ಅಲ್ಪಸಂಖ್ಯಾತ ಸ್ಥಾನಮಾನದಿಂದ ಲಿಂಗಾಯತ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭ!

: ಒಂದು ವೇಳೆ ಲಿಂಗಾಯತ ಮತ್ತು ವೀರಶೈವ ಧರ್ಮಗಳಿಗೆ ಅಲ್ಪಸಂಖ್ಯಾತ ಸ್ಥಾನ ಮಾನ ನೀಡಿದ್ದೇ ಆದರೇ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳಿಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಒಂದು ವೇಳೆ ಲಿಂಗಾಯತ ಮತ್ತು ವೀರಶೈವ ಧರ್ಮಗಳಿಗೆ  ಅಲ್ಪಸಂಖ್ಯಾತ ಸ್ಥಾನ ಮಾನ ನೀಡಿದ್ದೇ ಆದರೇ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳಿಗೆ ಅದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.
ಸದ್ಯ ಲಿಂಗಾಯತ ಮತ್ತು ವೀರಶೈವ ಧರ್ಮಗಳು ಹಿಂದುಳಿದ ವರ್ಗಕ್ಕೆ ಸೇರಿವೆ, ಅಲ್ಪಸಂಖ್ಯಾತ ಸ್ಥಾನಮಾನ ದೊರೆತರೇ  ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಸುಮಾರು 25 ಯೋಜನೆಗಳ ಲಾಭ ಇವರಿಗೆ ಸಿಗಲಿದೆ.
ಲಿಂಗಾಯತ ಧರ್ಮದವರು ನಡೆಸುತ್ತಿರು ಶೈಕ್ಷಣಿಕ ಸಂಸ್ಥೆಗಳಿಗೆ ಅನೇಕ ನಿರ್ಬಂಧಗಳಿಂದಗ ವಿನಾಯಿತಿ ದೊರೆಯುವುದರ ಜೊತೆಗೆ, ಈ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಬಯಸುವ ಸಮುದಾಯದ ವಿದ್ಯಾರ್ಥಿಗಳಿಗೆ ಶೇ. 50 ರಷ್ಟು ಮೀಸಲಾತಿ ದೊರೆಯಲಿದೆ, ಕರ್ನಾಟಕ ಲಿಂಗಾಯತ ಎಜುಕೇಷನ್ (ಕೆಎಲ್ ಇ) ಜೆಎಸ್ ಎಸ್, ಹಾಗೂ ಸಿದ್ಧಗಂಗಾ ಮಠಗಳು ಲಿಂಗಾಯತ ಶಿಕ್ಷಣ ಸಂಸ್ಥೆಗಳಾಗಿವೆ.
ಕರ್ನಾಟಕದಲ್ಲಿರುವ ಸುಮಾರು 3/1 ಭಾಗದಷ್ಟು ಶಾಲಾ ಕಾಲೇಜುಗಳು ಲಿಂಗಾಯತರ ಒಡೆತನಕ್ಕೆ ಸೇರಿವೆ, ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಒಮ್ಮೆ ಅಧಿಕೃತವಾಗಿ ಪ್ರಕಟಗೊಂಡರೇ, ಈ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಆರ್ ಟಿ ಇ ನಿಯಮದಿಂದ ಹೊರಗುಳಿಯಲಿವೆ, ಜೊತೆಗೆ ವೃತ್ತಿಪರ ಕೋರ್ಸ್ ಮಾಡುವ ಲಿಂಗಾಯತ ವಿದ್ಯಾರ್ಥಿಗಳಿಗೆ  ಎಂಜಿನೀಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿ ಶೇ. 50ರಷ್ಟು ಮೀಸಲಾತಿ ದೊರೆಯಲಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಸಂಬಂಧ ರಚನೆಯಾಗಿದ್ದ ಕೋರ್ ಕಮಿಟಿ ಸದಸ್ಯ ಎಸ್.ಎಂ ಜಾಮದಾರ್ ಹೇಳಿದ್ದಾರೆ,
2011 ರ ಜವಗಣತಿ ಪ್ರಕಾರ ಕರ್ನಾಟಕದಲ್ಲಿ  ರಾಜ್ಯದ ಒಟ್ಟು ಜನಸಂಖ್ಯೆಯ ಶೇ.1592 ರಷ್ಟು ಲಿಂಗಾಯತ  ಸಮುದಾಯದವರಿದ್ದಾರೆ, ಅದರಲ್ಲಿ ಮುಸ್ಲಿಂ, ಕ್ರಿಶ್ಟಿಯನ್ , ಸಿಖ್  ಜೈನ್, ಪರ್ಸಿಸ್ ಹಾಗೂ ಬುದ್ದಿಸ್ಚ್ ಸೇರಿದಂತೆ ಶೇ. 6ರಷ್ಟು ಅಲ್ಪ ಸಂಖ್ಯಾತ ಸಮುದಾಯ ಮಾತ್ರ  2014 ರಲ್ಲಿ ಸರ್ಕಾರ ನೀಡಿದ ಅಲ್ಪ ಸಂಖ್ಯಾತ ಸ್ಥಾನಮಾನದ ಲಾಭ ಪಡೆಯುತ್ತಿದ್ದಾರೆ, ಈ ಸಮುದಾಯಕ್ಕೆ ವಿವಿಧ ಯೋಜನೆಯಡಿ ವಿಶೇಷ ಅನುದಾನ ಕೂಡ ದೊರೆಯಲಿದೆ, ವಿವಿಧ ಯೋಜನೆಗಳಡಿ ಸರ್ಕಾರ 2017-18ರ ಅವಧಿಯಲ್ಲಿ  2,750 ಕೋಟಿ ರು. ಅನುದಾನ ನೀಡಿದೆ.
ಅಲ್ಪ ಸಂಖ್ಯಾತ ಸಮುದಾಯಗಳಿಗಾಗಿ ಸರ್ಕಾರ  ಸುಮಾರು 25 ವಿವಿಧ ಯೋಜನೆಗಳನ್ನು ರೂಪಿಸಿದೆ, ಶಿಕ್ಷಣದಿಂದ ಹಿಡಿದು ಕೌಶಲ್ಯಾಭಿವೃದ್ಧಿ  ಹಾಗೂ ಸ್ವಯಂ ಉದ್ಯೋಗ ಹಾಗೂ ವಸತಿ ಸೇರಿದಂತೆ ಹಲವು ವಲಯಗಳಲ್ಲಿ ಪ್ರಯೋಜನ ಸಿಗಲಿದೆ, 
ಇನ್ನೂ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ಕುರಿತ ಹೋರಾಟ ಸಂಬಂಧ ಯಾವುದೇ ಬೆಂಬಲ ನೀಡದೇ ತಟಸ್ಥವಾಗಿರಲು ತುಮಕೂರು ಸಿದ್ಧಗಂಗಾ ಮಠ ನಿರ್ಧರಿಸಿದೆ, ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ 111 ವರ್ಷ ವಯಸ್ಸಾಗಿದ್ದು, ಅವರ ಹುಟ್ಟು ಹಬ್ಬದ ವೇಳೆಯಲ್ಲಿ ಎಲ್ಲಾ ಜಾತಿ ನಿರ್ಬಂಧಗಳನ್ನು ಮೀರಿ ಎಲ್ಲರೂ ಒಟ್ಟಾಗಿ ಭಾಗವಹಿಸುತ್ತಾರೆ. ವೀರಶೈವ ಲಿಂಗಾಯತ ಸುಮುದಾಯದವರು ಒಟ್ಟಾಗಿ ಪಾಲ್ಗೋಳ್ಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com