ಉದ್ಯೋಗ ಭಡ್ತಿಗಳಲ್ಲಿ ಕರ್ನಾಟಕ ಕೋಟಾ ಜಾರಿ: ಏಪ್ರಿಲ್ 25ರ ಅಂತಿಮ ಗಡುವು ವಿಧಿಸಿ ಸುಪ್ರೀಂ ಆದೇಶ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯಾಚರಿಸುತ್ತಿರುವ ಸುಮಾರು 20,000 ನೌಕರರನ್ನು ಹಿಂತೆಗೆದುಕೊಳ್ಳಬೇಕು ಜತೆಗೆ ಅಷ್ಟೇ ಸಂಖ್ಯೆಯ ಹೊಸ ನೌಕರರ ನೇಮಕವನ್ನು ಮಾಡಬೇಕು.
ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ
Updated on
ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯಾಚರಿಸುತ್ತಿರುವ ಸುಮಾರು 20,000 ನೌಕರರನ್ನು ಹಿಂತೆಗೆದುಕೊಳ್ಳಬೇಕು ಜತೆಗೆ ಅಷ್ಟೇ ಸಂಖ್ಯೆಯ ಹೊಸ ನೌಕರರ ನೇಮಕವನ್ನು ಮಾಡಬೇಕು. ಏಪ್ರಿಲ್ 25 ರೊಳಗೆಸರ್ಕಾರ ಈ ಆದೇಶ ಜಾರಿಗೆ ತರಬೇಕೆಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ. 
ಫೆಬ್ರವರಿ 9,, 2017ರಂದು ತಾನು ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಇನ್ನೊಂದು ತಿಂಗಳೊಳಗೆ ಜಾರಿಗೆ ತರಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ. 1978ರಿಂಡ ಇಲ್ಲಿಯವರೆಗೆ ನೇಮಕವಾದ ಎಸ್ಸಿ / ಎಸ್ಟಿ ಉದ್ಯೋಗಿಗಳಿಗೆ ಹಿರಿತನದ ಆಧಾರದಲ್ಲಿ ಭಡ್ತಿ/ಹಿಂಭಡ್ತಿ  ಕೊಡಿಸುವುದು ಸಹ ಇದೇ ಆದೇಶದಲ್ಲಿ ಸೇರಿದೆ.
ರಾಜ್ಯ ಸರ್ಕಾರವು ತನ್ನ ಆದೇಶವನ್ನು ಹೇಗೆ ಕಾರ್ಯಗತಗೊಳಿಸುತ್ತದೆ ಎನ್ನುವುದನ್ನು ನ್ಯಾಯಾಲಯದಲ್ಲಿ ಪ್ರತ್ಯಕ್ಷವಾಗಿ ಪ್ರಸ್ತುತಪಡಿಸುವಂತೆ ನ್ಯಾಯಾಲಯ ರಾಜ್ಯದ ಮುಖ್ಯ ಕಾರ್ಯದರ್ಶಿಯವರನ್ನು ಕೇಳಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ರಾಜ್ಯ ಸರ್ಕಾರ ಅನುಷ್ಠಾನ ಗೊಳಿಸಿರದ ಸಂಬಂಧ  ಎಎಚ್ ಐಎಂಎಸ್ ಎ(ಅಲ್ಪ ಸಂಖ್ಯಾತ ಹಿಂದುಳಿದ ಸಮುದಾಯ) ಅಧ್ಯಕ್ಷ ಎಂ. ನಾಗರಾಜ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿದೆ. 
ಆದೇಶ ಜಾರಿಗೊಳಿಸ್ದ ಪಕ್ಷದಲ್ಲಿ ರಾಜ್ಯ ಸರ್ಕಾರದ 63 ವಿವಿಧ ಇಲಾಖೆಗಳಲ್ಲಿ ಹಿಂದುಳಿದ ಮತ್ತು ಸಾಮಾನ್ಯ ವರ್ಗಗಳಿಗೆ ಸೇರಿದ ಸುಮಾರು 20,000 ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ನೇಮಕ ಮಾಡಬೇಕಾಗುವುದು ಹಾಗೆಯೇ ಅದೇ ಸಂಖ್ಯೆಯ  ಎಸ್ಸಿ / ಎಸ್ಟಿ ನೌಕರರರನ್ನು ಹಿಂಪಡೆಯಬೇಕಾಗುತ್ತದೆ. ಚುನಾವಣೆ ಹೊಸ್ತಿಲಲ್ಲಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆ ಇಲ್ಲದೆ ಇಲ್ಲ.
ಆದರೆ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಅಡ್ವೊಕೇಟ್ ಜನರಲ್ ಮಧುಸೂದನ್ ಆರ್. ನಾಯ್ಕ್ " ಆದೇಶ ಜಾರಿಗೆ ನಾವು ಸಿದ್ದರಿದ್ದೇವೆ. ನಾವು ನಾಲ್ಕು ವಾರಗಳ ಕಾಲಾವಕಾಶವನ್ನು ನೀಡುವಂತೆ ನ್ಯಾಯಾಲಯಕ್ಕೆ  ಮನವಿ ಮಾಡಿದ್ದೆವು. ಅದೇ ರೀತಿ ನ್ಯಾಯಾಲಯ ಏ.25ರವರೀಗೆ ಕಾಲಾವಕಾಶ ನೀಡಿದೆ" ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com