ಕಲಬುರ್ಗಿ:ಜಾತ್ರೆಯ ವೇಳೆ ರಥ ಹರಿದು ಓರ್ವ ಸಾವು
ರಾಜ್ಯ
ಕಲಬುರ್ಗಿ:ಜಾತ್ರೆಯ ವೇಳೆ ರಥ ಹರಿದು ಓರ್ವ ಸಾವು
ಕಲಬುರ್ಗಿಯ ಶಿವಲಿಂಗೇಶ್ವರ ಜಾತ್ರೆಯು ಭೀಕರ ದುರಂತವೊಂದಕ್ಕೆ ಸಾಕ್ಷಿಯಾಗಿದೆ.
ಕಲಬುರ್ಗಿ: ಕಲಬುರ್ಗಿಯ ಶಿವಲಿಂಗೇಶ್ವರ ಜಾತ್ರೆಯು ಭೀಕರ ದುರಂತವೊಂದಕ್ಕೆ ಸಾಕ್ಷಿಯಾಗಿದೆ. ಯುಗಾದಿ ಪ್ರಯುಕ್ತ ನಡೆದಿದ್ದ ಸಂಭ್ರಮದ ಜಾತ್ರಾ ಮಹೋತ್ಸವದಲ್ಲಿ ರಥದ ಚಕ್ರಕ್ಕೆ ಸಿಲುಕಿದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ.
ಕಲಬುರ್ಗಿ ಜಿಲ್ಲೆ ಶಹಬಾದ್ ತಾಲೂಕಿನ ದೇವನ ತೇಗನೂರು ಗ್ರಾಮದಲ್ಲಿ ಈ ದುರ್ಘಟನೆ ಸಂಬವಿಸಿದ್ದು ಮೃತ ದುರ್ದೈವಿಯನ್ನು ಕಿಶನ್ ಎಂದು ಗುರುತಿಸಲಾಗಿದೆ. ಜಾತ್ರೆಯ ವೇಳೆ ರಥ ಎಳೆಯುತ್ತಿರುವ ಸಮಯ ಕಿಶನ್ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದ್ದಾರೆ. ಆ ವೇಳೆ ಮುಂದೆ ಸಾಗಿ ಬರುತ್ತಿದ್ದ ರಥದ ಗಾಲಿಗಳು ಅವರ ಮೇಲೆ ಹರಿದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರರು ಶಹಬಾದ್ ತಾಲೂಕಿನ ತರಿ ತಾಂಡಾದ ’ನಿವಾಸಿಯಾಗಿದ್ದರು.
ಗದಗದಲ್ಲಿ ದುರಂತ
ಗದಗದ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿನಡೆಯುತ್ತಿದ್ದ ಜಾತ್ರೆಯಲ್ಲಿ ಸಹ ದುರಂತ ಸಂಭವಿಸಿದ್ದು ರಥ ಹರಿದ ಪರಿಣಾಮ ಓರ್ವ ವ್ಯಕ್ತಿ ತನ್ನ ಕಾಲು ಕಳೆದುಕೊಂಡಿದ್ದಾರೆ. ರಥ ಎಳೆಯುವ ವೇಳೆ ನೂಕುನುಗ್ಗಲು ಉಂಟಾದ ಕಾರಣ ಮುದಿಯಪ್ಪ ಎನ್ನುವವರ ಮೇಲೆ ರಥ ಹರಿದು ಅವರ ಕಾಲು ಮುರಿದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ