ಕಷ್ಟವಾಗುತ್ತದೆ ಎಂಬ ಉದ್ದೇಶದಿಂದ ಈ ಬೇಸಿಗೆ ಶಿಬಿರ ಆಯೋಜಿಸಲಾಗುತ್ತಿದೆ ಎಂದು ತನ್ವೀರ್ ಸೇಠ್ ತಿಳಿಸಿದರು.

ತಾಲ್ಲೂಕು ಮಟ್ಟದಲ್ಲಿ ಪೋಷಕರ ಮನವೊಲಿಸಿ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸುವಂತೆ ಮನವೊಲಿಸಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ. ಈ ಮಧ್ಯೆ ಪ್ರತಿವರ್ಷದಂತೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಈ ವರ್ಷ ಬೇಸಿಗೆ ರಜೆಗಳಲ್ಲಿ ಕೂಡ ವಿಸ್ತರಿಸಲಾಗುವುದು. ಅದನ್ನು ಸದ್ಯದಲ್ಲಿಯೇ ಘೋಷಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com