ಬೆಂಗಳೂರು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (ಐಐಎಂ), ಬೆಂಗಳೂರಿನ 43ನೇ ಘಟಿಕೋತ್ಸವದ ಶನಿವಾರ (ಮಾ. 17) ಆಯೋಜನೆಗೊಂಡಿತ್ತು. ಈ ಸಂದರ್ಭದಲ್ಲಿ ಒಟ್ಟು 593 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.
ಪದವೀಧರರಲ್ಲಿ ಒಟ್ಟು ಎಂಟು ಮಂದಿ ಚಿನ್ನದ ಪದಕ ಗಳಿಸಿದ್ದಾರೆ. ಪಿರಮಲ್ ಸಮೂಹದ ಅಧ್ಯಕ್ಷ ಅಜಯ್ ಪಿರಮಲ್ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರಧಾನ ಮಾಡಿದರು.
ಐಐಅಎಂಬಿ ನಿರ್ದೇಶಕ ಜಿ. ರಘುರಾಮ್ ಮಾತನಾಡಿ "ಯುವಕರಲ್ಲಿ ಮೊದಲು ಏನನ್ನಾದರೂ ಸಾಧಿಸುವ ಆಳವಾದ ಬಯಕೆ ಇರಬೇಕು. ಹಾಗೇನಾದರೂ ಇದ್ದಲ್ಲಿ ಅದು ನಿಮ್ಮನ್ನು ಆ ನಿಟ್ಟಿನಲ್ಲಿ ತೊಡಗಿಸಿಕೊಲ್ಳಲು ಪ್ರಚೋದನೆ ನೀಡಿ ನಿಮ್ಮನ್ನು ಮುಂದುವರಿಯುವಂತೆ ಮಾಡಲಿದೆ. ಹಾಗೆ ನಿಮ್ಮ ಕನಸುಗಳನ್ನು ಅನುಸರಿಸಿ ಸಾಧಿಸಿರಿ. ಸಮಾಜಕ್ಕೆ ಅದು ದೊಡ್ಡ ಕೊಡುಗೆಯನ್ನೇ ನೀಡಬಹುದು. " ಎಂದಿದ್ದಾರೆ.
ಕಳೆದ ವರ್ಷ ಐಐಅಎಂಬಿ ಒಟ್ಟು ನಾಲ್ಕು ಅದ್ಯಯನ ಕೇಂದ್ರಗಳನ್ನು ತೆರೆದಿದೆ. ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಕಮ್ಯುನಿಕೇಷನ್, ಭಾರತ-ಜಪಾನ್ ಸ್ಟಡಿ ಸೆಂಟರ್, ಇಸ್ರೇಲ್ ಸೆಂಟರ್ ಮತ್ತು ಟರ್ ಫಾರ್ ಟೀಚಿಂಗ್ ಅಂಡ್ ಲರ್ನಿಂಗ್.ಗಳು ಇದರಲ್ಲಿ ಸೇರಿದೆ ಎಂದು ಅವರು ಹೇಳಿದ್ದಾರೆ.
ಸಮಿತಿಯ ಸದಸ್ಯರಾದ ಎನ್.ಎಸ್. ರಾಘವನ್ ಮಾತನಾಡಿ"ಐಐಎಂ-ಬಿ ನಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಲ್ಲಿ (ಎಕ್ಸಿಕ್ಯುಟಿವ್ ಪೋಸ್ಟ್ ಗ್ರಾಜುಯೇಟ್ ಪ್ರೋಗ್ರಾಂ), ನಲ್ಲಿ ವ್ಯಾಸಂಗ ಮಾಡುತ್ತಿರುವವರಲ್ಲಿ 30% ರಷ್ಟು ಮಹಿಳೆಯರಿದ್ದಾರೆ. ಇದು ನಮಗೆ ಸಂತಸದ ಸಂಗತಿಯಾಗಿದ್ದು ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ನಾವು ಭಾವಿಸುತ್ತೇವೆ ಎಂದರು.