ಬೆಂಗಳೂರಿನಿಂದ ಉತ್ತರ ಕೊರಿಯಾ ಪ್ರಯಾಣಕ್ಕೆ ವಿದ್ಯಾರ್ಥಿಗೆ ಓಲಾ ಆಫರ್: ಟ್ವಿಟ್ಟರ್ ನಲ್ಲಿ ಮಂಗಳಾರತಿ

ಓಲಾ ಆ್ಯಪ್ ಮೂಲಕ ಉತ್ತರ ಕೊರಿಯಾಗೆ ಕ್ಯಾಬ್ ಬುಕ್ ಮಾಡುವಲ್ಲಿ ಬೆಂಗಳೂರಿನ 21 ವರ್ಷದ ವಿದ್ಯಾರ್ಥಿ ಯಶಸ್ವಿಯಾಗಿದ್ದಾನೆ, ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಓಲಾ ಆ್ಯಪ್ ಮೂಲಕ ಉತ್ತರ ಕೊರಿಯಾಗೆ ಕ್ಯಾಬ್ ಬುಕ್ ಮಾಡುವಲ್ಲಿ ಬೆಂಗಳೂರಿನ 21 ವರ್ಷದ ವಿದ್ಯಾರ್ಥಿ ಯಶಸ್ವಿಯಾಗಿದ್ದಾನೆ, ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದು, ಈ ವಿಧಾನ ಅನುಸರಿಸಿದ ಹಲವು ಮಂದಿ ದೂರದ ಹಲವು ದೇಶಗಳಿಗೆ ಕ್ಯಾಬ್ ಬುಕ್ ಮಾಡಿದ್ದಾರೆ.
ಮೊದಲು ಬೆಂಗಳೂರು ವಿದ್ಯಾರ್ಥಿ ಪ್ರಶಾಂತ್ ಶಾಯ್ ಎಂಬಾತ ಉತ್ತರ ಕೊರಿಯಾಗೆ ಕ್ಯಾಬ್ ಬುಕ್ ಮಾಡಿದ್ದಾನೆ, ಆತನಿಗೆ ಆಶ್ಚರ್ಯವಾಗುವಂತೆ ಚಾಲಕನನ್ನು ನೀಡಿದ ಓಲಾ 13,840 ಕಿಮೀ ಪ್ರಯಾಣಕ್ಕೆ  1.4 ಲಕ್ಷ ದರ ವಿಧಿಸಿದ್ದು,  ಐದು ದಿನಗಳ ಪ್ರಯಾಣ ಎಂದು ಹೇಳಿದೆ. ಜೊತೆಗೆ ಓಲಾ ಬುಕ್ಕಿಂಗ್ ದೃಡಿಕರಣವಾಗಿರುವುದನ್ನು ಪ್ರಶಾಂತ್ ಟ್ವಿಟ್ಟರ್ ನಲ್ಲಿ ಹಾಕಿದ್ದು ವೈರಲ್ ಆಗಿದೆ.
ಇನ್ನೂ ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಓಲಾ,  ಚಂದ್ರನ ಮೇಲೆ ಶೂಟ್ ಮಾಡಲು ಬಯಸುತ್ತಾರೆ ಇದು ಸಾಧ್ಯವೇ ಎಂದು ಕೇಳಿದೆ. ಜೊತೆಗೆ ಈ ಪ್ರಕರಣದಲ್ಲಿ ನೀವು ಯಾವಾಗಲೂ ಬೇರೆ ದೇಶಕ್ಕೆ ಹೋಗಬೇಕು ಎಂದರೇ ವಿಮಾನದಲ್ಲಿ ಪ್ರಯಾಣಿಸಬೇಕು ಎಂದು ಓಲಾ ತನ್ನ ಟ್ವೀಟ್ ನಲ್ಲಿ ಹೇಳಿದೆ. ಉತ್ತರ ಕೊರಿಯಾ ಸದಾ ಸುದ್ದಿಯಲ್ಲಿರುವ ಕಾರಣ ನಾನು ಆ ದೇಶವನ್ನು ಆಯ್ಕೆ ಮಾಡಿದೆ ಎಂದು ಪ್ರಶಾಂತ್ ಹೇಳಿದ್ದಾರೆ.
ಗೂಗಲ್ ಮ್ಯಾಪ್ ಬದಲಾಗಿ ನಾನು ಓಲಾ ಆ್ಯಪ್ ತೆರೆದೆ. ಅದರಲ್ಲಿ ಉತ್ತರ ಕೊರಿಯಾದಿಂದ ದಕ್ಷಿಣ ಕೊರಿಯಾಗೆ ರಸ್ತೆ ಸಂಪರ್ಕದ ಬಗ್ಗೆ ಚೆಕ್ ಮಾಡುತ್ತಿರುವಾಗ ಅದರಲ್ಲಿ ಕ್ಯಾಬ್ ಬುಕ್ ಮಾಡುವ ಅಪ್ಷನ್ ಬಂತು. ಇದರಿಂದ ಆಶ್ಚರ್ಯಗೊಂಡ ನಾನು ಇದು ಸಾಧ್ಯವೇ ಎಂದು ನನ್ನನ್ನು ನಾನು ಪ್ರಶ್ನಿಸಿಕೊಂಡೆ.
ಪ್ರಶಾಂತ್ ಟ್ವೀಟ್ ವೈರಲ್ ಆದ  ನಂತರ, ಬುಕ್ಕಿಂಗ್ ರದ್ದುಗೊಳಿಸಿದ್ದಕ್ಕೆ ಶುಲ್ಕ ವಿಧಿಸಲಾಗಿತ್ತು, ಹಲವು ಓಲಾ ಬಳಕೆದಾರರು ವಿದೇಶಗಳಿಗೆ ಓಲಾ ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸಿದ್ದರು, ಬುಕ್ಕಿಂಗ್ ಕನಫರ್ಮ್ ಮಾಡಿದ್ದ ಓಲಾ ರದ್ದುಗೊಳಿಸಲು ಶುಲ್ಕ ನೀಡಬೇಕೆಂದು ಹೇಳಿತು. ಕ್ಯಾಬ್ ಬುಕ್ ಮಾಡುವುದು ಪ್ರಪಂಚದಲ್ಲಿ ಬೇರೆ ಬೇರೆ ರೀತಿ ಇರುತ್ತದೆ,  ಅಂಡಮಾನ್ ನಿಕೋಬಾರ್, ದುಬೈ ಮತ್ತು ಆಸ್ಟ್ರೇಲಿಯಾಗಳಿಗೆ ಬುಕ್ಕಿಂಗ್ ಮಾಡಿರುಪುದನ್ನು ಆನ್ ಲೈನ್ ನಲ್ಲಿ ಶೇರ್ ಮಾಡಿದ್ದರು. 
ನಾನು ಬೆಂಗಳೂರಿನಿಂದ ಕೌಲಲಾಂಪುರಕ್ಕೆ ಕ್ಯಾಬ್ ಬುಕ್ ಮಾಡಲು ಸಾಧ್ಯವಾಯಿತು, ಆದರೇ ಇಲ್ಲಿಂದ 12 ಕಿಮೀ ದೂರದಲ್ಲಿರುವ ನನ್ನ ಮನೆಗೆ ಕ್ಯಾಬ್ ಬುಕ್ ಮಾಡಲು ಮಾತ್ರ ಸಾಧ್ಯವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 
ಬೆಂಗಳೂರಿನಿಂದ ಇತರ ಪ್ರದೇಶಗಳಿಗೆ ತೆರಳಲು ಉಂಟಾಗುವ ಶುಲ್ಕದ ವಿವಿರ ಹಿಗೀದೆ,ಉತ್ತರ ಪ್ರದೇಶದಿಂದ ಅಂಡಮಾನ್ ನಿಕೋಬಾರ್ ಗೆ 67,807 ರು.ಮುಂಬಯಿಯಿಂದ ದುಬೈಗೆ 54.662 ಮತ್ತು ಬೆಂಗಳೂರಿನಿಂದ ಸಿಡ್ನಿಗೆ 3,04 789 ರು. ಆಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com