ಸರ್ಕಾರ ಅಧಿಕಾರಿಗಳನ್ನು 9 ದಿನಗಳಲ್ಲೇ ವರ್ಗಾವಣೆ ಮಾಡಬಹುದು: ಬಸವರಾಜ ರಾಯರೆಡ್ಡಿ

ಒಂದು ವೇಳೆ ಸರ್ಕಾರ ಬಯಸಿದರೇ ಒಂಬತ್ತು ದಿನಗಳೊಳಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಬಹುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ...
ಬಸವರಾಜ ರಾಯ ರೆಡ್ಡಿ
ಬಸವರಾಜ ರಾಯ ರೆಡ್ಡಿ
ಕೊಪ್ಪಳ: ಒಂದು ವೇಳೆ ಸರ್ಕಾರ ಬಯಸಿದರೇ ಒಂಬತ್ತು ದಿನಗಳೊಳಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಬಹುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಪದೇ ಪದೇ ವರ್ಗಾವಣೆ ಕುರಿತು ಎದ್ದಿದ್ದ ಚರ್ಚೆ ಸಂಬಂಧ ಪ್ರತಿಕ್ರಿಯಿಸಿರುವ ಅವರು ಸರ್ಕಾರ ಬಯಸಿದರೇ 9 ದಿನಗಳೊಳಗೆ ವರ್ಗಾವಣೆ ಮಾಡಬಹುದು, ಸರ್ಕಾರದ ಆದೇಶವನ್ನು  ಅಧಿಕಾರಿಗಳು ಒಪ್ಪಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಕೊಪ್ಪಳ ಡಿಸಿ ಅನೂಪ್ ಶೆಟ್ಟಿ  ಅವರ ವರ್ಗಾವಣೆಯನ್ನು ಸಿಎಟಿ ತಡೆ ಹಿಡಿದಿದೆ. ಅನೂಪ್ ಶೆಟ್ಟಿ ಅವರನ್ನು 9 ತಿಂಗಳ ಹಿಂದೆ ಕೊಪ್ಪಳಕ್ಕೆ ವರ್ಗಾವಣೆ ಮಾಡಲಾಗಿತ್ತು., ಮರಳು ಮತ್ತು ಲಿಕ್ಕರ್ ಮಾಫಿಯಾ ವಿರುದ್ದ ಅನೂಪ್ ಶೆಟ್ಟಿ ಭಾರೀ ಕೆಲಸ ಮಾಡಿದ್ದರು, ಈ ಸಂಬಂಧ ಸಚಿವರನ್ನು ಪ್ರಶ್ನಿಸಿದಾಗ, ಪೋಸ್ಟಿಂಗ್ ಆದ ಅವಧಿಯೊಳಗೂ ಅಧಿಕಾರಿಗಳನ್ನು ವರ್ಗಾವಣೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.
ಮಾರ್ಚ್ 12 ರಂದು ಅನೂಪ್ ಶೆಟ್ಟಿ ಅವರನ್ನು  ಬೆಂಗಳೂರಿನ  ಗುಪ್ತಚರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಅವಧಿ ಪೂರ್ವ ವರ್ಗಾವಣೆಯನ್ನು ಸಿಎ
ಟಿ ತಡೆ ಹಿಡಿದಿತ್ತು.
ಸಿದ್ದರಾಮಯ್ಯ ಅವರದ್ದು ಬೇಜವಾಬ್ದಾರಿ ಸರ್ಕಾರ, ಪ್ರಾಮಾಣಿಕ  ಅಧಿಕಾರಿಗಳನ್ನು ಪದೇ ಪದೇ ವರ್ಗಾವಣೆ ಮಾಡುತ್ತಿದೆ ಎಂದು ಜೆಡಿಎಸ್ ಮತ್ತು ಬಿಜೆಪಿ ಆರೋಪಿಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com