ರಾಜ್ಯದ ಮೊದಲ ಸಂಪೂರ್ಣ ಮಹಿಳಾ ರೈಲು ನಿಲ್ದಾಣದಲ್ಲಿ ಸಿಬ್ಬಂದಿಗೆ ತಮ್ಮ ಸುರಕ್ಷತೆಯದ್ದೇ ಭಯ

ಕಳೆದ ಮಾರ್ಚ್ 8ರಂದು ವಿಶ್ವ ಮಹಿಳಾ ದಿನದ ಅಂಗವಾಗಿ ಕರ್ನಾಟಕದಲ್ಲಿ ಮೊದಲ ಸಂಪೂರ್ಣ ....
ಸಂಪೂರ್ಣ ಮಹಿಳಾ ಸಿಬ್ಬಂದಿಯಿರುವ ಬಾಣಸವಾಡಿ ರೈಲು ನಿಲ್ದಾಣ
ಸಂಪೂರ್ಣ ಮಹಿಳಾ ಸಿಬ್ಬಂದಿಯಿರುವ ಬಾಣಸವಾಡಿ ರೈಲು ನಿಲ್ದಾಣ

ಬೆಂಗಳೂರು: ಕಳೆದ ಮಾರ್ಚ್ 8ರಂದು ವಿಶ್ವ ಮಹಿಳಾ ದಿನದ ಅಂಗವಾಗಿ ಕರ್ನಾಟಕದಲ್ಲಿ ಮೊದಲ ಸಂಪೂರ್ಣ ಮಹಿಳಾ ಸಿಬ್ಬಂದಿಯಿರುವ ರೈಲ್ವೆ ನಿಲ್ದಾಣವನ್ನು ಬೆಂಗಳೂರಿನ ಬಾಣಸವಾಡಿ ರೈಲ್ವೆ ನಿಲ್ದಾಣವನ್ನು ಬೆಂಗಳೂರು ರೈಲ್ವೆ ವಲಯ ಆರಂಭಿಸಿತ್ತು. ಅದಾಗಿ ಕೇವಲ 10 ದಿನಗಳು ಕಳೆದಿವೆಯಷ್ಟೆ. ಅಲ್ಲಿನ ಮಹಿಳಾ ನೌಕರರು ತೀವ್ರ ಕಷ್ಟ ಎದುರಿಸುತ್ತಿದ್ದಾರೆ.

ಇದಕ್ಕೆ ಕಾರಣ, ರೈಲ್ವೆ ಪೊಲೀಸ್ ಪಡೆ ಅಥವಾ ಸರ್ಕಾರಿ ರೈಲ್ವೆ ಪೊಲೀಸ್ ಔಟ್ ಪೋಸ್ಟ್ ಇಲ್ಲದಿರುವುದು. ಇಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಖಾಸಗಿ ಭದ್ರತೆ ಇಲ್ಲದಾಗಿದೆ. ದಿನನಿತ್ಯ ಇಲ್ಲಿ ಮದ್ಯಪಾನ ಸೇವಿಸುವವರು ಮತ್ತು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರು ಬರುತ್ತಾರೆ, ಹೀಗಾಗಿ ಇಲ್ಲಿನ ಮಹಿಳಾ ನೌಕರರಿಗೆ ಭದ್ರತೆ ಇಲ್ಲದಂತಾಗಿದೆ.

ಇಲ್ಲಿನ ಮಹಿಳಾ ಸ್ಟೇಷನ್ ಮಾಸ್ಟರ್ ರಾತ್ರಿ ಹೊತ್ತು ತಮ್ಮ ಕ್ಯಾಬಿನ್ ನಲ್ಲಿ ಕುಳಿತು ಕಳೆಯಬೇಕಾದ ಪರಿಸ್ಥಿತಿ, ಏಕೆಂದರೆ ದುಷ್ಕರ್ಮಿಗಳು ಬರುವ ಭಯವಿದೆ. ಬಾಣಸವಾಡಿ ರೈಲು ನಿಲ್ದಾಣದಲ್ಲಿ ಕೆಲಸ ಮಾಡುವುದು ದುಸ್ವಃಪ್ನದಂತೆ ಕಾಡುತ್ತಿದೆ. ಇಲ್ಲಿಗೆ ಬಂದ ಮೇಲೆ ನನಗೆ ಆರೋಗ್ಯ ಸರಿಯಿಲ್ಲದಾಗಿದೆ ಎನ್ನುತ್ತಾರೆ ಮಹಿಳಾ ಸಿಬ್ಬಂದಿ.

ಬಾಣಸವಾಡಿ ರೈಲು ನಿಲ್ದಾಣಕ್ಕೆ ನೀಡಿರುವ ಭದ್ರತೆ ಬಗ್ಗೆ ರೈಲ್ವೆ ಇಲಾಖೆ, ರಾಜ್ಯ ಮತ್ತು ಜಿಆರ್ ಪಿ ಮಧ್ಯೆ ಗೊಂದಲಗಳಿವೆ. ಈ ಹಿಂದೆ ರೈಲ್ವೆ ಪೊಲೀಸ್ ಪಡೆಯನ್ನು ಕಳುಹಿಸಲು ಮಾತುಕತೆ ನಡೆದಿತ್ತು. ದಿನವಿಡೀ ಮಹಿಳಾ ಆರ್ ಪಿಎಫ್ ಸಿಬ್ಬಂದಿ ನಡೆದುಕೊಂಡು ಹೋಗುವುದನ್ನು ನೋಡಿದ್ದೇನೆ ಎನ್ನುತ್ತಾರೆ ರೈಲ್ವೆ ಸಿಬ್ಬಂದಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com