ಅನುವಂಶಿಕ ರೋಗಿಗಳಿಗೆ ಆರೋಗ್ಯ ವಿಮೆ ಸೌಲಭ್ಯಗಳನ್ನು ತಿರಸ್ಕರಿಸುವಂತಿಲ್ಲ, ವಿಮಾ ಸಂಸ್ಥೆಗಳಿಗೆ ಐಆರ್ ಡಿಎಐ ಸೂಚನೆ

ಅನುವಂಶಿಕ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ವಿಮಾ ಸಂಸ್ಥೆಗಳು ’ವಂಶಪಾರಂಪರ್ಯ ರೋಗ’ದ ಕಾರಣಕ್ಕಾಗಿ ವಿಮಾ ಪರಿಹಾರವನ್ನು ನಿರಾಕರಿಸುವುಅಂತಿಲ್ಲ
ಐಆರ್ಡಿಎ
ಐಆರ್ಡಿಎ
ಬೆಂಗಳೂರು: ಅನುವಂಶಿಕ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ವಿಮಾ ಸಂಸ್ಥೆಗಳು ’ವಂಶಪಾರಂಪರ್ಯ ರೋಗ’ದ ಕಾರಣಕ್ಕಾಗಿ ವಿಮಾ ಪರಿಹಾರವನ್ನು ನಿರಾಕರಿಸುವುಅಂತಿಲ್ಲ ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎ) ಆದೇಶ ನೀಡಿದೆ.
ಪ್ರಾಧಿಕಾರವು ದೇಶದ ಎಲ್ಲಾ ಜೀವ ವಿಮಾ ಹಾಗೂ ಸಾಮಾನ್ಯ ವಿಮಾ ಸಂಸ್ಥೆಗಳಿಗೆ ಈ ಆದೇಶವಿರುವ ಪತ್ರವನ್ನು ಕಳಿಸಿದೆ. ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಹಾಗೂ ಜೈ ಪ್ರಕಾಶ್ ಅವರ ನಡುವಿನ ಪ್ರಕರಣ ಸಂಬಂಧ ದೆಹಲಿ ಹೈಕೋರ್ಟ್ ತೀಪ್ರನ್ನು ಉಲ್ಲೇಖಿಸಿದ್ದು ವಂಶ ಪಾರಂಪರ್ಯ ರೋಗಗಳನ್ನು ವಿಮಾ ಪಾಲಿಸಿ ಷರತ್ತಿನಿಂದ ಹೊರಗಿಡುವ ನಿಯಮ ತಾರತಮ್ಯಕ್ಕೆ ಕಾರಣವಾಗುತ್ತಿದೆ. ಇದು ಭಾರತದ ಸಂವಿಧಾನದ 14 ನೇ ವಿಧಿಯ ಉಲ್ಲಂಘನೆಯಾಗಿದೆ. ಎಂದು ಹೇಳಿದ್ದಾರೆ.
ಐಆರ್ಡಿಎ ದೇಶದ ವಿಮಾ ಸಂಸ್ಥೆಗಳನ್ನು ನಿಯಂತ್ರಿಸುವ ಹಾಗೂ ಉತ್ತೇಜಿಸುವ ಸ್ವಾಯತ್ತ, ಶಾಸನಬದ್ಧ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
ಬೆಂಗಳೂರಿನ ತಲಸ್ಸೆಮಿಯಾ ಮತ್ತು ಸಿಕಲ್ ಸೆಲ್ ಸೊಸೈಟಿಯ ಸದಸ್ಯ,ಗಗನ್ ದೀಪ್ ಚಂದೋಕ್ "ಐಆರ್ಡಿಎ ಪ್ರಕಾರ,ತಲಸ್ಸೆಮಿಯಾ, ಹಿಮೋಫೀಲಿಯಾ, ರಕ್ತದ ಖಾಯಿಲೆಗಳು, ಸ್ನಾಯು ಸಂಬಂಧಿ ರೋಗಗಳು-ಯಾವುದೇ ಅನುವಂಶಿಕ ರೋಗಗಳು ಜೀವ ವಿಮಾ ಪಾಲಿಸಿ ಅಥವಾ ಆರೋಗ್ಯ ಪಾಲಿಸಿಯಡಿಯಲ್ಲಿ ಬರುತ್ತದೆ. ಆಗಬಹುದಾದ ವಂಚನೆಯನ್ನು ತಡೆಯುವ ಸಲುವಾಗಿ ಜೀವ ವಿಮಾ ಕಂಪನಿಗಳು ಮತ್ತು ಆರೋಗ್ಯ ವಿಮಾ ಕಂಪೆನಿಗಳು ಈ ಹಿಂದೆ ಅನುವಂಶಿಕ ಆರೋಗ್ಯ ಸ್ಥಿತಿಯನ್ನು ಷರತ್ತು ವಿಧಿಸುವ ಮೂಲಕ ವಿಮಾ ಸೌಲಭ್ಯದಿಂದ ಹೊರಗಿತ್ಟಿದ್ದವು." ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
"ಇತ್ತೀಚಿನವರೆಗೂ ಐಆರ್ಡಿಎ ವಿಮಾ ಸಂಸ್ಥೆಗಳು ನಿಯಮಾನುಸಾರ ಕೆಲಸ ಮಾಡುತ್ತಿದೆಯೆ ಎನ್ನುವುದನ್ನು ಪರಿಶೀಲಿಸಿರಲಿಲ್ಲ. ನಾನೊಮ್ಮೆ ಎಲ್ ಐಸಿ ಗೆ ಕರೆ ಮಾಡಿ ಅನುವಂಶಿಕ ರೋಗಗಳಿಗೆ ಜೀವವಿಮಾ ಸೌಲಭ್ಯ ಹೊಂದಬಹುದೆ ಎಂದು ಕೇಳಿದಾಗ ಅವರಿಗೆ ಏನು ಹೇಳುವುದಕ್ಕೂ ತೋಚದೆ ತಬ್ಬಿಬ್ಬಾಗಿದ್ದರು" ಗಗನ್ ದೀಪ್ ಹೇಳಿದರು.
ಆರ್ಗನೈಸೇಷನ್ ಆಫ್ ರೇರ್ ಡಿಸೀಸಸ್ ಇನ್ ಇಂಡಿಯಾ ಸ್ಥಾಪಕರಾದ ಪ್ರಸನ್ನ ಶಿರೋಲ್ "ಅಪರೂಪದ ರೋಗದಿಂದ ಬಳಲುವ ಹತ್ತು ಕಿಲೋ ತೂಕದ ಮಗುವೊಂದರ ಔಷಧಿಗಾಗಿ 30 ಲಕ್ಷ ರೂ. ವ್ಯವವಾಗುತ್ತದೆ. ಇದು ಕೋಟಿಗೆ ತಲುಪಲು ಸಾಧ್ಯವಿದೆ. ಇದಕ್ಕಾಗಿ ವಿಮಾ ಪ್ರೀಮಿಯಂ ಹೆಚ್ಚಳವಾಗುವುದು ಸಾಧ್ಯವೆ? ಇದು ಎಲ್ಲಾ ವರ್ಗದ ಜನರಿಗೆ ಸಿಗುತ್ತದೆಯೆ ಎನ್ನುವುದನ್ನು ಎಲ್ಲಾ ವಿಮಾ ಸಂಸ್ಥೆಯ ಅಧಿಕಾರಿಗಳೊಡನೆ ಚರ್ಚಿಸಬೇಕು" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com