ನಮ್ಮಮೆಟ್ರೊ ನೌಕರರ ಮುಷ್ಕರ ಬೆದರಿಕೆ: 400 ತರಬೇತಿಗಾರರನ್ನು ಹುದ್ದೆಗೆ ನೇಮಿಸಿದ ಬಿಎಂಆರ್ ಸಿಎಲ್

ಮುಂದಿನ ದಿನಗಳಲ್ಲಿ ಎದುರಾಗುವ ಮೆಟ್ರೋ ನೌಕರರ ಮುಷ್ಕರದಿಂಡಾಗಿ ಸಾರ್ವಜನಿಕ ಮೆಟ್ರೋ ಸೇವೆಗೆ ಯಾವ ಅಡ್ಡಿಗಳಾಗುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿ. ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮುಂದಿನ ದಿನಗಳಲ್ಲಿ ಎದುರಾಗುವ ಮೆಟ್ರೋ ನೌಕರರ ಮುಷ್ಕರದಿಂಡಾಗಿ ಸಾರ್ವಜನಿಕ ಮೆಟ್ರೋ ಸೇವೆಗೆ ಯಾವ ಅಡ್ಡಿಗಳಾಗುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿ. ಹೇಳಿದೆ. ನೌಕರರ ಮುಷ್ಕರದಿಂದಾಗುವ ಅನಾನುಕೂಲವನ್ನು ತಡೆಯುವ ಸಲುವಾಗಿ ಇದಾಗಲೇ ಮೂರು-ನಾಲ್ಕು ತಿಂಗಳ ತರಬೇತಿಗೆ ಒಳಗಾದ ಸುಮಾರು 400  ಮಂದಿಯನ್ನು ನಗರದಲ್ಲಿನ ಎಲ್ಲಾ ಮೆಟ್ರೋ ಕೇಂದ್ರಗಳಲ್ಲಿ ನಿಯೋಜನೆ ಮಾಡಲಾಗುತ್ತಿದೆ. ಅಂತೆಯೇ ನೌಕರರ ಮುಷ್ಕರದ ಅವಧಿಯಲ್ಲಿಯೂ ಬೆಳಿಗ್ಗೆ 5ರಿಂದ ರಾತ್ರಿವರೆಗೆ ಮೆಟ್ರೋ ಸಂಚಾರವಿರಲಿದೆ ಎಂದು ಬಿಎಂಆರ್ ಸಿಲ್ ಆಂತರಿಕ ಮೂಲಗಳು ಹೇಳಿದೆ.
ಮೆಟ್ರೋ ನೌಕರರ ಸಂಘವನ್ನು ಪ್ರತಿನಿಧಿಸುವ ನೌಕರರು ತಮ್ಮ ಬೇಡಿಕೆ ಈಡೇರಿಸದಿದ್ದರೆ ಗುರುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಹೇಳಿದ್ದಾರೆ. ಆದರೆ ಸಂಘಟನೆಯಲ್ಲಿ ಹೊರಗಿನ ಜನರೂ ಸೇರಿದ್ದಾರೆ ಎಂದು ಆರೋಪಿಸಿರುವ ಬಿಎಂಆರ್ ಸಿಲ್ ಅವರ ಬೇಡಿಕೆಗಳ ಈಡೇರಿಸುವ ಮನಸ್ಸು ಮಾಡಿಲ್ಲ. ಸೋಮವಾರದಂದು ಅಸಿಸ್ಟೆಂಟ್ ಲೇಬರ್ ಕಮೀಷನರ್ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯೂ ಸಹ ವಿಫಲಗೊಂಡಿತ್ತು. 
"ನಾವು ಮೂಲ ವೇಳಾಪಟ್ಟಿಯಲ್ಲಿರುವಂತೆಯೇ ರೈಲನ್ನು ಚಾಲನೆ ಮಾಡುತ್ತೇವೆ. ನಮ್ಮಲ್ಲಿ ಸುಮಾರು 80 ತರಬೇತಿ ಹೊಂದಿದ ರೈಲು ಚಾಲಕರಿದ್ದಾರೆ. ಅವರನ್ನು ಈ ಸಮಯದಲ್ಲಿ ಬಳಸಿಕೊಲ್ಳಲಿದ್ದೇವೆ. ಉಳಿದವರು ಮೆಟ್ರೋ ನಿಲ್ದಾಣಗಳನ್ನು ನಿರ್ವಹಿಸುತ್ತಾರೆ. ಇನ್ನು ಬಹುತೇಕ ಚಟುವಟಿಕೆಗಳು ಸ್ವಯಂಚಾಲಿತವಾಗಿರುವ ಕಾರಣ ನಮಗೆ ಅನುಕೂಲಕರವಾಗಿದೆ. ತರಬೇತುದಾರರು ಮೆಟ್ರೋ ನಿಲ್ದಾಣದ ಬಾಗಿಲು ತೆರೆಯುವ , ಮುಚ್ಚುವ ಕೆಲಸವನ್ನಷ್ಟೇ ಮಾಡಬೇಕಾಗುವುದು"  ತುರ್ತು ಪರಿಸ್ಥಿತಿ ಎದುರಿಸಲು ಸಿದ್ದರಿದ್ದೀರಾ ಎಂದು ಕೇಳಲಾದ ಪ್ರಶ್ನೆಗೆ ಮೆಟ್ರೋ ನಿಗಮದ ಅಧಿಕಾರಿಯೊಬ್ಬರು ಈ ಮೇಲಿನಂತೆ ಉತ್ತರಿಸಿದ್ದಾರೆ. 
ನಾವು ಭದ್ರತಾ ಸಿಬ್ಬಂದಿಗಳ ನೆರವನ್ನೂ ಪಡೆದುಕೊಳ್ಳಲಿದ್ದೇವೆ, ತರಬೇತಿಯಲ್ಲಿರುವವರಾರೂ ಮುಷ್ಕರಕ್ಕೆ ಹೋಗುವುದಿಲ್ಲ ಎನ್ನುವುದು ನಮ್ಮ ಖಚಿತ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ.
ತರಬೇತಿ ಪಡೆದ ಹೊಸ ಚಾಲಕರು ಮುಷ್ಕರ ನಿರತ ಸಂಘಟನೆಯ ಭಯವಿಲ್ಲದೆ ಕೆಲಸ ಮಾಡುವಂತಾಗಲು ಪೋಲೀಸರಿಗೆ ಹೆಚ್ಚಿನ ಭದ್ರತೆ ನೀಡುವಂತೆ ಬಿಎಂಆರ್ ಸಿಎಲ್ ಇಂದು ಕೋರಿಕೆ ಸಲ್ಲಿಸುವ ಸಾಧ್ಯತೆ ಇದೆ. ಅಲ್ಲದೆ ನೌಕರರೊಡನೆ ಚರ್ಚೆ ನಡೆಸಲು ಬಿಎಂಆರ್ ಸಿಎಲ್ ಮುಕ್ತವಾಗಿದೆ ಎಂದು ಅಧಿಕಾರಿಗಳು ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com